Doddabalapura: ಯುವಕನ ಹತ್ಯೆ ಪ್ರಕರಣ | ಪ್ರಮುಖ ಆರೋಪಿಯ ಎನ್ ಕೌಂಟರ್ ಸತ್ಯಕ್ಕೆ ದೂರವಾದದು | ಗ್ರಾಮಾಂತರ ಠಾಣೆ ಪಿಐ ಸಾಧಿಕ್ ಪಾಷಾ ಸ್ಪಷ್ಟನೆ...!

Doddabalapura: ಯುವಕನ ಹತ್ಯೆ ಪ್ರಕರಣ | ಪ್ರಮುಖ ಆರೋಪಿಯ ಎನ್ ಕೌಂಟರ್ ಸತ್ಯಕ್ಕೆ ದೂರವಾದದು | ಗ್ರಾಮಾಂತರ ಠಾಣೆ ಪಿಐ ಸಾಧಿಕ್ ಪಾಷಾ ಸ್ಪಷ್ಟನೆ...!



 ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿಯ ನವೋದಯ ಶಾಲೆ ಸಮೀಪ ನಡೆದಿದ್ದ ಯುವಕನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬುಧವಾರ ಮಧ್ಯಾಹ್ನ ಎನ್ ಕೌಂಟರ್ ಮಾಡಲಾಗಿದೆ ಎಂಬ ಸುದ್ದಿಯನ್ನು ಪೊಲೀಸರು ತಳ್ಳಿಹಾಕಿದ್ದಾರೆ.


ಪ್ರಕರಣದ ಎ1 ಆರೋಪಿ ನರಸಿಂಹಮೂರ್ತಿ ಅಲಿಯಾಸ್‌ ಮಿಟ್ಟೆ ಎಂಬಾತನನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಎನ್ ಕೌಂಟರ್ ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿತ್ತು.


ಎನ್ ಕೌಂಟರ್ ಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿತು.‌ ಈ ಕುರಿತ ಸುದ್ದಿಗೆ ಸ್ಪಷ್ಟೀಕರಣ ನೀಡಿದ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಅವರು, ಎನ್ ಕೌಂಟರ್ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ.‌ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.


ಮೇ 10 ರಂದು ಬಾಶೆಟ್ಟಿಹಳ್ಳಿ‌ ಸಮೀಪದ ನವೋದಯ ಶಾಲೆಯ ಬಳಿ ಹುಸ್ಕೂರು ನಿವಾಸಿ

ಹೇಮಂತಗೌಡ(29) ಎಂಬುವರನ್ನು ಆರೋಪಿ‌ ನರಸಿಂಹಮೂರ್ತಿ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. 


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿತ್ತು.

Comments