ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ರೈತರು | ರೈತ ಮುಖಂಡ ನಾರಾಯಣ ರೆಡ್ಡಿ ಆಕ್ರೋಶ..!!

 ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ರೈತರು | ರೈತ ಮುಖಂಡ ನಾರಾಯಣ ರೆಡ್ಡಿ ಆಕ್ರೋಶ..!!


ನೆಲಮಂಗಲ ತಾಲ್ಲೂಕಿನ ಮಕೇನಹಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅನುಭವದಲ್ಲಿರುವ ರೈತರು ಪಹಣಿ,ಖಾತಾ ಮಿಟೇಷನ್ ಎಲ್ಲಾ ಇದ್ದು ಪೋಡಿ ಮಾಡಲು ಅರ್ಜಿ ಕೊಟ್ಟು ಸುಸ್ತಾಗಿರುವ ರೈತರು 


ಜಮೀನಿನ ಪಕ್ಕದಲ್ಲಿ ಗಾಣಿಗರಿಕೆಕೆ ಪರ್ಮಿಷನ್ ಕೊಡ್ತಾರೆ ಆದ್ರೆ ನಮ್ಮ ಅಹವಾಲುಗಳಿಗೆ ಸ್ಪಂದಿಸೋದಿಲ್ಲ..!!ಅಧಿಕಾರಿಗಳನ್ನ ಕೇಳಿದರೆ ನಿಮ್ಮದು ಸರ್ಟಿಫೈ ಕಾಫೀ ಇಲ್ಲಾ ಅಂತಾರೆ ಉದ್ದೇಶಪೂರ್ವಕವಾಗಿ ದಾಖಲಾತಿಗಳನ್ನ ನಾಶಮಾಡಿದ್ದಾರೆ, ಒಂದು ತಿಂಗಳ ಹಿಂದೆಯೂ ಕೂಡ ಇದೇ ರೀತಿಯ ಆಶ್ವಾಸನೆ ಕೊಟ್ಟಿದ್ದರು. ಆದರೆ ಇವತ್ತು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇನ್ನ ಒಂದು ವಾರ ಕಾಲಾವಕಾಶ ನೀಡಿದ್ದೇವೆ ಒಂದು ವಾರದಲ್ಲಿ ಮಾಡಿದೆ ಹೋದರೆ ಡಿಸಿ ಕಚೇರಿ ಮುಂದೆಯೇ ಶಾಮಿಯಾನ ಹಾಕಿ ಹಸು ಕುರಿ ಎಲ್ಲವನ್ನು ಇಲ್ಲೇ ತಂದು ಪ್ರತಿಭಟನೆ ಮಾಡ್ತೇವೆ ಎಂದು ರೈಸ್ ಸಂಘದ ರಾಜ್ಯ ಅಧ್ಯಕ್ಷರು ಆದ ನಾರಾಯಣ ರೆಡ್ಡಿ ಎಚ್ಚರಿಕೆ ನೀಡಿದರು.





2015ರಲ್ಲಿ ಗಣಿಗೆ ಗಣಿಗಾರಿಕೆ ಮಾಡುತ್ತಿದ್ದ ದುಃಖ ಮಾಲೀಕರು ಓಡಾಟ ಮಾಡಲು ಕ್ರಷರ್ನ ಕೂರಿಸಿಕೊಳ್ಳಲು ಅನುಮತಿಗೆಂದು ರೈತರನ್ನು ಕೇಳಿ ಜಾಗಕ್ಕೆ ಬರ್ತಾರೆ ವರ್ಷ ಬಾಡಿಗೆ ನಾ ನೀಡುತ್ತೇವೆ ಎಂದು ಅಗ್ರಿಮೆಂಟ್ ಮಾಡಿ ಜಮೀನಿಗೆ ಬರ್ತಾರೆ ನಂತರ ಎಲ್ಲ ದಾಖಲೆಗಳು ರೈತರ ಹೆಸರಿನಲ್ಲಿ ಇರುತ್ತದೆ, ಆದರೆ ಈಗ ಜಮೀನಿನ ದಾಖಲೆ ಸರ್ಕಾರದ ಬಳಿ ಇಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ದಾಖಲಾತಿಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ರೈತರದ್ದ, ಅಧಿಕಾರಿಗಳದ್ದ.?ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ರೈತರು ಅಧಿಕಾರಿಗಳಿಗೆ ಒಂದು ವಾರ ಟೈಮ್ ಕೊಡ್ತೇವೆ ಇಲ್ಲಾ ಅಂದ್ರೆ ನಿರಂತರ ಹೋರಾಟ ಮಾಡ್ತೆವೆ ಕಿಶನ್ ರೈತರ ಪರ ವಾದ ಮಾಡುತ್ತಿರುವ ವಕೀಲರು ತಿಳಿಸಿದರು.

Comments