ಬಾಲ್ಕನಿಯಿಂದ ಮಗು ಕೆಳಗೆ ಬಿದ್ದ ಬದುಕಿದರೂ ನಿಲ್ಲದ ಟೀಕೆ | ಟ್ರೋಲ್​ಗಳ ಹಾವಳಿಗೆ ಬೇಸತ್ತು ಸಾವಿಗೆ ಶರಣಾದ ತಾಯಿ..|

 ಬಾಲ್ಕನಿಯಿಂದ ಮಗು ಕೆಳಗೆ ಬಿದ್ದ ಬದುಕಿದರೂ ನಿಲ್ಲದ ಟೀಕೆ  |  ಟ್ರೋಲ್​ಗಳ ಹಾವಳಿಗೆ ಬೇಸತ್ತು ಸಾವಿಗೆ ಶರಣಾದ ತಾಯಿ..| 





ಚೆನ್ನೈ: ಮೂರು ವಾರಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಅಪಾರ್ಟ್​ಮೆಂಟ್​ನ ವಿಂಡೋ ಪೋರ್ಚ್​ ಮೇಲೆ ಬಿದ್ದಿದ್ದ ಮಗುವನ್ನು ರಕ್ಷಣೆ ಮಾಡಲಾಗಿತ್ತು. ಬಾಲ್ಕನಿಯಲ್ಲಿ ನಿಂತು ಮಗುವಿಗೆ ಹಾಲುಣಿಸುವಾಗ ತಾಯಿಯ ಕೈನಿಂದ ಜಾರಿ ಮಗು ವಿಂಡೋ ಪೋರ್ಚ್​ ಮೇಲೆ ಬಿದ್ದಿತ್ತು.




ಯಾವುದೇ ಅಪಾಯವಿಲ್ಲದೆ ಮಗು ಬಚಾವಾದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಮಾಡಿದ ಕಾಮೆಂಟ್​ ಹಾಗೂ ಟ್ರೋಲ್​ಗಳಿಂದ ಬೇಸತ್ತು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಚೆನ್ನೈನಲ್ಲಿ ನಡೆದಿದೆ.





ಮೃತ ತಾಯಿಯನ್ನು ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕೊಯಮತ್ತೂರಿನ ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ರಮ್ಯಾರಮ್ಯಾ (33) ಎಂದು ಗುರುತಿಸಲಾಗಿದೆ. ಈಕೆ ತಿರುವರೂರ್​ ಮೂಲದ ವೆಂಕಟೇಶ್​ ಎಂಬುವರ ಪತ್ನಿ. ಖಿನ್ನತೆಯಿಂದ ಬಳಲುತ್ತಿದ್ದ ಅವರು ಐಟಿ ಕಂಪನಿಯ ಉದ್ಯೋಗಿಯಾಗಿದ್ದರು.




ಏಪ್ರಿಲ್ 28 ರಂದು ರಮ್ಯಾ ಅವರು ತಮ್ಮ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಮಗುವಿಗೆ ಹಾಲುಣಿಸುತ್ತಿದ್ದಾಗ ಮಗು ಕೈಯಿಂದ ಜಾರಿ ಬಿದ್ದಿತ್ತು. ಅವಡಿ ಸಮೀಪದ ತಿರುಮುಲ್ಲವಾಯಲ್‌ನಲ್ಲಿರುವ ವಿಜಿಎನ್ ಸ್ಟಾಫರ್ಡ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿತ್ತು. ಮಗು 15 ನಿಮಿಷಗಳ ಕಾಲ ಮೊದಲ ಮಹಡಿಯ ವಿಂಡೋ ಪೋರ್ಚ್​ ಮೇಲೆ ಸಿಲುಕಿಕೊಂಡಿತು. ನೆಲಕ್ಕೆ ಬೀಳುವ ಅಪಾಯವಿದ್ದಂತೆ ಕಂಡರೂ, ಘಟನೆಯನ್ನು ನೋಡಿದ ನೆರೆಹೊರೆಯವರು ತಕ್ಷಣ ಛಾವಣಿಯ ಮೇಲೆ ಹತ್ತಿ ಮಗುವನ್ನು ರಕ್ಷಣೆ ಮಾಡಿದ್ದರು. ವಿಂಡೋ ಪೋರ್ಚ್​ ಮೇಲೆ ಬಿದ್ದಿದ್ದರೂ, ಮಗುವಿಗೆ ಯಾವುದೇ ಗಾಯಗಳಾಗಿರಲಿಲ್ಲ.



ಮಗುವಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ರಮ್ಯಾ ಮೇಲೆ ಆನ್‌ಲೈನ್‌ನಲ್ಲಿ ತೀವ್ರ ದಾಳಿ ನಡೆದಿತ್ತು. ಸಂಬಂಧಿಕರ ಆರೋಪದಿಂದ ಕುಗ್ಗಿ ಹೋಗಿದ್ದ ರಮ್ಯಾ ಖಿನ್ನತೆಗೆ ಜಾರಿ ಚಿಕಿತ್ಸೆ ಪಡೆಯುತ್ತಿದ್ದಳು. ರಮ್ಯಾ ಅವರು ತನ್ನಿಬ್ಬರು ಮಕ್ಕಳೊಂದಿಗೆ ಎರಡು ವಾರಗಳ ಹಿಂದೆ ಮೆಟ್ಟುಪಾಳ್ಯಂ ಬಳಿಯ ಕರಮಡೈನಲ್ಲಿರುವ ಅವರ ಮನೆಗೆ ಮರಳಿದ್ದರು. ಈ ವೇಳೆ ರಮ್ಯಾ ಪಾಲಕರು ಮತ್ತು ಪತಿ ವೆಂಕಟೇಶ್ ಮದುವೆ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ ರಮ್ಯಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಂಪತಿಗೆ ಏಳು ತಿಂಗಳ ಹೆಣ್ಣು ಮಗುವಿನ ಜೊತೆಗೆ ಐದು ವರ್ಷದ ಮಗನೂ ಇದ್ದಾನೆ.            




ಇನ್ನೂ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಮಗುವಿನ ಬಗ್ಗೆ ಅಷ್ಟೊಂದು ತಾತ್ಸಾರ ಇರುವಾಗ ಏಕೆ ಜನ್ಮ ನೀಡಬೇಕಿತ್ತು? ನೀನು ನಿಜವಾದ ತಾಯಿಯೇ? ಮಗುವನ್ನು ನೋಡಿಕೊಳ್ಳಲೂ ಆಗುತ್ತಿಲ್ಲವೇ? ಎಂದು ಟ್ರೋಲ್ ಮಾಡಿದ್ದರು. ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ರಮ್ಯಾ ಪ್ರಾಣ ಬಿಟ್ಟಿದ್ದಾರೆ. ಟ್ರೋಲ್‌ಗಳಿಂದ ತಾಯಿಯ ಪ್ರಾಣ ಹೋಗಿದೆ ಎಂದು ಅನೇಕು ಟ್ರೋಲಿಗರ ವಿರುದ್ಧ ಕಿಡಿಕಾರಿದ್ದಾರೆ.

Comments