ಜಿಲ್ಲಾಧಿಕಾರಿ ಹೆಸರು ಬಳಸಿದ ಅಯ್ನತಿ ವ್ಯಕ್ತಿ |ಪೊಲೀಸ್ ಅಧಿಕಾರಿಗಳಿಗೆ ಹಣಕ್ಕೆ ಡಿಮ್ಯಾಂಡ್ |
ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಶಿವಶಂಕರ್.ಎನ್ ಅವರ ಹೆಸರಲ್ಲಿ ಹಣಕ್ಕೆ ಪೋಲಿಸ್ ಅಧಿಕಾರಿಗಳ ಸಮೀಪ ಡಿಮ್ಯಾಂಡ್ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ವ್ಯಾಟ್ಸ್ ಆಪ್ ನಲ್ಲಿ ಜಿಲ್ಲಾಧಿಕಾರಿ ಶಿವಶಂಕರ್ ಪೋಟೋ ಬಳಸಿ ಒಂದು ಯೋಜನೆಗೆ ಹಣದ ಅವಶ್ಯಕತೆ ಇದೆ ಬೇಗ ಒಂದು ನಂಬರ್ ಗೆ ಹಾಕಿ ಎಂದು ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ.
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪೋಲಿಸ್ ಇನ್ಸ್ಪೆಕ್ಟರ್ ಪ್ರಶಾಂತ್, ಚನ್ನರಾಯಪಟ್ಟಣ ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ ಮತ್ತು ನಂದೀಶ್ ಗೆ 50 ಸಾವಿರ ಕಳುಹಿಸಿ ಎಂದು ಡಿಮ್ಯಾಂಡ್ ಮಾಡಲಾಗಿದೆ.
ಇನ್ನೂ ಈ ಬಗ್ಗೆ ಜಿಲ್ಲಾಧಿಕಾರಿ ಶಿವಶಂಕರ್ ಆಪ್ತ ಸಹಾಯಕ ಅಭಿಶೇಕ್ ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
Comments