ನವೋದಯ ಶಾಲೆಯ ಮುಂಭಾಗ ಯುವಕನ ಶವ ಪತ್ತೆ |ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ | ಸ್ಥಳೀಯರಲ್ಲಿ ಆತಂಕ...

 ನವೋದಯ ಶಾಲೆಯ ಮುಂಭಾಗ ಯುವಕನ ಶವ ಪತ್ತೆ |ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ | ಸ್ಥಳೀಯರಲ್ಲಿ ಆತಂಕ...



ದೊಡ್ಡಬಳ್ಳಾಪುರ : ನಗರದ ಹೊರವಲಯದಲ್ಲಿರುವ ನವೋದಯ ಶಾಲೆಯ ಮುಂಭಾಗ ಯುವಕನ ಶವ ಪತ್ತೆಯಾಗಿದೆ. 


  ಮೃತ ಯುವಕ ತಾಲೂಕಿನ ಹುಸ್ಕೂರು ನಿವಾಸಿ ಶಶಿಕುಮಾರ್ ಅವರ ಪುತ್ರ ಹೇಮಂತ್ ಗೌಡ ಎಂದು ತಿಳಿದುಬಂದಿದೆ. 


  ಹೇಮಂತ್ ಗೌಡ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಶಂಕಿಸಿದ್ದಾರೆ.


  ಹೇಮಂತ್ ಗೌಡ ಮತ್ತು ಕೆಲವು ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಶುಕ್ರವಾರ ನಡೆದ ಜಗಳದಿಂದಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. 


  ಬಾಶೆಟ್ಟಿಹಳ್ಳಿ ಸಮೀಪವಿರುವ ಯಲಹಂಕ- ಹಿಂದುಪುರ ರಸ್ತೆಯ ನವೋದಯ ಶಾಲೆಯ ಕಾಂಪೌಂಡ್ ಬಳಿ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.


  ಶುಕ್ರವಾರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Comments