ನೀರು ಸರಬರಾಜು ನೆಪದಲ್ಲಿ ಲಕ್ಷಾಂತರ ರೂ ದುಡ್ಡು ಮಾಡಿಕೊಳ್ಳಲು ಮುಂದಾದ ಜಲ ಮಂಡಳಿ ರೈತ ಸಂಘದ ನಂಜುಂಡಪ್ಪ ಆರೋಪ....!!

 

ನೀರು ಸರಬರಾಜು ನೆಪದಲ್ಲಿ ಲಕ್ಷಾಂತರ ರೂ ದುಡ್ಡು ಮಾಡಿಕೊಳ್ಳಲು ಮುಂದಾದ ಜಲ ಮಂಡಳಿ ರೈತ ಸಂಘದ ನಂಜುಂಡಪ್ಪ ಆರೋಪ....!!



ಯಲಹಂಕ:ಬೆಂಗಳೂರಿನಲ್ಲಿ ಜಲಕ್ಷಾಮ ಬವಣೆ ನೀಗಿಸಲು ಜಲ ಮಂಡಳಿ ಚಿಂತನೆ ಯಲಹಂಕದ ಹೆಸರಘಟ್ಟ ಕೆರೆ ನೀರು ನಗರಕ್ಕೆ ಕುಡಿಯುವ ನೀರಿಗೆ ಬಳಸಲು ಯೋಚನೆ ರೈತರಿಂದ ಅಸಮಾಧಾನ. 



ಸದ್ಯ ಹೆಸರಘಟ್ಟ ಕೆರೆಯಲ್ಲಿ 0.3 ಟಿಎಂಸಿ ನೀರಿದೆ ಎಂದು ಅಂದಾಜು ಮಾಡಿ ಸೋಲದೇವನಹಳ್ಳಿ ಪಂಪ ಹೌಸ್ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲು ಜಲಮಂಡಳಿ ತಯಾರಿ ಮಾಡಿದೆ ಜಲ ಮಂಡಳಿ ವಿರುದ್ಧ ರೈತನರು ಪ್ರತಿಭಟನೆಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಇಂದು ಉಪತಹಸೀಲ್ದಾರ್ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದ್ದಾರೆ.





ಇನ್ನು ಈ ಕುರಿತು ಸ್ಥಳ ಪರಿಶೀಲನೆಗೆಂದು ಬಂದಿದ್ದಂತಹ ಉಪತಾಸಿಲ್ದಾರ್ ಶ್ರೀನಿವಾಸ್ ಮಾತನಾಡಿ ರೈತ ಸಂಘದ ವತಿಯಿಂದ ನೀಡಿದ ಅರ್ಜಿಯ ಕುರಿತು ಸ್ಥಳ ಪರಿಶೀಲನೆಗೆಂದು ಬಂದಿದ್ದೇವೆ ಇಲ್ಲಿನ ವಾಸ್ತವ ಅಂಶವನ್ನು ಸರ್ಕಾರದ ಗಮನಕ್ಕೆ ತರುತ್ತವೆ, ಇಲ್ಲಿ ನೀರು ತುಂಬಾ ಕಡಿಮೆ ಇದೆ, ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ ಎಂದರು. 



ಇನ್ನು ಈ ಕುರಿತು ಆರ್ ಲೋಕೇಶ್ ಶರ್ಮ ಮಾತನಾಡಿ ಇಲ್ಲಿನ ಸುತ್ತಮುತ್ತಲಿನ ಬೋರ್ವೆಲ್ ಗಳಲ್ಲಿ ನೀರಿನ ಭವಣೆ ಹೆಚ್ಚಾಗುತ್ತದೆ ಈ ಕೆರೆಯಲ್ಲಿ ನೀರು ಖಾಲಿಯಾದರೆ ರೈತರಿಗೆ ನೀರು ಕೊಡಲು ಯಾರು ಮುಂದೆ ಬರುವುದಿಲ್ಲ ಬೆಂಗಳೂರಿನ ಜನ ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ, ಕೆರೆ ಯಾವ ವಸ್ತು ಸ್ಥಿತಿಯನ್ನು ಪರಿಶೀಲನೆ ಮಾಡಿದೆ ಸುಳ್ಳು ಮಾಹಿತಿಯನ್ನು ಕೊಟ್ಟು ರೈತರಿಗೆ ತೊಂದರೆ ಕೊಡಲು ಮುಂದಾಗಿದ್ದಾರೆ, ಮನವಿ ಸ್ವೀಕರಿಸಿ ಬೆಂಗಳೂರಿಗೆ ನೀರು ಕೊಡುವುದನ್ನ ತಡೆಯದೇ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.



ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಂಜುಂಡಪ್ಪ ಮಾತನಾಡಿ ನಾವು ನೀಡಿದ ಮನವಿ ಪತ್ರದ ಹಿನ್ನೆಲೆಯಲ್ಲಿ ಉಪ ತಾಸಿಲ್ದಾರ್ ಸ್ಥಳ ಪರಿಶೀಲನೆಗೆ ಬಂದಿದ್ದಾರೆ, ಸಾವಿರಾರು ಪ್ರಾಣಿಗಳು ಪಕ್ಷಿಗಳು ಕೂಡ ಇಲ್ಲಿ ವಾಸವಾಗಿದ್ದಾವೆ, ಬೆಂಗಳೂರಿನ ಜನರಿಗೆ ಇದು ಎರಡು ಮೂರು ದಿನಕ್ಕೆ ಸಾಕಾಗುವಷ್ಟು ನೀರಿದೆ, ನೀರು ಸರಬರಾಜು ನೆಪದಲ್ಲಿ ಲಕ್ಷಾಂತರ ರೂ ದುಡ್ಡು ಮಾಡಿಕೊಳ್ಳಲು ಈ ಕೆಲಸವನ್ನ ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ರು. 



ಇನ್ನು ಇದೇ ಸಂದರ್ಭದಲ್ಲಿ ಉಪತಹಸೀಲ್ದಾರ್ ಶ್ರೀನಿವಾಸ್. ಬಸವರಾಜು, ಆರ್ ಲೋಕೇಶ್ ಶರ್ಮಾ, ನಂಜುಂಡಪ್ಪ ಕಡತಿಮಲ್ಲೆ,ಅರ್ಸೇಗೌಡ, ನಂಜೇಗೌಡ, ಚನ್ನೇಗೌಡ, ವೆಂಕಟೇಶ್, ಅಭಿಲಾಷ್, ಮತ್ತಿತರ ರೈತರು ಉಪಸ್ಥಿತರಿದ್ದರು.

Comments