8 ವರ್ಷದ ಬಾಲಕ ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿ ಛಿದ್ರ ಛಿದ್ರ.....

 8 ವರ್ಷದ ಬಾಲಕ ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿ ಛಿದ್ರ ಛಿದ್ರ.....

 


ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿದ 8 ವರ್ಷದ ಬಾಲಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸೋದರ ಮಾವನೊಟ್ಟಿಗೆ ಟ್ರ್ಯಾಕ್ಟರ್‌ ಏರಿದ ಬಾಲಕ ಜಮೀನಿಗೆ ತೆರಳುವಾಗ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟಿದ್ದಾನೆ.


ಮೈಸೂರು: ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ್ಯಾಕ್ಟರ್‌ಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ. ಮೈಸೂರಿನ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ಭವಿಷ್ (8) ಮೃತ ದುರ್ದೈವಿ.


ಭವಿಷ್‌ ತನ್ನ ತಾಯಿ ಮಮತಾ ಜತೆಗೆ ಚಾಮರಾಜನಗರದಿಂದ ದೇವರಸನಹಳ್ಳಿಗೆ ಬಂದಿದ್ದ. ಈ ವೇಳೆ ಭವಿಷ್‌ ಸೋದರ ಮಾವನ ಜತೆ ಟ್ರ್ಯಾಕ್ಟರ್‌ನಲ್ಲಿ ಜಮೀನಿಗೆ ಹೋಗಿದ್ದ. ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದಿದ್ದಾನೆ. ಆಗ ಕ್ಷಣ ಮಾತ್ರದಲ್ಲಿ ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿದ ಭವಿಷ್‌ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ.


ಬಾಲಕನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments