300 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ರೇಣುಕಾಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ; ಕರಗದಾರಿಯಾಗಿ ಶ್ರೀ ಆರ್ ನಾಗರಾಜು ನಿವೃತ್ತ ಪೊಲೀಸ ಅಧಿಕಾರಿ...
300 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ರೇಣುಕಾಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ; ಕರಗದಾರಿಯಾಗಿ ಶ್ರೀ ಆರ್ ನಾಗರಾಜು ನಿವೃತ್ತ ಪೊಲೀಸ ಅಧಿಕಾರಿ...
ದೊಡ್ಡಬಳ್ಳಾಪುರ : ಶ್ರೀ ರೇಣುಕಾಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ..ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮದಲ್ಲಿ 23 5 2024 ಗುರುವಾರ ರಾತ್ರಿ 10:30 ಕ್ಕೆ ಸಲುವಾಗಿ ಶುಭ ಅನುರಾಧ ನಕ್ಷತ್ರ ಮಕರ ಲಗ್ನದಲ್ಲಿ ಹೂವಿನ ಕರಗ ಮಹೋತ್ಸವ ಜರುಗಲಿದೆ.
300 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ಇದಾಗಿದ್ದು ದೊಡ್ಡತುಮಕೂರು ಶ್ರೀ ಆರ್ ನಾಗರಾಜುರವರು ನಿವೃತ್ತ ಪೊಲೀಸ ಅಧಿಕಾರಿ ಇರುವವರು ವಿಶಿಷ್ಟ ನರ್ತನಗಳೊಂದಿಗೆ ಶ್ರೀ ರೇಣುಕಾಯಲ್ಲಮ್ಮ ದೇವಿಯವರ ಹೂವಿನ ಕರಗವನ್ನು 1977ನೇ ಸಾಲಿನಿಂದಲೂ ಮಾಡಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ 1946ಕ್ಕೆ ಸರಿಯಾಗಿ ಶ್ರೀಮನ್ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತಋತು, ವೈಶಾಕಮಾಸ, ಶುಕ್ಲಪಕ್ಷ, ಬುದ್ಧ ಪೌರ್ಣಮಿ ಗುರುವಾರ ದಿನಾಂಕ 23-05-2024 ರಂದು ಐದನೇ ವಾರ್ಷಿಕೋತ್ಸವಹಾಗೂ ಶ್ರೀ ಅಮ್ಮನವರ ಹೂವಿನ ಕರಗ ಮಹೋತ್ಸವದ ಪ್ರಯುಕ್ತ ಪ್ರಾತಃಕಾಲ 6.00 ಗಂಟೆಗೆ ದೇವಿ ಸುಪ್ರಭಾತ, ಯಾಗಶಾಲ ಪ್ರವೇಶ, ಮಹಾ ಗಣಪತಿ ಪೂಜೆ, ಸ್ವಸ್ತಿವಾಚನ, ದೇವನಾಂದಿ, ಕೌತುಕ ಬಂಧನ, ಋಗ್ವರಣ, ಕಳಸ ಸ್ಥಾಪನೆ, ಧ್ವಜಾರೋಹಣ, ಅಂಕುರಾರ್ಪಣ, ದೇವಿಗೆ ಪಂಚಾಮೃತ ಅಭಿಷೇಕ ಮತ್ತು ಅಲಂಕಾರ, 10.00 ಗಂಟೆಗೆ ಮಹಾಗಣಪತಿ, ಆದಿತ್ಯಾದಿ, ನವಗ್ರಹ, ಮೃತ್ಯುಂಜಯ, ನಾಗಸುಬ್ರಮಣ್ಯ, ಕಾರ್ಯಸಿದ್ಧಿ ಆಂಜನೇಯ, ಮಹಾಲಕ್ಷ್ಮೀ ಮತ್ತು ರೇಣುಕಾ ಯಲ್ಲಮ್ಮ ದೇವಿ ಮೂಲಮಂತ್ರ. ಹೋಮ, ಬಲಿ ಪ್ರಧಾನ, ಮಹಾಪೂರ್ಣಾಹುತಿ 12.00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ.
ಸಂಜೆ 4.30 ಗಂಟೆಗೆ ಗ್ರಾಮದ ಕನ್ಯಾಮಣಿಯವರುಗಳಿಂದ ಗಂಗೆ ಪೂಜೆಗಳು, ನರವೇರುವವು. ಇದೇ ದಿನ ರಾತ್ರಿ 10.30ಕ್ಕೆ ಸಲ್ಲುವ ಶುಭ ಅನುರಾಧಾ ನಕ್ಷತ್ರ ಮಕರ ಲಗ್ನದಲ್ಲಿ ದೇವಿಯ ದೇವಸ್ಥಾನದಿಂದ ಶ್ರೀ ಶ್ರೀ ಶ್ರೀ ಚನ್ನವೀರ ಚೇತನ ಡಾ|| ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ವೀರಾಪುರ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ಕೃಪಾಶೀರ್ವಾದದಲ್ಲಿ.
"ಶ್ರೀ ಅಮ್ಮನವರ ಹೂವಿನ ಕರಗ ಮಹೋತ್ಸವವು ಜರುಗುವುದು"
ಶ್ರೀ ದೇವಿಯ ಹಾಗೂ ಗ್ರಾಮದ ಎಲ್ಲಾ ದೇವರುಗಳ ಉತ್ಸವವು ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ನೆರವೇರಿಸಲು ಭಗವತ್ ಪ್ರೇರಣಾನುಸಾರ ಗುರು-ಹಿರಿಯರು ಹಾಗೂ ಗ್ರಾಮಸ್ಥರುಗಳು ನಿಚ್ಚಯಿಸಿರುವುದರಿಂದ ಸಹೃದಯಿಗಳಾದ ಭಕ್ತರು ಸಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ಶ್ರೀ ದೇವಿಯವರ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಕೊಂಡರು.
Comments