1500ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನ ದಾಸೋಹ ಕಾರ್ಯಕ್ರಮ | ನಿರಂತರ ಅನದಸಹ ಕಾರ್ಯಕ್ರಮಕ್ಕೆ 1,500 ದಿನದ ಸಂಭ್ರಮ | ಶುಭಕೋರಿದ ಗಣ್ಯರು

 *1500ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನ ದಾಸೋಹ ಕಾರ್ಯಕ್ರಮ* 
 **ನಿರಂತರ ಅನದಸಹ ಕಾರ್ಯಕ್ರಮಕ್ಕೆ 1,500 ದಿನದ ಸಂಭ್ರಮ :  ಶುಭಕೋರಿದ ಗಣ್ಯರು* 


 ದೊಡ್ಡಬಳ್ಳಾಪುರ: 1,500 ದಿನಗಳ ನಿರಂತರ ಅನ್ನದಾಸೋಹ ಕಾರ್ಯಕ್ರಮವು ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಲ್ಲೇಶ್ ರವರ ನೇತೃತ್ವದಲ್ಲಿ ಸಾಗುತ್ತಿದೆ. ಉಳ್ಳವರು ದಾನಿಗಳಾಗಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಖ್ಯಾತ ವಕೀಲರಾದ ರವಿ ಮಾವಿನಕುಂಟೆ ಅಭಿಪ್ರಾಯಪಟ್ಟರು.


 ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಸಾಗುತ್ತಿರುವ ಅನ್ನದಾಸೋಹ ಕಾರ್ಯಕ್ರಮಕ್ಕೆ   1500ರ ಸಂಭ್ರಮ  ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಒಂದು ದಿನದ ಅನ್ನದಾಸೋಹ ಕಾರ್ಯಕ್ರಮದ ಆಯೋಜನೆ  ಮಾಡುವುದು ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ  ಮಲ್ಲೇಶ್ ಮತ್ತು ತಂಡ ನಿರಂತರ1500 ಸತತ ಅನ್ನದಾಸೋಹ ಕಾರ್ಯಕ್ರಮವನ್ನು  ಯಾವುದೇ ಅಡ್ಡಿ ಆತಂಕಗಳಿಲ್ಲದೆ  ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಬಡತನ ರೇಖೆಗಿಂತ ಕೆಳಗಿರುವ ವರ್ಗದ ಜನರನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಮೇಲೆತ್ತುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬಡವರ್ಗದ ಸಮುದಾಯಗಳನ್ನು  ಮರೆತಿರುವ ಸ್ಥಳೀಯ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಯೋಚಿಸಬೇಕಿದೆ  ಎಂದರು.



 ಕನ್ನಡ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷರಾದ  ನಾಗರಾಜು ಮಾತನಾಡಿ  ಸತತವಾಗಿ  ಕಡು ಬಡವರ ನಿರ್ಗತಿಕರ  ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಈ ಉತ್ತಮ ಕಾರ್ಯವು  ಮತ್ತಷ್ಟು ಅಭಿವೃದ್ಧಿ ಹೊಂದಲಿ  ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಭಾಗವಹಿಸಿ ಕಾರ್ಯಕ್ರಮ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು


 ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ  ದಾನಿಗಳ ನೆರವಿನಿಂದ  ಸತತವಾಗಿ  1500 ದಿನಗಳ ಅನ್ನದಾಸೋಹ ಕಾರ್ಯಕ್ರಮ ನೆರವೇರುತ್ತಿದೆ. ಕಾರ್ಯಕ್ರಮದಲ್ಲಿ ವಯೋವೃದ್ದರಿಗೆ ವಸ್ತ್ರಾ ದಾನಿಗಳಾಗಿ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಜ್ಯಧ್ಯಕ್ಷ ಹನುಮಂತರಾಯಪ್ಪ ಸಹಾಯಹಸ್ತ ನೀಡಿದ್ದು.


ಕೊರೋನಾ ಸಂದರ್ಭದಲ್ಲಿ ಆರಂಭವಾದ ಈ ಕಾರ್ಯಕ್ರಮವು  ಹಲವು ಬಡ ಕುಟುಂಬಗಳ ಹಸಿವನ್ನು ನೀಗಿಸಿದೆ  ಎಂಬ ಹೆಮ್ಮೆ ಇದೆ. ಉಳ್ಳವರು ದಾನಿಗಳು ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವ ಮೂಲಕ  ಸಂಭ್ರಮಿಸಬೇಕಾಗಿ ಮನವಿ ಮಾಡಿದರು.


 ಈ ಸಂದರ್ಭದಲ್ಲಿ  ಕನ್ನಡ ಪರ ಹೋರಾಟಗಾರರಾದ ಸಂಜೀವ್ ನಾಯಕ್, ನಿವೃತ್ತ ಶಿಕ್ಷಕರಾದ ಯೋಗ ಅಮರ್ನಾಥ್, ಸಮಾಜಸೇವಕರಾದ ನರಸಿಂಹ ಮೂರ್ತಿ, ಸ್ಥಳೀಯ ಮುಖಂಡರಾದ ಜಿ ರಂಗಸ್ವಾಮಿ,ದರ್ಗಾಜೋಗಿಹಳ್ಳಿ ಪಂಚಾಯಿತಿ ಸದಸ್ಯೆ ಶಶಿಕಲಾ ನಾಗರಾಜು, ಸಮಾಜಸೇವಕರಾದ ಸೇಲ್ವಮ್ , ನವೀನ್, ಶ್ರೀನಿವಾಸ್, ಮುರಳಿ, ದೀಪು, ಸೇರಿದಂತೆ ಅನ್ನದಾಸೋಹ ಸಮಿತಿಯ  ಹಿತೈಷಿಗಳು ಮಿತ್ರರು  ಉಪಸ್ಥಿತರಿದ್ದರು.

Comments