ದೊಡ್ಡಬಳ್ಳಾಪುರದ ಕೋರ್ಟ್ ರಸ್ತೆಯಲ್ಲಿ ಬೃಹತ್ ಗಾತ್ರದ ಆಲದ ಮರ ಕೊಂಬೆ ಮುರಿದು ಬಿದ್ದು ಬಾಲಕಿಗೆ ಗಾಯ ...!!

 ದೊಡ್ಡಬಳ್ಳಾಪುರದ ಕೋರ್ಟ್ ರಸ್ತೆಯಲ್ಲಿ ಬೃಹತ್ ಗಾತ್ರದ ಆಲದ ಮರ ಕೊಂಬೆ ಮುರಿದು ಬಿದ್ದು ಬಾಲಕಿಗೆ ಗಾಯ ...




ದೊಡ್ಡಬಳ್ಳಾಪುರದ ಕೋರ್ಟ್ ರಸ್ತೆಯಲ್ಲಿ ಬೃಹತ್ ಗಾತ್ರದ ಆಲದಮರದ ಕೊಂಬೆ  ಮುರಿದು ಬಿದ್ದಿದೆ. ಇಂದು ಸಂಜೆ 6:30ಕ್ಕೆ ಘಟನೆ ಈ ವೇಳೆ ಬಾಲಕಿಗೆ ಗಾಯವಾಗಿದೆ.



ವಿನಾಯಕನಗರ ನಿವಾಸಿಯಾದ ಸಂಜಯ್ ಅವರು ಸೈಕಲ್ ರಿಪೇರಿ ಗೆಂದು ತಮ್ಮ  ಮಗಳನ್ನು ಕರೆದುಕೊಂಡು ಹೋಗುತ್ತಿರುವಾಗ ಘಟನೆ ನಡೆದಿದೆ.


ದೊಡ್ಡಬಳ್ಳಾಪುರದ ಕೋರ್ಟ್ ರಸ್ತೆಯಲ್ಲಿ ಬೃಹತ್ ಗಾತ್ರದ ಆಲದ ಮರ ಕೊಂಬೆ ಮುರಿದು ಬಿದ್ದು ಬಾಲಕಿಗೆ ಗಾಯ ...!!




ಆಲದ ಮರಕ್ಕೆ ವಯಸ್ಸಾಗಿರುವ ಕಾರಣ ಮರದ ಕೊಂಬೆ ಟೊಳ್ಳಾಗಿದ್ದು, ಮುರಿದು ರಸ್ತೆಗೆ ಬಿದ್ದ ಪರಿಣಾಮ 11 ವರ್ಷದ ಬಾಲಕಿಯ ಎಡಗೈಗೆ ಗಾಯವಾಗಿದೆ.


ಇಲ್ಲಿನ ಸ್ಥಳೀಯರಾದ ಯೂಸಫ್ ಫಾರ್ಮರ್ ಅವರು ಹೇಳುವ ಪ್ರಕಾರ ಮರಗಳಿಗೆ ವಯಸ್ಸಾಗಿದೆ ಮರಗಳನ್ನ ತೆಗೆಯುವಂತಹ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಸುಖ ಸುಮನೆ ಜನಸಾಮಾನ್ಯರಿಗೆ ಒಂದಲ್ಲ ಒಂದು ಸಮಸ್ಯೆ ಎದರಾಗ್ತಿದೆ ಪ್ರಾಣ ಹೋದರೆ ಯಾರು ಹೊಣೆ ಅಂತಾರೆ ಇಲ್ಲಿನ ಸ್ಥಳಿಯರು.



ಬಾಲಕಿ ಸೈಕಲ್ ತಳ್ಳಿಕೊಂಡು ಬರುತ್ತಿದ್ದಳು ಗೊಂಬೆ ಮುರಿದು ಬೀಳುತ್ತಿದ್ದಂತೆ ಸಂಜಯ್ ಅವರು ಬೈಕ್ ನಿಲ್ಲಿಸಿ ತಕ್ಷಣವೇ ಮಗಳನ್ನು ಅಪಾಯದಿಂದ ಪಾರು ಮಾಡಿದ್ದಾರೆ.



ನಗರಸಭಾ ಸಿಬ್ಬಂದಿ ಕೊಂಬೆಯನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Comments