ಮಳೆ ನಿಂತ್ರು ಹನಿ ನಿಲ್ಲಲ್ಲ ಎಂಬಂತೆ ಸಂಧಾನ ಆದ್ರು ಅನುಮಾನ ಬಿಟ್ಟಿಲ್ಲ, ಮತ್ತೊಮ್ಮೆ ಬಾಗೇಪಲ್ಲಿ ಗೌರಿಬಿದನೂರು ಕ್ಷೇತ್ರದ ಬಿ.ಜೆ.ಪಿ ಸಭೆಲಿ ಮೋದಿ ಹೆಸರೇಳಿ ಮತ ಕೇಳ್ತೇನೆ ಎಂದ ವಿಶ್ವನಾಥ್..!!
ಮಳೆ ನಿಂತ್ರು ಹನಿ ನಿಲ್ಲಲ್ಲ ಎಂಬಂತೆ ಸಂಧಾನ ಆದ್ರು ಅನುಮಾನ ಬಿಟ್ಟಿಲ್ಲ,
ಮತ್ತೊಮ್ಮೆ ಬಾಗೇಪಲ್ಲಿ ಗೌರಿಬಿದನೂರು ಕ್ಷೇತ್ರದ ಬಿ.ಜೆ.ಪಿ ಸಭೆಲಿ ಮೋದಿ ಹೆಸರೇಳಿ ಮತ ಕೇಳ್ತೇನೆ ಎಂದ ವಿಶ್ವನಾಥ್..!!
ಇಂದು ಮಾನ್ಯ ಯಲಹಂಕ ಕ್ಷೇತ್ರ ಜನಪ್ರಿಯ ಶಾಸಕರಾದ ಶ್ರೀ ಎಸ್.ಆರ್ ವಿಶ್ವನಾಥ್ ರವರು ಹಾಗೂ ಯುವ ನಾಯಕರಾದ ಅಲೋಕ್ ವಿಶ್ವನಾಥ್ ರವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯ ಮೊದಲು ಆಕಾಂಕ್ಷಿಯಾಗಿದ್ದ ಅಲೋಕ್ ವಿಶ್ವನಾಥ್ ರವರನ್ನು ಬೆಂಬಲಿಸಿದ್ದ ಬಾಗೇಪಲ್ಲಿ ಮತ್ತು ಗೌರಿಬಿದನೂರು ಕ್ಷೇತ್ರದ ಬಿ.ಜೆ.ಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಬೂದಿಮುಚ್ಚಿದ ಕೆಂಡದಂತಿರುವ ವಿಶ್ವನಾಥ್ / ಸುಧಾಕರ್ ಅಸಮಾಧಾನ/ಅನುಮಾನ....!!
ಎರಡು ಕ್ಷೇತ್ರದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮತ್ತು ಮುಂಬರುವ ಸ್ಥಳೀಯ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಗೆಲುವು ಸಾಧಿಸಲು ಮತ್ತು ಪಕ್ಷದ ಸಂಘಟನೆಗೆ ಸದಾ ನಿಮ್ಮೊಂದಿಗಿರುತ್ತೇವೆಂದು ಸಭೆಯ ಮೂಲಕ ಭರವಸೆ ನೀಡಿದರು..
Comments