ದೊಡ್ಡಬಳ್ಳಾಪುರ: ಚುನಾವಣಾ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯಾದ ಶಿಕ್ಷಕಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ನಗರದ ರೋಜಿಪುರ ಮತಗಟ್ಟೆ ಸಂಖ್ಯೆ 155 ರಲ್ಲಿ ಚುನಾವಣಾ ಕಾರ್ಯನಿರ್ವಹಿಸುತ್ತಿದ್ದ ಕವಿತಾ ಮೃತಪಟ್ಟವರು
ನೆಲಮಂಗಲ ತಾಲೂಕಿನ ಮಾರ್ಗೋನಹಳ್ಳಿ ನಿವಾಸಿಯಾದ ಕವಿತಾ ಅವರು, ತಾಲೂಕಿನ ಬೂಚನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇಂದು ಸಂಜೆ ಮತದಾನ ಮುಗಿದು, ಚುನಾವಣಾ ಸಾಮಗ್ರಿ ಪ್ಯಾಕ್ ಮಾಡುವ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ತಕ್ಷಣ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಶಿಕ್ಷಕಿ ಕವಿತಾ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು.,
Comments