ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಅಬ್ಬರದ ಪ್ರಚಾರ..!!
ಈ ಚುನಾವಣೆಲಿ ಕಣ್ಣೀರಲ್ಲ ರಕ್ತಕಣ್ಣೀರು ಸುರಿಸಲಿ ಎಂದು ವಾಗ್ದಾಳಿ..!!
ಟಿಕೆಟ್ ಪಡೆಯಲು ಯೋಗ್ಯತೆ ಇಲ್ಲದವರ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ಆರ್.ಅಶೋಕ್..!!
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ವಿಪಕ್ಷ ನಾಯಕ ಆರ್.ಅಶೋಕ್ ಬಿರುಸಿನ ಪ್ರಚಾರ ನಡೆಸಿದರು.. ಚಿಕ್ಕಬಳ್ಳಾಪುರದ ರೋಡ್ ಶೋ ವೇಳೆ ಡಾ.ಕೆ.ಸುಧಾಕರ್ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದರ ಬಗ್ಗೆ ವೀರಪ್ಪಮೊಯ್ಲಿ ಕಿಡಿಕಾರಿ ಕಣ್ಣೀರಲ್ಲ ಆತ ಚುನಾವಣೆಲಿ ರಕ್ತಕಣ್ಣೀರು ಸುರಿಸಲಿ ಎಂದು ವಾಗ್ದಾಳಿ ನಡೆಸಿದರು.. ಇದಕ್ಕೆ ವಿಪಕ್ಷನಾಯಕ ಆರ್.ಅಶೋಕ್ ಟಿಕೆಟ್ ಪಡೆಯಲು ಯೊಗ್ಯತೆ ಇಲ್ಲದ ಮೊಯ್ಲಿ ಬಗ್ಗೆ ನಾವು ಮಾತನಾಡಲ್ಲ ಎಂದು ಟಾಂಗ್ ನೀಡಿದರು..
ಇಂದು ಬಿಜೆಪಿ ನಾಯಕರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೊಡ್ಡಬಳ್ಳಾಪುರದ ಚಿಕ್ಕಮಧುರೆ ದೇವಸ್ಥಾನಕ್ಕೆ ಆರ್.ಅಶೋಕ್ ಮತ್ತು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಭೇಟಿ ನಿಡಿ ಪೂಜೆ ಸಲ್ಲಿಸಿದರು. ನಂತರ ಚಿಕ್ಕಮಧುರೆ, ದೊಡ್ಡಬೆಳವಂಗಲ, ಸಾಸಲು ಹೋಬಳಿ ಕೇಂದ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು.. ಪ್ರಚಾರದ ಭಾಗವಾಗಿ ಒಂದು ರೋಡ್ ಶೋ, ಮೂರು ಕಲ್ಯಾಣಮಂಟಪಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಮತಯಾಚಿಸಿದರು.. ಈ ವೇಳೆ ವೀರಪ್ಪ ಮೊಯ್ಲಿ ಸುಧಾಕರ್ ಕಣ್ಣೀರಲ್ಲ, ಈ ಚುನಾವಣೆಲಿ ರಕ್ತಕಣ್ಣೀರು ಸುರಿಸಬೇಕು ಎಂಬ ಮಾತಿಗೆ ಅಶೋಕ್ ಕೆಂಡಾಮಂಡಲರಾದರು.. ಚಿಕ್ಕಬಳ್ಳಾಪುರದ ಟಿಕೆಟ್ ಪಡೆಯಲು ಯೋಗ್ಯತೆ ಇಲ್ಲದವರ ಬಗ್ಗೆ ನಾವು ಬಿಜೆಪಿಯವರು ಮಾತನಾಡಲ್ಲ ಎನ್ನುತ್ತಲೇ ಸಖತ್ತಾಗಿ ಟಾಂಗ್ ನೀಡಿದರು..
ಮದುರೆ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಬಿಜೆಪಿ ನಾಯಕರು ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ್ರು. ನಂತರ ಇದೇ ರೀತಿ ಬೆಳವಂಗಲದಲ್ಲಿ ಸಭೆ, ಸಾಸಲು ಹೋಬಳಿ ಕೇಂದ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಮೈತ್ರಿ ನಾಯಕರು ಮೂರು ಸಭೆಗಳನ್ನು ನಡೆಸಿ ಬಿಜೆಪು ಅಭ್ಯರ್ಥಿ ಪರ, ಮೋದಿಯ ಹೆಸರೇಳುತ್ತಾ ಮತಯಾಚಿಸಿದರು.. ಇದೇ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ಬಿಜೆಪಿ ಡಾ.ಕೆ.ಸುಧಾಕರ್ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯಾಗಿದ್ದಾಗ ಜಿಲ್ಲಾಸ್ಪತ್ರೆ, ಕರೋನಾ ಸೇವೆ ಮಾಡಿ ಕ್ಷೆತ್ರಕ್ಕೆ ದುಡಿದಿದ್ದೇನೆ.. ಮತದಾರರು ನನ್ನ ಕೈಹಿಡಿಯಬೇಕೆಂದರು..
ಇಂದಿನ ಬಿಜೆಪಿ ಅಭ್ಯರ್ಥಿಗಳ ರೋಡ್ ಶೋ ಮತ್ತು ಮೂರು ಸಭೆಗಳಿಗೆ ವೇಳೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸ್ಥಳೀಯ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಹರೀಶ್ ಗೌಡ, ಸೇರಿದಂತೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಲವು ನಾಯಕರು ಹಾಜರಿದ್ದರು..ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ, ಹ್ಯಾಟ್ರಿಕ್ ಗೆಲುವಿನೊಂದಿಗೆ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು.. ಎರಡೂ ಪಕ್ಷಗಳ ಸಮಾಗಮ ಆಗಿದ್ದು, ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ದೃವೀಕರಣ ಆಗ್ತಿದೆ ಇದು ಒಳ್ೞೆಯ ಬೆಳವಣಿಗೆ ಎಂದು ಮೈತ್ರಿ ನಾಯಕರುಕರೆ ನೀಡಿದರು.
Comments