ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಸಂಧಾನ ಸಭೆ
ದೊಡ್ಡಬಳ್ಳಾಪುರ ನಗರಸಭೆ ಹಾಗೂ ಬಶೆಟ್ಟಹಳ್ಳಿ ಕೈಗಾರಿಕ ಪ್ರದೇಶದ ರಾಸಾಯನಿಕ ಒಳಗೊಂಡ ತ್ಯಾಜ್ಯ ನೀರನ್ನು ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೆರೆಗಳಿಗೆ ರಾಸಾಯನಿಕ ತ್ಯಾಜ್ಯ ನೀರನ್ನು ಹರಿಸಬಾರದು, ಸರ್ಕಾರವು 3 ನೇ ಹಂತ ಸಂಸ್ಕರಣಾ ಘಟಕವನ್ನು ಸ್ಥಾಪಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೋರಾಟಗಾರರು ಪಟ್ಟು ಹಿಡಿದಿದ್ದರು.
ದೊಡ್ಡಬಳ್ಳಾಪುರ: ಶುದ್ದ ಕುಡಿಯುವ ನೀರಿಗಾಗಿಆಗ್ರಹಿಸಿ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸಿದ್ದ ತಾಲ್ಲೂಕಿನ ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಹಳ್ಳಿಯ ಗ್ರಾಮಸ್ಥರೊಂದಿಗೆ ಜಿಲ್ಲಾಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ ಅವರು ಸಂಧಾನದ ಸಭೆ ನಡೆಸಿದ ಬಳಿಕ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.
ಶುದ್ದ ನೀರನ್ನು ಕೆರೆಗಳಿಗೆ ಹರಿಸಬೇಕೆಂದು ಒತ್ತಾಯಿಸಿ ಕಳೆದ 1 ತಿಂಗಳಿನಿಂದ ಅರ್ಕಾವತಿ ನದಿ ಪಾತ್ರ ಹೋರಾಟಗಾರರು, ವಿವಿಧ ಸಂಘ ಸಂಸ್ಥೆಗಳೊಂದಿಗೆ ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ 18 ಹಳ್ಳಿಯ ಗ್ರಾಮಸ್ಥರು ಹೋರಾಟ ನಡೆಸಿದ್ದರು.
ದೊಡ್ಡಬಳ್ಳಾಪುರ ನಗರಸಭೆ ಹಾಗೂ ಬಶೆಟ್ಟಹಳ್ಳಿ ಕೈಗಾರಿಕ ಪ್ರದೇಶದ ರಾಸಾಯನಿಕ ಒಳಗೊಂಡ ತ್ಯಾಜ್ಯ ನೀರನ್ನು ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೆರೆಗಳಿಗೆ ರಾಸಾಯನಿಕ ತ್ಯಾಜ್ಯ ನೀರನ್ನು ಹರಿಸಬಾರದು, ಸರ್ಕಾರವು 3 ನೇ ಹಂತ ಸಂಸ್ಕರಣಾ ಘಟಕವನ್ನು ಸ್ಥಾಪಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೋರಾಟಗಾರರು ಪಟ್ಟು ಹಿಡಿದಿದ್ದರು.
ಈ ಕುರಿತು ಚಿಕ್ಕತುಮಕೂರು ಗ್ರಾಮದ ಚಂದ್ರಪ್ಪ ಮಾತನಾಡಿ, ರಾಸಾಯನಿಕ ಕೊಳಚೆ ನೀರಿನಿಂದ ಸುಮಾರು 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ಮಲೀನಗೊಳ್ಳುತ್ತಿವೆ. ಇದರಿಂದ ಕೆರೆಯಲ್ಲಿನ ಗಿಡ-ಮರಗಳು ನಾಶವಾಗುತ್ತಿರುವಾಗ ಮನುಷ್ಯರು ಸಾವನ್ನಪ್ಪುವ ಆತಂಕವಿದೆ. ಈಗಾಗಲೇ ಸಾಕಷ್ಟು ಪ್ರಾಣಿಗಳು ಈ ತ್ಯಾಜ್ಯ ನೀರನ್ನು ಕುಡಿದು ಸಾವನ್ನಪ್ಪಿವೆ. ಈ ಕಾರಣಕ್ಕೆ ನಾವು ಲೋಕಸಭೆ ಚುನಾವಣಾ ಬಹಿಷ್ಕಾರ ಹಾಕಲುಮುಂದಾಗಿದ್ದೇವೆ ಎಂದು ಹೇಳಿದರು.
ಶನಿವಾರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಅವರು ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರೊಂದಿಗೆ ಸಂಧಾನದ ಸಭೆ ನಡೆಸಿದರು. ದೊಡ್ಡತುದುಕೂರು, ದುಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಜನರಿಗೆ ಕುಡಿಯಲು ನೀರಿಗಾಗಿ ಸಮೀಪದ ಕಾಡನೂರು ಬಳಿ 10 ಬೋರೈಲ್ ಗಳನ್ನು ಕೊರೆಸಲಾಗುವುದು, ಮುಂದಿನ 6 ತಿಂಗಳೊಳಗೆ ಶುದ್ದ ನೀರನ್ನು ಕೆರೆಗಳಿಗೆ ಹರಿಸಲಾಗುವುದು ಎಂದು ಸಂಧಾನ ಸಭೆಯಲ್ಲಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಒಲ್ಲದ ಮನಸ್ಸಿ ನಿಂದ ಚುನಾವಣಾ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು, ತಾಪಂ, ಗ್ರಾಪಂ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Comments