ಮೂರ್ನಾಲ್ಕು ದಿನಗಳಿಂದೆ ನನಗೆ ಕಾಲ್ ಮಾಡಿದ್ದರೆ ಅಥವಾ ಮೆಸೆಜ್ ಮಾಡಿದ್ದರೇ ಸಾಭಿತುಪಡಿಸಿ ನಾನು ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ನೀಡ್ತಿನಿ ಎಸ್ ಆರ್ ವಿಶ್ವನಾಥ್.....!!
ನೆನ್ನೆ ವಿಶ್ವನಾಥ್ ಮನೆಗೆ ಸುಧಾಕರ್ ಬೇಟಿ ನೀಡಿ ವಾಪಸ್ ಆದ ವಿಚಾರ.
ಮಾದ್ಯಮಗಳನ್ನ ಕರೆತಂದು ಸಿಂಪಥಿ ಕ್ರಿಯೇಟ್ ಮಾಡುವ ಕೆಲಸ ಮಾಡಬಾರದು.
ಯಲಹಂಕ:
ಸಿಂಗನಾಯಕನಹಳ್ಳಿಯ ಗೃಹ ಕಛೇರಿಯಲ್ಲಿ ಮಾದ್ಯಮಗೋಷ್ಟಿ ನಡೆಸಿದ ಎಸ್ ಆರ್ ವಿಶ್ವನಾಥ್ ಟಿಕೆಟ್ ಸಿಗದಿದ್ದಾಗ ಕೆಲ ದಿನಗಳ ಕಾಲ ಅಸಮಧಾನ ಇರುತ್ತೆ ಅದು ಸಹಜ.
ಸೀಟ್ ಸಿಗದಿದ್ರೆ ಮನೆಯಲ್ಲಿ ಇರ್ತಿದ್ದೆ ಅಂತ ಸುಧಾಕರ್ ಹೊಸಕೋಟೆಯಲ್ಲಿ ಹೇಳಿದ್ದಾರೆ,ನಾನು ಆ ರೀತಿ ಎಲ್ಲೂ ಹೇಳಿಲ್ಲ, ನಮಗೆ ಪಕ್ಷ ಬಿಟ್ರೆ ಸ್ವಾರ್ಥ ಸಂಬಂಧ ಏನು ಇಲ್ಲ.
ನಾಲ್ಕೈದು ದಿನಗಳಿಂದೆ ಬೇಟಿ ಮಾಡಬೇಕು ಅಂತ ಮೆಸೆಜ್ ಮಾಡಿದ್ರು ಅಷ್ಟೆ.ಮೆಸೆಜ್ ಹೊರತು ಪಡಿಸಿ ಯಾವುದೇ ಕರೆ ಮಾಡಿಲ್ಲ. ಸುಧಾಕರ್ ನ ನಾನು ಒಬ್ಬನೆ ಬೇಟಿ ಮಾಡಲ್ಲ ಮುಖಂಡರ ಜೊತೆ ಬೇಟಿ ಮಾಡ್ತೀನಿ ಅಂತ ಖಾಸಗಿ ಮಾಧ್ಯಮದವರಿಗೆ ಹೇಳಿದ್ದೇ.
ಸುಧಾಕರ್ ಬರುವ ಮಾಹಿತಿ ನನಗೆ ಇರಲಿಲ್ಲ ಹೀಗಾಗಿ ನನ್ನ ಕೆಲಸಗಳಿಗೆ ನಾನು ಹೋದೆ.ಬೇಟಿ ಮಾಡಲು ಬರುವವರು ಒಬ್ಬರೆ ಬರಬೇಕು ಬೇಟಿ ಮಾಡಬೇಕು.
ಮಾದ್ಯಮಗಳನ್ನ ಕರೆತಂದು ಸಿಂಪಥಿ ಕ್ರಿಯೇಟ್ ಮಾಡುವ ಕೆಲಸ ಮಾಡಬಾರದು,ನಮ್ಮ ಕ್ಷೇತ್ರದಲ್ಲಿ ನಾಳೆ ಮತದಾನ ಮಾಡಿದ್ರು ಮತ ಹಾಕಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ.
ಯಲಹಂಕದವರನ್ನ ಖಳನಾಯಕನನ್ನ ಮಾಡುವ ರೀತಿ ಮಾದ್ಯಮಗಳಲ್ಲಿ ಬಿಂಬಿಸಿದ್ದಾರೆ,ಗೇಟ್ ಹಾಕಿದ್ರು ಒಳಗಡೆ ಬಿಟ್ಟಿಲ್ಲ ಅಂತ, ನಮ್ಮಮನೆಗೆ ಕಾರ್ಯಕರ್ತ ಸೇರಿದಂತೆ ಯಾರೆ ಬಂದ್ರು ನೀರು ಕೊಟ್ಟು ಉಪಚಾರ ಮಾಡ್ತೀವಿ,ಮಾಜಿ ಸಚಿವರನ್ನ ಬೀದಿಯಲ್ಲಿ ನಿಲ್ಲಿಸುವ ನಿಕೃಷ್ಟ ನಾನಲ್ಲ.
ರಾತ್ರಿ 12 ಗಂಟೆಗೆ ಯಾರೆ ಬಂದ್ರು ಎದ್ದು ಬಂದು ಮಾತನಾಡುವವನು ನಾನು.ನಮ್ಮ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರಿಗೂ ನನ್ನ ಬಗ್ಗೆ ಗೌರವವಿದೆ ಪಕ್ಷದ ಪರ ಕೆಲಸ ಮಾಡ್ತಾರೆ ಅಂತ. ನಾನು ಸ್ವಷ್ಟೀಕರಣ ನೀಡುವ ಕೆಲಸ ಮಾಡ್ತಿದ್ದೀನಿ.
ಅಲೋಕ್ ಅವರಿಗೆ ಸೀಟ್ ಸಿಕ್ಕಿಲ್ಲ ಬೇಜಾರಾಗಿದ್ದಾರೆ ಅಂತ ಹೇಳುವುದನ್ನ ಬಿಡಬೇಕು. ಗಾಯವನ್ನ ಮತ್ತೆ ಮತ್ತೆ ಕೆದಕುವ ಕೆಲಸ ಮಾಡಬಾರದು.
ಮುಖಂಡರು ಕಾರ್ಯಕರ್ತರು ಎಲ್ಲಾ ಸೇರಿ ಏನು ಮಾಡಬೇಕು ಅಂತ ಹೇಳ್ತೀವಿ. ಮಾದ್ಯಮದವರು ಹೇಳಿದ್ರು ಅಯ್ಯೋಪಾಪ ಟಿಕೆಟ್ ಸಿಕ್ಕಿಲ್ಲ ಅಂತ ಮಾತನಾಡುವುದನ್ನ ನಿಲ್ಲಿಸಬೇಕು.
ಯಲಹಂಕದಲ್ಲಿ ನಮ್ಮ ಒಗ್ಗಟ್ಟು ಹೊಡೆಯಲು ಸಾಧ್ಯವಾಗಲ್ಲ ಕ್ಷೇತ್ರದ ಜನ ನಮ್ಮ ಜೊತೆ ಪಕ್ಷದ ಜೊತೆ ಇದ್ದಾರೆ. ನಾವು ಸುಧಾಕರ್ ಹೆಸರು ಹೇಳಿ ಓಟ್ ಕೇಳಲ್ಲ ಯಾಕಂದ್ರೆ ಅದು ಮೈನಸ್ ಆಗಬಹುದು.
ಅದಕ್ಕೆ ಮೋದಿ ಹೆಸರು ಹೇಳಿ ಕೇಳ್ತೀವಿ ನಮಗೆ ಪ್ಲಸ್ ಆಗುತ್ತೆ.ಸಿಂಪಥಿಗಳಿಸುವ ಕೆಲಸ ಮಾಡಬಾರದು ನಾವು ಯಾರ ಬಕೆಟ್ ಹಿಡಿಯುವ ಕೆಲಸ ಮಾಡಲ್ಲ.
ಯಡಿಯೂರಪ್ಪ ಅವರು ಗೌರವ ಕೊಡಬೇಕು ಅಂತ ಹೇಳಿದ್ದಾರೆ ಅದನ್ನ ನಾವು ಮಾಡ್ತೀವಿ. ಮೂರ್ನಾಲ್ಕು ದಿನಗಳಿಂದೆ ನನಗೆ ಕಾಲ್ ಮಾಡಿದ್ದರೆ ಅಥವಾ ಹಿಂದೆ ಮೆಸೆಜ್ ಮಾಡಿದ್ದರೇ ಸಾಭಿತುಪಡಿಸಿ ನಾನು ಎಂಎಲ್.ಎ ಸ್ಥಾನಕ್ಕೆ ರಾಜೀನಾಮೆ ನೀಡ್ತಿನಿ,
ಒಂದು ವಾರದ ಹಿಂದೆ ಮಾತ್ರ ನನಗೆ ನಿಮ್ಮ ಭೇಟಿಯಾಗಬೇಕು ಅನ್ನೋದು ಬಿಟ್ಟರೇ ಕಾಲ್ ಮಾಡಿಲ್ಲ,ಯಲಹಂಕದಲ್ಲಿ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿಕೆ.
ಬಹುತೇಕ ಅಸಮಾಧಾನ ಬಿಟ್ಟು ಕೆಲಸ ಮಾಡಲು ಮುಂದಾದ ಯಲಹಂಕ ಶಾಸಕ ವಿಶ್ಚನಾಥ್
Comments