ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ನುಗ್ಗೆ ಮರಗಳು ನೆಲಕ್ಕುರುಳಿ ಬಿದ್ದಿದೆ ; ಬಿರುಗಾಳಿ ಮಳೆಯಿಂದ ರೈತರ ಕನಸು ನುಚ್ಚುನೂರು.....!!

 ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ನುಗ್ಗೆ ಮರಗಳು ನೆಲಕ್ಕುರುಳಿ ಬಿದ್ದಿದೆ ; ಬಿರುಗಾಳಿ ಮಳೆಯಿಂದ ರೈತರ ಕನಸು ನುಚ್ಚುನೂರು.....!!




ಯಲಹಂಕ : ಬಿರುಗಾಳಿ ಸಹಿತ ಮಳೆಯ ಅರ್ಭಟಕ್ಕೆ ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ನುಗ್ಗೆ ಮರಗಳು ನೆಲಕ್ಕುರುಳಿ ಬಿದ್ದಿದೆ, ಕಷ್ಟಪಟ್ಟು ಬೆಳೆದಿದ್ದ ರೈತ ನುಗ್ಗೆಕಾಯಿಗಳನ್ನ ಮಾರುಕಟ್ಟೆಗೆ ಹಾಕಿ ಹಣ ಪಾದನೆ ಮಾಡುವ ಆಸೆ ಇಟ್ಟುಕೊಂಡಿದ್ದ, ಆದನೆ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಮಳೆಯಿಂದ ರೈತರ ಕನಸು ನುಚ್ಚುನೂರಾಗಿದೆ. ಮಳೆಯ ಅರ್ಭಟದಂದಿ ರೈತ ಸುಮಾರು 3 ಲಕ್ಷಕ್ಕೂ ಹೆಚ್ಚು ರೂಪಾಯಿ ನಷ್ಟಕ್ಕೆ ತುತ್ತಾಗಿದ್ದಾನೆ. 


ಅಕಾಲಿಕ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಬಾರಿ ಬಿರುಗಾಳಿ ಮಳೆಗೆ ಬೆಳೆಗಳು ನೆಲಕಚ್ಚಿವೆ.....


ಯಲಹಂಕ ತಾಲೂಕು ಹನಿಯೂರು ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ನುಗ್ಗೆ ತೋಟ ನೆಲಕ್ಕೆರುಳಿದೆ, ರೈತ ಶಾಂತಕುಮಾರ್ ಗ್ರಾಮದ ಸರ್ವೆ ನಂಬರ್ 57/1 ರ ಒಂದು ಎಕರೆ 24 ಗುಂಟೆಯಲ್ಲಿ ನುಗ್ಗೆ ಗಿಡಗಳನ್ನ ಹಾಕಿದ್ರು, ನುಗ್ಗೆಕಾಯಿ ಕೊಯ್ಲು ಪ್ರಾರಂಭವಾಗಿತ್ತು, ಒಮ್ಮೆ ನುಗ್ಗೆಕಾಯಿಗಳನ್ನ ಮಾರುಕಟ್ಟೆಗೆ ಹಾಕಿದ್ರು, ಪ್ರತಿದಿನ ನುಗ್ಗೆಕಾಯಿಯನ್ನ ಮಾರುಕಟ್ಟೆಗೆ ಹಾಕಿ ಲಾಭದ ನಿರೀಕ್ಷೆಯಲ್ಲಿದ್ರು, ಆದರೆ ನಿನ್ನೆಯ ಮಳೆಯ ಅರ್ಭಟದಿಂದ 300ಕ್ಕೂ ಹೆಚ್ಚು ನುಗ್ಗೆ ಮರಗಳು ನೆಲಕ್ಕುರುಳಿವೆ, ಜೊತೆಗೆ ಪರಂಗಿ ಮರಗಳಲ್ಲಿನ ಮೊಗ್ಗುಗಳು ನೆಲಕ್ಕುರುಳಿದೆ.


ರೈತ ಶಾಂತಕುಮಾರ್ ನುಗ್ಗೆ ಬೇಸಾಯಕ್ಕೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ರು, ಹಾಕಿದ ಬಂಡವಾಳಕ್ಕೆ ಒಳ್ಳೇ ಫಸಲು ಬಂದಿತ್ತು, ಫಸಲು ಮಾರಿ ಲಾಭದ ನಿರೀಕ್ಷೆಯಲ್ಲಿದ್ರು, ಆದರೆ ಮಳೆಯ ಹೊಡೆತಕ್ಕೆ ಸುಮಾರು 3 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ತಮ್ಮ ನೋವು ತೋಡಿಕೊಂಡರು.


ಮುಂದಿನ 24 ಗಂಟೆಯಲ್ಲಿ ಮಳೆ ಮುನ್ಸೂಚನೆ

ಏ.22ರಂದು ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ದಕ್ಷಿಣಒಳನಾಡಿನ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಇನ್ನು ರಾಜಧಾನಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 36 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.


ತಾಪಮಾನದ ಮುನ್ಸೂಚನೆ

ಏಪ್ರಿಲ್ 22 ರಿಂದ 25ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.


ಬಿರುಗಾಳಿ ಸಹಿತ ಮಳೆ ಸಾಧ್ಯತೆ

ಏಪ್ರಿಲ್‌ 22ರಂದು ಒಂದು ಅಥವಾ ಎರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಮುಂದಿನ 5 ದಿನಗಳಲ್ಲಿ ಗರಿಷ್ಟ ಉಷ್ಣಾಂಶದಲ್ಲಿ ಕ್ರಮೇಣ 2-3 ಡಿ.ಸೆ ಏರಿಕೆಯಾಗುವ ಸಾಧ್ಯತೆಯಿದೆ.

Comments