ಕಾರ್ Rally ಮೂಲಕ BJPಯ ಶಾಸಕ‌ ವಿಶ್ವನಾಥ್ ಮಗ ಅಲೋಕ್ ವಿಶ್ವನಾಥ್ ಟಿಕೆಟ್ ಗಾಗಿ ಶಕ್ತಿಪ್ರದರ್ಶನ:

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪಕ್ಷ ಗೆಲ್ಲಲು ಪಟತೊಟ್ಟಿದ್ದಾರೆ,ಯಲಹಂಕ ಶಾಸಕ‌ ವಿಶ್ವನಾಥ್ ....

ಯಲಹಂಕ: ಚಿಕ್ಕಬಳ್ಳಾಪುರದ ಬಿಜೆಪಿ ನಾಯಕ ಡಾ.ಕೆ.ಸುಧಾಕರ್ ಗೆ ಸೆಡ್ಡು ಹೊಡೆದು ಯಲಹಂಕ ಶಾಸಕ‌ ವಿಶ್ವನಾಥ್ ಮಗ ಅಲೋಕ್ ಗೆ ಟೆಕೆಟ್ ಕೊಡಿಸಲು ಅಣಿಯಾಗಿದ್ದಾರೆ.ಯಡಿಯೂರಪ್ಪನ ಅತ್ಯಪ್ತಾ ವಿಶ್ವನಾಥ್ ಮಗ ಅಲೋಕ್ ಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ‌ಮಗ್ನರಾಗಿದ್ದಾರೆ.. ಯಲಹಂಕದಿಂದ 2500ಕ್ಕು ಹೆಚ್ಚು ಕಾರುಗಳ ಮೂಲಕ 6ಕ್ಷೇತ್ರ ಬೃಹತ್ ರ್ಯಾಲಿ ನಡೆಸಿ ಹೈಕಮ್ಯಾಂಡ್ ಗೆ ಟಿಕೆಟ್ ಕೊಡಲು ಪರೋಕ್ಷವಾಗಿ ಶಕ್ತಿಪ್ರದರ್ಶನ ನಡೆಸಿದ್ದಾರೆ ಎನ್ನಬಹುದು..ದೇಶದಲ್ಲಿ ಮೋದಿ- ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪಕ್ಷ ಗೆಲ್ಲಲು ಪಟತೊಟ್ಟಿದ್ದಾರೆ..

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಮಲ‌ ಪಕ್ಷವನ್ನರಳಿಸಲು, ದೇಶದಲ್ಲಿ‌ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಯಲಹಂಕ ಬಿಜೆಪಿ ಘಟಕ ಬೃಹತ್ ಕಾರ್ ರ್ಯಾಲಿಯನ್ನಿಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿತ್ತು.. ಸುಮಾರು 2000ಕ್ಕು ಹೆಚ್ಚು ಕಾರುಗಳು ಯಲಹಂಕ ಅಕ್ಷಯ್ ಗಿರೀರ್ ಸರ್ಕಲ್‌ನಿಂದ ದೊಡ್ಡಬಳ್ಳಾಪುರ ನಗರ ಮಾರ್ಗವಾಗಿ ಗೌರಿಬಿದನೂರು ಸೇರಿತು.. ಗೌರಿಬಿದನೂರು ನಗರದಲ್ಲಿ ಶನೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ 2000ಕ್ಕು ಹೆಚ್ಚು ಕಾರುಗಳು ಚಿಕ್ಕಬಳ್ಳಾಪುರ ನಗರಕ್ಕೆ ಬಂದವು.. ಮದ್ಯಾಹ್ನ‌ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವನಹಳ್ಳಿ ಸೇರಿತು ಕಾರು ರ್ಯಾಲಿ.. ಅಲ್ಲಿಂದ ಸಂಜೆ 5ಗಂಟೆಗೆ ಸೂಲಿಬೆಲೆ ಮೂಲಕ ಹೊಸಕೋಟೆ ತಲುಪಿದ ಸಾವಿರಾರು ಕಾರುಗಳು ಬೂದಿಗೆರೆ ಸೇರಿದವು.. ಸಂಜೆ ಅರು ಗಂಟೆ ಬೃಹತ್ ಕಾರು ರ್ಯಸಲಿ ಸಮಾಪ್ತಿಯಾಯ್ತು.. ರ್ಯಾಲಿ ವೇಳೆ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಗೆದ್ದು ದೇಶದಲ್ಲಿ ಮತ್ತೆ ಮೋದಿ‌ ಪ್ರಧಾನಿಯಾಗಬೇಕೆಂದರು..


ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಪಕ್ಷದ ಚುನಾವಣಾ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಚಿಕ್ಕಬಳ್ಳಾಪುರ ‌ಲೋಕಸಭಾ ಕ್ಷೇತ್ರದ ಬಿಜೆಪಿಯ ‌ಟಿಕೆಟ್ ಆಕಾಂಕ್ಷಿ ಅಲೋಕ್ ವಿಶ್ವನಾಥ್ 2000ಕಾರುಗಳ ಬೃಹತ್ ರ್ಯಾಲಿಗೆ ಚಾಲನೆ ನೀಡಿದರು.. ಯುವಕರು ರಾಜಕೀಯಕ್ಕೆ ಬರಬೇಕೆಂಬ ಪ್ರಧಾನಿಯವರ ಆಶಯದಂತೆ ಅಲೋಕ್ ವಿಶ್ವನಾಥ್ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.. ಯುವಕರ ಆರ್ಭಟ ಜೋರು ನೋಡುತ್ತಿದ್ದರೆ ಅಲೋಕ್ ವಿಶ್ವನಾಥ್ ಗೆ ಟಿಕೆಟ್ ಸಾಧ್ಯತೆ‌ ಬಹಳ ಹೆಚ್ಚಾಗಿದೆ ಎಂದು ಬಿಜೆಪಿ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದರು..

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಸಲ ಯುವಕರು‌ ಮತ್ತು ಹಿರಿಯರ‌ ನಡುವೆ ಸ್ಪರ್ದ ರಣಾಂಗಣವಾಗಿ ಮಾರ್ಪಡುತ್ತಿದೆ.. ಒಂದ್ಕಡೆ ಕಾಂಗ್ರೆಸ್ ಪಕ್ಷದ ರಕ್ಷಾರಾಮಯ್ಯ ಅನುಭವಿ ವೀರಪ್ಪಮೊಯ್ಲಿಗೆ ಸೆಡ್ಡು ಹೊಡೆದು ಟಿಕೆಟ್ ಪಡೆಯಲು ಸರ್ವ ಪ್ರಯತ್ನ‌ ಮಾಡ್ತಿದ್ದಾರೆ, ಇತ್ತ ಬಿಜೆಪಿ ಪಕ್ಷದಲ್ಲು ಯಲಹಂಕ ಶಾಸಕ‌ ಎಸ್.ಆರ್.ವಿಶ್ವನಾಥ್ ಮಗ ಅನುಭವಿ ಡಾ.ಕೆ‌.ಸುಧಾಕರ್ ಗು ಸೆಡ್ಡು‌ ಹೊಡೆದು ಟಿಕೆಟ್ ಪಡೆಯುತ್ತಾರೆ.. ಅದಕ್ಕೆ ಈ ಬೃಹತ್ ಕಾರ್ ರ್ಯಾಲಿಯೇ ಸಾಕ್ಷಿ ಎನ್ನುತ್ತಿದೆ ಚಿಕ್ಕಬಳ್ಳಾಪುರ ‌ರಾಜಕೀಯ ಪಡಸಾಲೆ..



Comments