ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ವೋಟಿಂಗ್ ಪರ್ಸೆಂಟೇಜ್ ಕಡಿಮೆ ಯಾಗುತ್ತೆ ಯಾಕೆ ಗೊತ್ತಾ ಈ ಸುದ್ದಿ ನೋಡಿ.....

ಮತದಾನ ಹೆಚ್ಚಾಗಬೇಕು ಅನ್ನೋ ಎಲೆಕ್ಷನ್ ಕಮಿಷನ್  ನಿಂದಲೇ ಈಗ ದೊಡ್ಡ ಯಡವಟ್ಟು ....


ಬೆಂಗಳೂರಿನ ಜನ ರಜಾ ಸೀಕ್ರೆ ಸಾಕು ಅಂತ ಕಾಯ್ತಿರ್ತಾರೆ. ಅದರಲ್ಲಿ ಮೂರು ದಿನ ರಜೆ ಸಿಕ್ಕರೆ ಯಾರ್ ತಾನೇ ಬಿಡ್ತಾರೆ ಹೇಳಿ.....


 2024ರ ಲೋಕಸಭಾ ಚುನಾವಣೆ ಕರ್ನಾಟಕದ ಮೊದಲನೇ ಹಂತದಲ್ಲಿ ನಡೆಯುವಂತಹ ಚುನಾವಣೆ ಏಪ್ರಿಲ್ 26 ಶುಕ್ರವಾರ ಇರುವ ಕಾರಣ ಶುಕ್ರವಾರ ರಜಾ ಘೋಷಣೆಯಾಗಿರುತ್ತೆ. ಹಾಗೆ ಶನಿವಾರ ಹಾಗೂ ಭಾನುವಾರ ಎರಡು ದಿನವೂ ಕೂಡ ರಜೆ ಇರುತ್ತೆ ಈ ನಿಟ್ಟಿನಲ್ಲಿ ಜನತೆ ಮೂರು ದಿನ ರಜೆ ಸಿಗುತ್ತೆ ಅನ್ನೋ ಐಡಿಯಾದಲ್ಲಿ ಲಾಂಗ್ ಟ್ರಿಪ್ ಪ್ಲಾನ್ ಮಾಡ್ತಾರೆ...


ಖಂಡಿತ ಈ ರೀತಿ ಮೂರು ದಿನ ರಜೆ ಸಿಕ್ಕಾಗ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಪರ್ಸೆಂಟೇಜ್ ಕಡಿಮೆ ಆಗಬಹುದು ಆಗುವ ಎಲ್ಲಾ ಸಾಧ್ಯತೆಗಳು ಇದೆ.



ರಾಜ್ಯದ ಮೊದಲ ಹಂತದ ಚುನಾವಣೆ ಯಾವ ಜಿಲ್ಲೆಗಳಲ್ಲಿ ನಡೆಯುತ್ತೆ ಅಂತ ನೋಡೋದಾದ್ರೆ  

ಏಪ್ರಿಲ್ 26 ರಂದು ಮೊದಲ ಹಂತದ ಎಲೆಕ್ಷನ್ಎಲ್ಲೆಲ್ಲಿ ಮತದಾನ?

ಬೆಂಗಳೂರು ಉತ್ತರ

ಚಾಮರಾಜನಗರ

ಬೆಂಗಳೂರು ದಕ್ಷಿಣ

ಚಿತ್ರದುರ್ಗ

ಬೆಂಗಳೂರು ಕೇಂದ್ರ

ಹಾಸನ

ಬೆಂಗಳೂರು ಗ್ರಾಮಾಂತರ

ತುಮಕೂರು

ಕೋಲಾರ

ಚಿಕ್ಕಬಳ್ಳಾಪುರ

ಮಂಡ್ಯ

ಮೈಸೂರು-ಕೊಡಗು

ದಕ್ಷಿಣ ಕನ್ನಡ

'ಉಡುಪಿ-ಚಿಕ್ಕಮಗಳೂರು


 ಈ ಎಲ್ಲ ಜಿಲ್ಲೆಗಳಲ್ಲೂ ಕೂಡ ಮತದಾನದ ಪರ್ಸೆಂಟೇಜ್ ಕಡಿಮೆ ಆಗುವ ಸಾಧ್ಯತೆಗಳು ಕಂಡು ಬರುತ್ತದೆ. ಈ ವಿಧಾನಸಭಾ ಕ್ಷೇತ್ರಗಳು ಕೂಡ ಇರುವ ಹಿನ್ನೆಲೆಯಲ್ಲಿ ಈ ಒಂದು ನಿಟ್ಟಿನಲ್ಲಿ ಅತಿ ಕಡಿಮೆ ಮತದಾನ ಆಗುವ ನಿರೀಕ್ಷೆ ಕಂಡು ಬರುತ್ತಾ?


ಪ್ರತಿ ಬಾರಿಯ ಚುನಾವಣೆಯಲ್ಲಿ ಕೂಡ ಈ ರೀತಿಯಾಗಿ ಶುಕ್ರವಾರ ಅಥವಾ ಸೋಮವಾರ ಇದ್ದಂತಹ ಸಂದರ್ಭದಲ್ಲಿ ವೋಟಿಂಗ್ ಪರ್ಸೆಂಟೇಜ್ ಕಡಿಮೆಯಾದಂತಹ ಉದಾಹರಣೆಗಳು ತುಂಬಾನೇ ಇದೆ..


ಆದರೆ ಈ ಬಾರಿಯ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯು ಕೂಡ ಶುಕ್ರವಾರವೇ ಇರುವ ಕಾರಣದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪರ್ಸೆಂಟೇಜ್ ಕಡಿಮೆ ಆಗೋ ಎಲ್ಲ ಸಾಧ್ಯತೆಗಳು ಇಲ್ಲಿ ಕಂಡು ಬರ್ತಾ ಇದೆ.

 

ಇದಕ್ಕೆ ಪರಿಹಾರವಾದ್ರು ಏನು..

Comments