ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ ಅನಂತ ಕುಮಾರ್ ಹೆಗ್ಡೆ ಒಬ್ಬ ಅಯೋಗ್ಯ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ವಾಗ್ದಾಳಿ- ಸಾರಥಿ ಟಿವಿ ನ್ಯೂಸ್

ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ  ಅನಂತ್ ಕುಮಾರ್ ಹೆಗ್ಡೆ ರಾಜ್ಯದಲ್ಲಿ ದ್ವೇಷಭಾವನೆ ಮೂಡಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಜಿ.ಲಕ್ಷ್ಮೀಪತಿ ವಾಗ್ದಾಳಿ


ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯರು ಮತ್ತು ಕಾಂಗ್ರೆಸ್ ವಕ್ತಾರ ಜಿ ಲಕ್ಷ್ಮೀಪತಿ ಮಾತನಾಡಿ

ಮುಂಬರುವ ಲೋಕಸಭಾ ಚುಣಾವಣೆಯಲ್ಲಿ 400 ಸ್ಥಾನಗಳು ಬಂದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು  ಹೇಳಿರುವುದು ಸಂವಿಧಾನದಕ್ಕೆ ಮಾಡಿದ ಅಪಮಾನ  ಹಾಗೂ ಅಕ್ಷಮ್ಯ ಅಪರಾಧ,  ಕಾಂಗ್ರೆಸ್ ಪಕ್ಷವು ಇಂತಹ ಕ್ಷುಲ್ಲಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ, ಇದರ ವಿರುದ್ಧ ಕಾಂಗ್ರೆಸ್ ವತಿಯಿಂದ ಉಗ್ರ  ಪ್ರತಿಭಟನೆ ನಡೆಸಲಾಗುವುದು.

ಪದೇ ಪದೇ ಜನರನ್ನ ಪ್ರಚೋದನಕಾರಿ ಹೇಳಿಕೆಗಳನ್ನ ನೀಡುವ ಮೂಲಕ ಜನರಲ್ಲಿ ಗೊಂದಲ ಹಾಗೂ ದ್ವೇಷಮಯ ವಾತವರಣ ಸೃಷ್ಟಿ ಮಾಡುತ್ತಿದ್ದಾರೆ.


ಅವನೊಬ್ಬ ಅಯೋಗ್ಯ ಅವನಿಗೆ ನಾನು ಗೌರವ ಕೊಡುವುದಿಲ್ಲ, ಗೌರವ ಕೊಡುವಂತಹದನ್ನು ಅವನು ಉಳಿಸಿಕೊಂಡಿಲ್ಲ. ಅವನು ಸಂಸದಾರಾಗಿ ಪ್ಎಮಾಣವಚನ ಸ್ಪೀಕಾರ ಮಾಡಿದ್ದು ಇದೇ ಸಂವಿದಾನದ ಅಡಿಯಲ್ಲಿ ಅನ್ನೋದು ಮರೆತು ಇವತ್ತು ಸಂವಿದಾನದ ವಿರೋದವಾಗಿ ಮಾತನಾಡುತ್ತಾನೆ ಎಂದು ಎರಕವಚನದಲ್ಲೇ ವಾಗ್ದಾಳಿ ನಡೆಸಿದರು.


3ನೇ ೧ರಷ್ಟು, ಬಹುಮತ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿರುವುದನ್ನ ಬಿಜೆಪಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ವಿರೋಧಿಸಿಲ್ಲ.

8 ದಿನಗಳೊಳಗಾಗಿ ಅನಂತ ಕುಮಾರ್ ಹೆಗಡೆ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡದಿದ್ದರೆ  ಬೃಹತ್ ಮಟ್ಟದಪ್ರತಿಭಟನೆ ನಡೆಸಲಾಗುವುದು.

ಚುನಾವಣೆ ಬಾಂಡ್ ಬಹಿರಂಗ ಮಾಡಿದರೆ ಬಿಜೆಪಿಗೆ ಭಾರೀ ಮುಖಭಂಗ ಆಗುತ್ತದೆ ಈ ನಿಟ್ಟಿನಲ್ಲಿ ಬಿಜೆಪಿ ಜನರ ಗಮನವನ್ನ ಬೇರೆ ಕಡೆ ತಪ್ಪಿಸಲು ಸಿಎಎ ಜಾರಿ ಮಾಡಿದೆ . 


ಇನ್ನು ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು,ಕಸಬಾ ಬ್ಲಾಕ್ ಅದ್ಯಕ್ಷ ಭೈರೆಗೌಡ, ನಗರ ಬ್ಲಾಕ್ ಅದ್ಯಕ್ಷ ಕೆ.ಪಿ.ಜಗನ್ನಾಥ್ ಉಪಸ್ಥಿತರಿದ್ದರು.


Comments