ಹೆಣ್ಣು ಸಂಸಾರದ ಕಣ್ಣು;ಸ್ವಯಂ ದುಡಿಮೆಯಿಂದ ಸ್ವಾವಲಂಭಿಯಾಗಿ ಜೀವನ ನಡೆಸಬೇಕು-ಸಮಾಜ ಸೇವಕಿ ಶಾರದಮ್ಮ

                     ನೆಹರುಯುವ ಕೇಂದ್ರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ.

       ನಾರಿ ಶಕ್ತಿ ಪಿಟ್ ನೆಸ್ ರನ್ಸ್ ನಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಬಹುಮಾನ ವಿತರಣೆ 

ಶಿಡ್ಲಘಟ್ಟ :-ನಗರದ ಕೆಕೆ ಪೇಟೆಯಲ್ಲಿ ಇಂದು ನೆಹರು ಯುವ ಕೇಂದ್ರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ದಿವ್ಯ ಜ್ಯೋತಿ ಮಹಿಳಾ ಸಂಘ  ಹಾಗೂ ಆರುಂಧತಿ ಮಹಿಳಾ ಸಂಘ ಇವರ ಸಹಯೋಗದಲ್ಲಿ ಮಹಿಳಾ ಸಬಲೀಕರಣದ ಕುರಿತು ಅರಿವು ಮತ್ತು ನಾರಿ ಶಕ್ತಿ ಪಿಟ್ ನೆಸ್ ರನ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಘನ ಉಪಸ್ಥಿತಿಯನ್ನು ವಹಿಸಿದ್ದ ಮಹಿಳಾ ಸಮಾಜ ಸೇವಕಿ ಶಾರದಮ್ಮ ಮಾತನಾಡಿ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಬಾರದು ಹೆಣ್ಣು ಸಂಸಾರದ ಕಣ್ಣು ಆಗಬೇಕು ಪ್ರತಿಯೊಬ್ಬ ಮಹಿಳೆಯ ಗ್ರಾಮೀಣ ಮಹಿಳಾ ಗುಂಪುಗಳು ಕರ ಕುಶಲ ಮತ್ತು ವೌಲ್ಯವರ್ಧಿತ ಉತ್ಪನ್ನಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವ ಮೂಲಕ ಆದಾಯ ಅಭಿವೃದ್ಧಿಯನ್ನು ಮಾಡಿಕೊಂಡು ಸ್ವಯಂ ದುಡಿಮೆ ಸ್ವವಲಂಭಿಯಾಗಿ ಜೀವನ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಅತಿಥಿಯಾಗಿ ಆಗಮಿಸಿದ್ದ ಮಂಜುಳಾ ಮಾತನಾಡಿ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡುತ್ತಿದ್ದಾರೆ.ಪ್ರತಿ ಯಶಸ್ವಿ ಮಹಿಳೆಯ ಹಿಂದೆ ತನ್ನದೇ ಆದ ಚರಿತ್ರೆ ಮತ್ತು ಇತಿಹಾಸ ಇದ್ದೇ ಇರುತ್ತದೆ. ಆದರೆ, ಈ ಎಲ್ಲ ಕಷ್ಟಗಳನ್ನು ಧೈರ್ಯವಾಗಿ  ಗಂಡು ಹೆಣ್ಣು ಎಂಬ ಭಾವನೆ ಇಲ್ಲದೆ ಧೈರ್ಯವಾಗಿ ಎದುರಿಸಬೇಕು 

ಮಹಿಳೆಯರು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಿಸಬೇಕು.ಆಗ ಅವಳು ತನ್ನ ಕುಟುಂಬದ ಎಲ್ಲರಲ್ಲೂ ತಿಳಿವಳಿಕೆ ಮೂಡಿಸುತ್ತಾಳೆ  ಆದ್ದರಿಂದ ಮಹಿಳಾ ಸಶಸ್ತ್ರೀಕರಣಕ್ಕೆ, ಸಬಲೀಕರಣಕ್ಕೆ ಶಿಕ್ಷಣವೇ ಮೂಲವಾಗಿದೆ ಎಂದರು. ಇದರ ಜೊತೆಗೆ ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಹ ಕೇವಲ ಒಂದು ಜಾತಿಗೆ ಸೀಮಿತವಲ್ಲ. ಆದರೆ ಆಡಳಿತ ಸರಕಾರಗಳು ಹಾಗೆ ಮಾಡಿವೆ.ಇವತ್ತಿನ ದಿನ ನೀವೆಲ್ಲ ನಿಮ್ಮ ತಂದೆ ಆಸ್ತಿಯಲ್ಲಿ ಹಕ್ಕನ್ನು ಪಡೆಯಬೇಕು ಎಂದರೆ.ಸರಕಾರಿ ಸೇವೆಯಲ್ಲಿರುವ ಹೆಣ್ಣು ಮಕ್ಕಳಿಗೆ ಹೆರಿಗೆ ಸಮಯದಲ್ಲಿ ಹೆರಿಗೆ ರಜಾ. ಸಮಾನ ಶಿಕ್ಷಣ, ಸೇರಿದಂತೆ ಮೂಲಭೂತ ಹಕ್ಕುಗಳನ್ನು ಸಂವಿಧಾನ ನಮಗೆ ಒದಗಿಸಿಕೊಟ್ಟಿದೆ.  ಎಲ್ಲಾ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದರು.

ಇದೆ ವೇಳೆ ನಾರಿ ಶಕ್ತಿ ಪಿಟ್ ನೆಸ್ ರನ್ಸ್ ನಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಪ್ರಥಮ ದ್ವಿತೀಯ ಬಹುಮಾನಗಳನ್ನು ವಿತರಣೆ ಮಾಡಲಾಯಿತು 

ಇನ್ನು ಇದೆ ಸಂದರ್ಭದಲ್ಲಿ ಆರುಂಧತಿ ಮಹಿಳಾ ಸಂಘ ಅಧ್ಯಕ್ಷರು ಮುನಿರತ್ನ, ಧರ್ಮ ಸ್ಥಳ ಸಂಘದ ಮಾಲಾವತಿ, ಮಂಜುಳಾ,ಮತ್ತಿತ್ತರರು ಹಾಜರಿದ್ದರು.

Comments