ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಕೆ ಸುಧಾಕರ್ ಫೈನಲ್,ಅಲೋಕ್ ವಿಶ್ವನಾಥ್ ಗೆ ನಿರಾಸೆ -ಸಾರಥಿ ಟಿವಿ ನ್ಯೂಸ್
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಕೆ ಸುಧಾಕರ್ ಫೈನಲ್
ಬಿಜೆಪಿ ತನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾನುವಾರ ರಾತ್ರಿ ಬಿಡುಗಡೆ ಮಾಡಿದೆ.ಕರ್ನಾಟಕದಲ್ಲಿ 8 ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡದೆ,ಉಳಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್ ಈಗ 4 ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಲೋಕಸಭಾ ಚುನಾವಣೆಯ ಬಿಜೆಪಿಯ ಪಟ್ಟಿ ಬಿಡುಗಡೆ - ಸಾರಥಿ ಟಿವಿ ನ್ಯೂಸ್
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಾಕ್ಟರ್ ಕೆ ಸುಧಾಕರ್ ಅವರನ್ನ ಘೋಷಿಸಿದೆ.
ಅದೇ ರೀತಿ ಬೆಳಗಾವಿಗೆ ಜಗದೀಶ್ ಶೆಟ್ಟರ್ ರಾಯಚೂರಿಗೆ ರಾಜ ಅಮರೇಶ್ವರ ನಾಯಕ್, ಉತ್ತರ ಕರ್ನಾಟಕಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿದೆ. ಉತ್ತರ ಕನ್ನಡ ಕ್ಷೇತ್ರ ದಿಂದ ನಿರೀಕ್ಷೆಯಲ್ಲಿದ್ದಂತಹ ಅನಂತ್ ಕುಮಾರ್ ಹೆಗಡೆಯವರಿಗೆ ಟಿಕೆಟ್ ಕಾಯ್ತಪ್ಪಿದೆ.
ಏನೇ ಆಗಲಿ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಡಾ. ಕೆ ಸುಧಾಕರವನ್ನು ಆಯ್ಕೆ ಮಾಡಿರುವುದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಂತಹ ಯಲಂಕ ಶಾಸಕ ಎಸ್ ಆರ್ ವಿಶ್ವನಾಥ್ ರವರ ಪುತ್ರ ಅಲೋಕ್ ವಿಶ್ವನಾಥ್ ರವರಿಗೆ ನಿರಾಸೆ ಎದುರಾಗಿದೆ.
Comments