ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ | ಎಸ್.ಆರ್.ವಿಶ್ವನಾಥ್ ಮನೆಗೆ ಭೇಟಿಗೆ ಬಂದು ಬರಿಗೈಲಿ ವಾಪಸ್...!!
ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಎಸ್.ಆರ್.ವಿಶ್ವನಾಥ್ ಮನೆಗೆ ಭೇಟಿಗೆ ಬಂದು ಬರಿಗೈಲಿ ವಾಪಸ್
ಯಲಹಂಕ ತಾಲೂಕು ಸಿಂಗನಾಯಕನಹಳ್ಳಿಯಲ್ಲಿರುವ ಶಾಸಕ ಎಸ್.ಆರ್.ವಿಶ್ವನಾಥ್ ಮನೆ
ಇಂದು ಬೆಳಗ್ಗೆ 9-30ಕ್ಕೆ ಬಂದು ವಿಶ್ವನಾಥ್ ರನ್ನ ಭೇಟಿಯಾಗದೆ ವಾಪಸ್ ತೆರಳಿದ ಡಾ.ಕೆ.ಸುಧಾಕರ್
ಸಿಂಗನಾಯಕನಹಳ್ಳಿ ಮನೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಇಲ್ಲದ ವೇಳೆ ಬಂದಿದ್ದ ಡಾ.ಕೆ.ಸುಧಾಕರ್
ಬೆಂಗಳೂರಿನಲ್ಲಿ ಆಪ್ತರ ಗೃಹಪ್ರವೇಶಕ್ಕೆ ಬೆಳಗ್ಗೆ 8ಗಂಟೆಗೆ ಮನೆಯಿಂದ ತೆರಳಿದ್ದ ಎಸ್.ಆರ್..ವಿಶ್ವನಾಥ್
ಬಂದ ದಾರಿಗೆ ಸುಂಕವಿಲ್ಲದೆ ತೆರಳಿದ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್
ಪ್ರಾರಂಭದಲ್ಲಿ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಗ ಅಲೋಕ್ ಗೆ ಬಿಜೆಪಿ ಟಿಕೆಟ್ ಗೆ ಪೈಪೋಟಿ ನಡೆಸಿದ್ದರು
ನಂತರ ಪರಸ್ಪರ ಆರೋಪ ಪ್ರತ್ಯಾರೋಪ ನಡೆದಿತ್ತು
ಮಗನಿಗೆ ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್ ಬದಲು ಡಾ.ಕೆ.ಸುಧಾಕರ್ ಗೆ ಟಿಕೆಟ್ ಸಿಕ್ಕಿರುವ ಬಗ್ಗೆ ವಿಶ್ವನಾಥ್ ಅಸಮಾಧಾನ
ಈ ಹಿನ್ನಲೆ ಪರಸ್ಪರ ಅಸಮಾಧಾನ ಹೋಗಲಾಡಿಸಲು ಯಲಹಂಕ ವಿಶ್ವನಾಥ್ ಮನೆ ಭೇಟಿಗೆ ಬಂದಿದ್ದ ಡಾ.ಕೆ.ಸುಧಾಕರ್..
Comments