ಪಟ್ಟಿಯಲ್ಲಿ ಯಾರ್ಯಾರ ಹೆಸರನ್ನು ಸೇರಿಸಲಾಗಿದೆ ಯಾರ್ಯಾರನ್ನ ಕೈ ಬಿಡಲಾಗಿದೆ ಎಂಬುದನ್ನ ನೀವೇ ನೋಡಿ....
ಬಿಜೆಪಿಯ ಹೈಕಮಾಂಡ್ ಈಗಾಗಲೇ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ 2ನೇ ಪಟ್ಟೆ ರಿಲೀಸ್ ಮಾಡಿದ್ದು 20 ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ ಇವರಲ್ಲಿ ಎಂಟು ಹಾಲಿ ಸದಸ್ಯರಿಗೆ ಟಿಕೆಟ್ ಮೀಸಲು ಆಗಿದೆ ಇವರಲ್ಲಿ ಕೆಲವರು ಈಗಾಗಲೇ ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದರು
20 ಜನ ಬಿಜೆಪಿ ಅಭ್ಯರ್ಥಿಗಳು ಯಾರು ಅಂತ ನೋಡೋದಾದ್ರೆ...
*ಚಿಕ್ಕೋಡಿಯಿಂದ ಅಣ್ಣ ಸಾಹೇಬ್ ಜೊಲ್ಲೆ
*ಬಾಗಲಕೋಟೆ ಯಿಂದ ಪಿಸಿ ಗದ್ದಿಗೌಡರ್
*ವಿಜಯಪುರ ಯಿಂದ ರಮೇಶ್ ಜಿಗಜಿಣಗಿ
*ಕಲ್ಬುರ್ಗಿಯಿಂದ ಡಾ ಉಮೇಶ್ ಜಾದವ್
*ಬೀದರ್ ನಿಂದ ಭಗವಂತ್ ಕೂಬಾ
*ಕೊಪ್ಪಳದಿಂದ ಡಾ ಬಸವರಾಜು ಕ್ಯಾವತೂರು
*ಬಳ್ಳಾರಿಯಿಂದ ಬಿ ಶ್ರೀರಾಮುಲು
*ಹಾವೇರಿ ಯಿಂದ ಬಸವರಾಜ ಬೊಮ್ಮಾಯಿ
*ಧಾರವಾಡದಿಂದ ಪ್ರಹ್ಲಾದ್ ಜೋಶಿ
*ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ
*ಶಿವಮೊಗ್ಗ ಇಂದ ಬಿ ವೈ ರಾಘವೇಂದ್ರ
*ಉಡುಪಿ ಚಿಕ್ಕಮಗಳೂರು ಕೋಟ ಶ್ರೀನಿವಾಸ್ ಪೂಜಾರಿ.
*ದಕ್ಷಿಣ ಕನ್ನಡ ಕ್ಯಾಪ್ಟನ್ ಬ್ರಿಗೇಶ
*ತುಮಕೂರು ವಿ ಸೋಮಣ್ಣ
*ಮೈಸೂರು ಯದುವೀರ್ ಕೃಷ್ಣ ದತ್ತ ಒಡೆಯರ್
*ಚಾಮರಾಜನಗರ ಎಸ್ ಬಾಲರಾಜ್,
*ಬೆಂಗಳೂರು ಗ್ರಾಮಾಂತರ ಡಾ ಸಿಎನ್ ಮಂಜುನಾಥ್
*ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ
*ಬೆಂಗಳೂರು ಸೆಂಟ್ರಲ್ ಪಿಸಿ ಮೋಹನ್
*ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ
ಇನ್ನು ಘೋಷಣೆ ಮಾಡದ ಎಂಟು ಕ್ಷೇತ್ರಗಳು ಯಾವ್ಯಾವುದು ಅಂತ ನೋಡೋದಾದ್ರೆ ಉತ್ತರ ಕನ್ನಡ ಬೆಳಗಾವಿ ಚಿಕ್ಕಬಳ್ಳಾಪುರ ಚಿತ್ರದುರ್ಗ ರಾಯಚೂರು ಈ ಐದು ಕ್ಷೇತ್ರಗಳು ಬಿಜೆಪಿಗೆ ಟಿಕೆಟ್ ಪಕ್ಕ ಆಗಿದೆ
ಹಾಗೆ ಈ ಬಾರಿ 8 ಜನ ಹಾಲಿ ಸಂಸದರಿಗೆ ಬಿಜೆಪಿ ಯಿಂದ ಟಿಕೆಟ್ ಮಿಸ್ಸಾಗಿದೆ
*ಡಿ ವಿ ಸದಾನಂದ ಗೌಡ
* ನವೀನ್ ಕುಮಾರ್ ಕಟೀಲ್
*ಪ್ರತಾಪ್ ಸಿಂಹ
* ಶಿವಕುಮಾರ್ ಉದಾಸಿ
* ದೇವೇಂದ್ರಪ್ಪ
*ಜಿ ಎನ್ ಬಸವರಾಜು
*ಜಿಎಂ ಸಿದ್ದೇಶ್ವರ್
* ಶ್ರೀನಿವಾಸ್ ಪ್ರಸಾದ್
ಇನ್ನುಳಿದ ಮೂರು ಕ್ಷೇತ್ರ ಯಾವುದು ಅಂತ ನೋಡೋದಾದ್ರೆ
*ಹಾಸನ
*ಮಂಡ್ಯ
*ಕೋಲಾರ
ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿರುವ ಕಾರಣ ಹಾಸನ ಮಂಡ್ಯ ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಜೆಪಿ ಬಿಟ್ಟುಕೊಂಡಿದೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರವರು ಹಾಸನದಲ್ಲಿ ಬುಧವಾರ ಘೋಷಣೆ ಮಾಡಿದ್ದಾರೆ ಇನ್ನು ಮಂಡ್ಯದಲ್ಲಿ ಸಿಎಸ್ ಪುಟ್ಟ ಪುಟ್ಟರಾಜು ಕೋಲಾರದಲ್ಲಿ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ
ಬಿಜೆಪಿಗೆ ಕರ್ನಾಟಕದ ಅತಿ ಮುಖ್ಯ ರಾಜ್ಯ ಯಾವುದು ಅಂತ ನೋಡುವುದಾದ್ರೆ
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕವೇ ದೊಡ್ಡ ರಾಜ್ಯವಾಗಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 25 + 1 ಸೀಟನ್ನು ಗೆದ್ದು ಬೀದಿರುವ ಬಿಜೆಪಿಯೂ ಈ ಬಾರಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ ಹೀಗಾಗಿ 28 ಕ್ಷೇತ್ರಗಳಲ್ಲಿ 28 ಕ್ಷೇತ್ರವನ್ನು ಗೆಲ್ಲಲು ರಣತಂತ್ರವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಟಿಕೆಟ್ ನೀಡಲು ಹಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಅಂತನೆ ಹೇಳಬಹುದು.....
Comments