ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಕೆ ವಿವಾದ..!!
ನಮಗೂ ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ಸಂಬಂಧ ಇಲ್ಲ ಎಂದ ರಾಜ್ಯ ಬಿಜೆಪಿ..!!
ವಿವಾದ ತೀವ್ರವಾಗುತ್ತಿದ್ದಂತೆ ರಾಜ್ಯದಾದ್ಯಂತ ಹೆಗಡೆ ವಿರುದ್ಧ ಜನಾಕ್ರೋಶ..!!
ಬೆಂಗಳೂರು ಪೂರ್ವ ಹೆಣ್ಣೂರಿನಲ್ಲಿ ಮಹಾನಾಯಕ ಹರೀಶ್ ಬಾಬು ವಾಗ್ದಾಳಿ..!!
2024ರ ಲೋಕಸಭಾ ಚುನಾವಣೆಯನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಉಮೇದಿಗೆ ಬಿದ್ದ ಕೇಂದ್ರ ಬಿಜೆಪಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸಂವಿಧಾನ ಬದಲಾವಣೆ ಹೇಳಿಕೆ ಕೊಡಿಸುತ್ತಿದೆ.. ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹೈಕಮ್ಯಾಂಡ್ ಅಂನಂತ್ ಕುನಾರ್ ಬಾಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ನಾನೂರು ಸೀಟ್ ಗೆದ್ದರೆ ಸಂವಿಧಾನ ಬದಲಾವಣೆ ಖಚಿತ ಎಂಬ ಹೇಳಿಕೆ ಕೊಡಿಸುತ್ತಿದ್ದಾರೆ..
ಇದು ಖಂಡನೀಯ ಎಂದು ರಾಜ್ಯದಾದ್ಯಂತ ಸಂಸದ ಅನಂತ್ ಕುಮಾರ್ ವಿರುದ್ಧ ಜನಾಕ್ರೋಶ ವ್ಯಕ್ತವಾಗ್ತಿದೆ. ಸಂಸತ್ತಿನಲ್ಲಿ ತುಟಿ ಬಿಚ್ಚದ, ಪ್ರದಾನಿಗಳ ಬಳಿ ತುಟಿಪಿಟಕ್ ಎನ್ನದ ಸಂಸದ ಅನಂತ್ ಕುಮಾರ್ 2024ಲೋಕಸಭಾ ಚುನಾವಣೆ ಬರ್ತಿದ್ದಂತೆ ಒಂದೊಂದೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ಎಲ್ಲರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ.. ಇ ರೀತಿಯ ವಿವಾದಾತ್ಮಕ ಹೇಳಿಕೆಯಿಂದ ಹಿಂದೂಗಳ ಮತ ಕ್ರೋಡಿಕರಣ ಮಾಡಿಕೊಳ್ಳಲು ಹೆಗಡೆಯ ನಾಲಿಗೆಯ ಮೇಲೆ ಈ ರೀತಿಯ ಮಾತು ಕುಣಿಯುವಂತೆ ಮಾಡಲಾಗ್ತಿದೆ..
ಇದೊಂದು ಯೋಜನಾಬದ್ದ ಕುತಂತ್ರದ ಪ್ರಚಾರವೆಂದು ಬೆಂಗಳೂರು ಪೂರ್ವ ಹೆಣ್ಣೂರು ಭಾಗದ ಮಹಾನಾಯಕ ಸಂಘಟನೆಯ ಅಧ್ಯಕ್ಷರಾದ ಹರೀಶ್ ಬಾಬು ಅನಂತ್ ಕುಮಾರ್ ಹೇಳಿಕೆ ವಿರುದ್ಧ ಕೆಂಡಕಾರಿದ್ದಾರೆ.. ಬೆಂಗಳೂರಿನ ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಕೆ.ಜಿ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳನ್ಮುದ್ದೇಶಿಸಿ ಮಾತನಾಡಿ ಆಕ್ರೋಶ ಹೊರಹಾಕಿದರು.. ಸಂಸದ ಅನಂತ್ ಕುಮಾರ್ ಕ್ಷೇತ್ರದಲ್ಲಿ ದಲಿತರ ಮತ ತೀರಾ ಕಡಿಮೆ.. ಅಲ್ಲಿ ಬರದಿದ್ದರೂ ಪರ್ವಾಗಿಲ್ಲ ಹಿಂದೂಗಳ ಮತ, ಸಂವಿಧಾನ ಬದಲಾವಣೆ ಮಾಡಬೇಕೆಂಬವರ ಮತಗಳ ಕ್ರೋಡೀಕರಣಕ್ಕೆ ಈ ರೀತಿಯ ಹೇಳಿಕೆ ಪೂರಕವಾಗ್ತವೆ ಎಂಬುದು ಬಿಜೆಪಿ ಪಕ್ಷದ ಹಿಡೆನ್ ಅಜೆಂಡಾ ಎಂದು ಮಹಾನಾಯಕ ಸಂಘಟನೆಯ ಹರೀಶ್ ಬಾಬು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.. ಇದೇ ವೇಳೆ ಅಯೋದ್ಯೆ ರಾಮ ಮಂದಿರ ದೇವಸ್ಥಾನ ನಿರ್ಮಾಣ ಕೆಲಸ ಇನ್ನು ಪೂರ್ಣವಾಗಿಲ್ಲ.. ಆದರೂ ಜನರನ್ನು ಮರಳು ಮಾಡಲು ಅಪೂರ್ಣವಾದ ರಾಮ ಮಂದಿರದ ಹೆಸರೇಳಿಕೊಂಡು 2024ರ ಲೊಕಸಭೆ ಗೆಲ್ಲಲು ಹೊರಟಿದ್ದಾರೆ.. ಶ್ರೀರಾಮ ದೇವರ ಹೆಸರಲ್ಲಿ ಬಿಜೆಪಿ ಪಕ್ಷ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡು ಎಂದು ಮಹಾನಾಯಕ ಹರೀಶ್ ಬಾಬು ಮಾತನಾಡಿದ ಪ್ರಾಸಬದ್ದ ಹಿಂದಿಭಾಷಣ ನೆರೆದಿದ್ದ ಕಾಂಗ್ರೆಸ್ ನಾಯಕರ ಚಪ್ಪಾಳೆ ಗಿಟ್ಟಿಸಿತು..
ಮಾಧ್ಯಮಗೋಷ್ಟಿಯಲ್ಲಿ ಆರ್.ಟಿ.ನಗರ ಬ್ಲಾಕ್ ಅಧ್ಯಕ್ಷರು ಎಸ್.ಸಿ.ಘಟಕ- ಬೆಂಕಿಭೀಮಣ್ಣ, ಕೆ.ಜಿ.ಹಳ್ಳಿ ಬ್ಲಾಕ್ ಅಧ್ಯಕ್ಷ ರವಿಕುಮಾರ್, ನಾಗವಾರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಗಜೇಂದ್ರ, ಹೆಚ್.ಬಿ.ಆರ್ ವಾರ್ಡ್ ಅಧ್ಯಕ್ಷ ಸುನೀಲ್ ಕುಮಾರ್, ಕಾರ್ಯದರ್ಶಿ ರವಿ, ಶರೀಫ್, ಸಂತೋಷ್ ಕುಮಾರ್, ಮುನಿಸ್ವಾಮಿ, ಮುರುಗೇಶ್ ಕುಮಾರ್ ಉಪಸ್ಥಿತರಿದ್ದರು..
Comments