ದೊಡ್ಡ ಬೆಳವಂಗಲ ಪೊಲೀಸ್ ಠಾಣೆ ನೂತನ ಕಟ್ಟಡಕ್ಕೆ; ಹಿರಿಯ ಅಧಿಕಾರಿಗಳ ಭೇಟಿ..!!


ದೊಡ್ಡಬಳ್ಳಾಪುರ; ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ ನೂತನವಾಗಿ ನಿರ್ಮಿಸಲಾದ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವೀಕ್ಷಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಚೆಕ್ ಪೋಸ್ಟಳಿಗೆ ಪರಿಶೀಲನೆಗೆ ಬಂದಿದ್ದ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ನಾಗೇಶ್ ಕುಮಾರ್, ನಾಗರಾಜ್, ಡಿವೈಎಸ್ಪಿ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಇದೇ ಮೊದಲ ಬಾರಿಗೆ ನೂತನ ಠಾಣೆಗೆ ಭೇಟಿ ನೀಡಿದ ಕಾರಣ ಗೌರವ ವಂದನೆಯನ್ನು ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಸಲ್ಲಿಸಿದರು.


ದೊಡ್ಡಬೆಳವಂಗಲ ಠಾಣೆಯಲ್ಲಿನ ಸ್ವಾಗತಕಾರರ ಸ್ಥಳದಲ್ಲಿ ಅಪರಾಧ ಕೃತ್ಯಗಳ ಬಗೆಗಿನ ಸಾರ್ವಜನಿಕ ಜಾಗೃತಿಗೆ ಕಾರ್ಟೂನ್ ಚಿತ್ರಗಳ ಮೂಲಕ ಸಂದೇಶಗಳನ್ನು ಅಳವಡಿಸಿದ್ದು, ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.

Comments