ಚಿಕ್ಕಮಧುರೆ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವ; ಪಿಯುಸಿ ಪಾಸ್ ಮಾಡಪ್ಪ ಎಂದು ಬಾಳೆಹಣ್ಣನ್ನ ತೆರಿಗೆ ಅರ್ಪಣೆ ಮಾಡಿದ ವಿದ್ಯಾರ್ಥಿ....!!
ಪಿಯುಸಿ ಪಾಸ್ ಮಾಡಪ್ಪ ಎಂದು ಬಾಳೆಹಣ್ಣನ್ನ ತೆರಿಗೆ ಅರ್ಪಣೆ ಮಾಡಿದ್ದು ವಿಶೇಷವಾಗಿತ್ತು
ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಅದ್ಧೂರಿಯಾಗಿ ನೆರವೇರಿತು.
ಬ್ರಹ್ಮರಥೋತ್ಸವಕ್ಕೂ ಮುನ್ನ ಶನಿಮಹಾತ್ಮ ಸ್ವಾಮಿಗೆ ಪೂರ್ಣಕುಂಭ ಕಳಸದೊಂದಿಗೆ ಪೂಜಾ ಕಾರ್ಯವನ್ನ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಇನ್ನು ತೆರಿಗೆ ಬಾಳೆಹಣ್ಣು ದವನ ಅರ್ಪಣೆ ಮಾಡುವ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವಂತಹ ವಿದ್ಯಾರ್ಥಿಯೊಬ್ಬ ಪಿಯುಸಿ ಪಾಸ್ ಮಾಡಪ್ಪ ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರಲ್ಲಿ ಬೇಡಿಕೊಂಡು ಬಾಳೆಹಣ್ಣನ್ನ ತೆರಿಗೆ ಅರ್ಪಣೆ ಮಾಡಿದ್ದು ವಿಶೇಷವಾಗಿತ್ತು...
ಬ್ರಹ್ಮರಥೋತ್ಸವಕ್ಕೆ ಬಂದ ಭಕ್ತರಿಗೆ ಮುದ್ದೆ, ಕಾಳು ಸಾರು, ಪಾಯಸದ ಊಟ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ದೇವಾಲಯದ ಆಡಳಿತ ಮಂಡಳಿಯವರು, ಧರ್ಮದರ್ಶಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Comments