ಕೆರೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ದಾರುಣ ಸಾವು.....

 ಕೆರೆಯಲ್ಲಿ ಈಜಲೆಂದು ತೆರಳಿದ 2 ಎಸ್ ಎಸ್ ಎಲ್ ಸಿ ಯ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆಗರ ಕೆರೆಯಲ್ಲಿ ನಡೆದಿದೆ...


ಕಾರಿನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆ; ಮನೆಯಿಂದ ಕೆಲಸಕ್ಕೆಂದು ಹೊರ ಹೊಗಿದ್ದ ವ್ಯಕ್ತಿ ಶವವಾಗಿ ಪತ್ತೆ.....!!

ಕೆಂಗೇರಿಯ ಉಪನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದಂತಹ ಒಟ್ಟು 11 ಜನ ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲೆಂದು ಹೋಗಿದ್ದರು ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಧಾರಣವಾಗಿ ಮೃತಪಟ್ಟಿರುವ ಘಟನೆ ಇಂದು ನಡೆದಿದೆ..


ಗೀತಂ ವಿವಿ ಹಾಸ್ಟೆಲ್ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ......

ಪೃಥ್ವಿರಾಜ್ ಮತ್ತು ನವೀನ್ ಮೃತ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ ಈ ಇಬ್ಬರು ಹುಡುಗರು ದೊಡ್ಡಬೆಲೆ ಮೂಲದವರು ಎನ್ನಲಾಗುತ್ತಿದೆ ಇನ್ನು ಘಟನಾ ಸ್ಥಳಕ್ಕೆ ಕಗ್ಗಲಿಪುರ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದು..


ಇನ್ನು ಮೃತ ದೇಹವನ್ನ ಕೆರೆಯಿಂದ ಹೊರ ತೆಗೆದು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ..


ನ್ಯೂಸ್ ಬ್ಯೂರೋ ಸಾರಥಿ ಟಿವಿ ನ್ಯೂಸ್ ಬೆಂಗಳೂರು

Comments