ರಾಜ್ಯದ ಜನರಿಗೆ ಎಲ್ಲಾ ಉಚಿತ ತಮಿಳುನಾಡು ರೈತರಿಗೆ ಕಾವೇರಿ ನೀರು ಖಚಿತ ರಾಜ್ಯದ ಜನರಿಗೆ ದುಬಾರಿ ಹಣ ಕೊಟ್ಟು ಟ್ಯಾಂಕರ್ ಗಳಿಂದ ನೀರು ಹೊಡೆಸಿಕೊಳ್ಳುವುದು ಖಚಿತ.....!!

  ಇದು ನಮ್ಮ ಸರ್ಕಾರದ ಗ್ಯಾರಂಟಿ ಎಲ್ಲಾ ಫ್ರೀ ಎಲ್ಲಾ  ಫ್ರೀ ಹೋಗಿ ಹೋಗಿ ನೀರು ಫ್ರೀ ಬೆಂಗಳೂರಿಗೆ ಎಲ್ಲಾ ಬನ್ನಿ ಬನ್ನಿ....

ಬೆಂಗಳೂರಿನ ಜನತೆಗೆ ಎಚ್ಚರಿಕೆ ನೀಡಿದ ರಾಜ್ಯ ರೈತಸಂಘ ಹಸಿರುಸೇನೆ  ಅಧ್ಯಕ್ಷ ಮಂಜೇಗೌಡ ಮತ್ತು ಪದಾಧಿಕಾರಿಗಳು ಕಾವೇರಿ ಹೇಮಾವತಿ ಇಂದ ನೀರುನಿಲ್ಲಿಸಿ. ತಮಿಳು ನಾಡಿಗೆ ನೀರು ಬಿಟ್ಟರೆ ರಕ್ತಪಾತ ವಾಗಲಿದೆಎಂಬ ಎಚ್ಚರಿಕೆ ಯನ್ನು ಕೇಂದ್ರ -ರಾಜ್ಯಸರ್ಕಾರಕ್ಕೆನೀಡಿದರು.

   



ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ ಭಾರತೀಯ ಜನತಾ ಪಾರ್ಟಿ ಸರ್ಕಾರವು ನಾವು ನಿರ್ಮಾಣ ಮಾಡುತ್ತೇವೆ ಎಂದು ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ರೈತರ ಪಾದಯಾತ್ರೆಯಲ್ಲಿ ಆಶ್ವಾಸನೆ ಕೊಟ್ಟಿದ್ದು ಸರಿ ಅಷ್ಟೇ, ರೈತರ ಪಾರಿವಾದರೆ ನಂತರ ಕಾಂಗ್ರೆಸ್ನವರು ನಮ್ಮ ಸರಕಾರ ಬಂದರೆ ಉಪಮುಖ್ಯಮಂತ್ರಿಗಳು ಗಾಂಧಿ ಭವನದಲ್ಲಿ ಆಶ್ವಾಸನೆ ಕೊಟ್ಟಿದ್ದು ಒಂದೇ ತಿಂಗಳಲ್ಲಿ ಅಣೆಕಟ್ಟಿದ ಕೆಲಸವನ್ನು ಪ್ರಾರಂಭಿಸುವುದಾಗಿ ರೈತರಿಗೆ ಮಾತುಕೊಟ್ಟು ಎಲ್ಲಾ ಉಚಿತ ತಮಿಳುನಾಡಿಗೆ ನೀರು ಖಚಿತ ಎಂದು ಮನಸಿನಲ್ಲಿಟ್ಟುಕೊಂಡಿರುವ ಭ್ರಷ್ಟ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸರ್ಕಾರಕ್ಕೆ ಮಾಧ್ಯಮದ ಮುಖಾಂತರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡಿ ಬೆಂಗಳೂರು ನಗರದ ಜನತೆಗೆ ಕುಡಿಯುವ ನೀರನ್ನು ಕೊಡುವ ಬದಲುವಿಷಯವನ್ನೇ ಕೊಡುತ್ತೇವೆ ಎಂದು ತೀರ್ಮಾನಿಸಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಅಧ್ಯಕ್ಷರಾದ ಅರಳಾಪುರ ಮಂಜೇಗೌಡ ರವರ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಎಲ್ಲಾ ರೈತ ಮುಖಂಡರ ಪರವಾಗಿ ಬಿಕ್ಷೆ ಬೇಡಿ ಹಣೆಕಟ್ಟನ್ನು ಕಟ್ಟುವ ಪ್ರಯತ್ನಕ್ಕೆ ಮುಂದಾಗ ಬೇಕಾಗುತ್ತದೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದ್ದೇವೆ ಎಂದರು.

ಇನ್ನು ಇದೇ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರಾದಂತ ಸಂಪತ್ ಕುಮಾರ್ ಅವರು ರಾಜ್ಯದ ರೈತ ಮುಖಂಡರಾದ ನಂಜುಂಡಪ್ಪನವರು ವಿನೋದ್ ಕುಮಾರ್ ಗೌಡರವರು ರಾಜ್ಯ ಉಪಾಧ್ಯಕ್ಷರು ಡಾ, ಮಂಜುನಾಥ್ ರವರು ಮೇಕೆ ದಾಟು ಸಮಿತಿಯ ಎಲ್ಲಾ ರೈತ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.

Comments