ವೈಭವ ಚಿತ್ರ ಮಂದಿರದ ಬಳಿ ದಿ.ಪುನೀತ್ರಾಜ್‌ಕುಮಾರ್‌ ಅವರ ಅಭಿಮಾನಿಗಳಿಂದ 49ನೇ ವರ್ಷ ಹುಟ್ಟುಹಬ್ಬ ಆಚರಣೆ.....!!

ದೊಡ್ಡಬಳ್ಳಾಪುರ:  ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 49ನೇ ವರ್ಷ ಹುಟ್ಟುಹಬ್ಬವನ್ನು‌ ಇಂದು ಅಭಿಮಾನಿಗಳು ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಅಪ್ಪು ಇನ್ನಿಲ್ಲದ ನೋವಿನಲ್ಲೂ ಅಭಿಮಾನಿಗಳು ಅವರ ಹೆಸರನ್ನು ಅಜರಾಮರಗೊಳಿಸಲು ನಾನಾ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುನೀತ್ ಜನ್ಮದಿನವನ್ನು ಸ್ಫೂರ್ತಿಯ ದಿನವಾಗಿ ಆಚರಿಸುತ್ತಿರುವ ಅಭಿಮಾನಿಗಳಲ್ಲಿ ಸಂಭ್ರಮ ಹೇಳತೀರದು.



ಅಂತೆಯೇ ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ರಾಜರತ್ನ ಡಾ. ಪುನೀತ್ ರಾಜ್ ಕುಮಾರ್ ಸೇವಾ ಟ್ರಸ್ಟ್ ವತಿಯಿಂದ ಪುನೀತ್ ರಾಜಕುಮಾರ್ ಜನ್ಮ ದಿನವನ್ನು ಅವಿಸ್ಮರಣೀಯಗೊಳಿಸಲು ಸಿದ್ಧತೆ ನಡೆದಿದೆ.


ನಗರದ ವೈಭವ ಚಿತ್ರ ಮಂದಿರದ ಬಳಿ ಪುನೀತ್ ಅಭಿನಯದ ಚಿತ್ರಗಳ ಪೋಸ್ಟರ್ ಒಳಗೊಂಡ ವಾಲ್ ಆಫ್ ಪ್ರೇಮ್ ಸಿದ್ಧಪಡಿಸಿದ್ದು, ಬೆಳಿಗ್ಗೆ 10ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಗಿದೆ. 

 

ಅದೇ ರೀತಿ ಡಿ- ಕ್ರಾಸ್ ವೃತ್ತದಲ್ಲಿ ಪುನೀತ್ ಪುತ್ಥಳಿಗೆ ಅಭಿಮಾನಿಗಳು ವಿಶೇಷ ಅಲಂಕಾರ ಮಾಡಿ ವಿವಿಧ‌ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Comments