ಬಂಡಿ ದಾರಿ ತೆರವಿಗೆ ಭಾರೀ ವಿರೋಧ ; ಪೊಲೀಸರ ಎದುರೇ ಸಿನಿಮಿಯ ರೀತಿಯಲ್ಲಿ ಜೆಸಿಬಿಗೆ ಬೆಂಕಿ ಹಚ್ಚಿದ ಭೂಪ...!!

 ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಮದಲ್ಲಿ ನಡೆದ ಘಟನೆ.....


ಸುಮಾರು 100 ರರೂ ಎಕರೆ ವಿಸ್ತೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತೆರವು ಕಾರ್ಯಚರಣೆ ವೇಳೆ ಬಚ್ಚೇಗೌಡ ಹಾಗೂ ಅವರ ಮಗ ಚೇತನ್ ತೆರವಿಗೆ ಅಡಿ ಪಡಿಸಿ ಜೆಸಿಬಿ ಗೆ ಸಿನಿಮೀಯ ರೀತಿಯಲ್ಲಿ ಬೆಂಕಿ ಹಚ್ಚಿದ ಘಟನೆ ನಡೆದಿದೆ...



10/7 ಸರ್ವೆ ನಂಬರ್ ನಲ್ಲಿ ಆದು ಹೋಗುವ ರಸ್ತೆ ಶಿವಕೋಟೆ ಯಿಂದ ಮುದುಕದ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದು ಜೆಸಿಬಿ ಕೆಲಸ ಮಾಡುವ ಸಂದರ್ಬದಲ್ಲಿ ಬಿಯರ್ ಬಾಟಲಿನಲ್ಲಿ ಪೆಟ್ರೋಲ್ ತುಂಬಿ ಜೆಸಿಬಿ ಗೆ ಬೆಂಕಿ ಹಾಕಿದ್ದಾರೆ ಎಂದು ಶಿವಕೋಟೆ ಗ್ರಾಮದ ಮಂಜುನಾಥ್ ಆರೋಪಿಸಿದ್ದರು. 


 ಇನ್ನೂ ಘಟನಾ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳೂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳದಲ್ಲೆ ಇದು, ಯಾರಿಗೂ ಕೂಡಾ ಯಾವುದೆ ತೊಂದರೆ ಹಾಗಿಲ್ಲ ಎನ್ನಲಾಗಿದೆ.

(ಆರೋಪಿ ಚೇತನ್)


ಈ ಸಂಬಂದ ರಾಜಾನುಕುಂಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments