ಕನ್ನಡ ನುಡಿಹಬ್ಬಕ್ಕೆ ಬಾಶೆಟ್ಟಿಹಳ್ಳಿ ಸಜ್ಜು, ಡಾ.ಟಿ.ಎಚ್.ಆಂಜಿನಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ.....!!

 ಕನ್ನಡದ ನುಡಿಹಬ್ಬಕ್ಕೆ ದೊಡ್ಡಬಳ್ಳಾಪುರ ತಾಲೂಕು ಸಜ್ಜಾಗಿದ್ದು, 13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಬಾಶೆಟ್ಟಿಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣ ದಲ್ಲಿ ಫೆ.25 ಮತ್ತು 26ರಂದು ಸಂಭ್ರಮ



ದೊಡ್ಡಬಳ್ಳಾಪುರ: ಕನ್ನಡ ನಾಡು ನೆಲ ಜಲ ಬಾಷೆ ನುಡಿ ಹಬ್ಬಕ್ಕೆ ದೊಡ್ಡಬಳ್ಳಾಪುರ ತಾಲೂಕು ಸಜ್ಜಾಗಿದ್ದು, ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಾಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇದೇ 25 ಮತ್ತು 26ರಂದು ಸಂಭ್ರಮದಿಂದ ನಡೆಯಲಿದೆ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್.ಕೃಷ್ಣಪ್ಪ ಹೇಳಿದರು.


ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಹೆಸರಾಂತ ವೈದ್ಯ ಹಾಗೂ ಸರಳ ಕನ್ನಡದಲ್ಲಿ ವೈದ್ಯಕೀಯ ವಿಚಾರಗಳನ್ನು ಕುರಿತು ಮಾತನಾಡುವ ಹಾಗೂ ಬರೆಹಗಳನ್ನು ಪ್ರಕಟಿಸಿರುವ ಡಾ.ಟಿ.ಎಚ್.ಆಂಜಿನಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿದ್ದು, 2 ದಿನಗಳ ಸಮ್ಮೇಳನದಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ.


 ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಪ್ರತಿಭೆಗಳು, ಹೋರಾಟದ ಚಿಂತನೆಗಳು, ಸಮಕಾಲೀನಸಾಹಿತ್ಯದ ಜೊತೆಗೆ ನೆಲ-ಜಲದ ಚರ್ಚೆ: ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್. ರವಿಕಿರಣ್ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಜ್ವಲಂತ ಸಮಸ್ಯೆಗಳ ಕುರಿತು, ನೆಲ-ಜಲದ ವಿಚಾರಗಳ ವಸ್ತುಸ್ಥಿತಿಯ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ. ಎಲ್ಲ ವಲಯಗಳನ್ನೂ ಒಳಗೊಳ್ಳುವ ವಿಶಾಲ ದೃಷ್ಟಿಕೋನ ದಿಂದ ಮಕ್ಕಳ ಗೋಷ್ಠಿ, ಯುವ ಕವಿ ಗೋಷ್ಠಿ, ಮಹಿಳಾ ಗೋಷ್ಠಿ ಹಾಗೂ ಸವಾಲು-ಸಮಸ್ಯೆಗಳ ಕುರಿತಾದ ಗೋಷ್ಠಿಗಳನ್ನು ಆಯೋಜಿಸಿ ವಿಚಾರ ಮಂಥನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. 


ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದ ರಾಜುಸುದ್ದಿ ಗೋಷ್ಠಿಯಲ್ಲಿ ಬೆಂ.ಗ್ರಾ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುನಿರಾಜು, ತಾ.ಕಸಾಪ ಕಾರ್ಯ ದರ್ಶಿ ಎ.ಜಯರಾಮ್, ನಿವೃತ್ತ ಅಧ್ಯಾಪಕ ವಿ.ಎಸ್.ಹೆಗ್ಡೆ, ವೆಂಕಟರಾಜು ಉಪಸ್ಥಿತರಿದ್ದರು.

Comments