ಉಬರ್ ಕ್ಯಾಬ್ ಡ್ರೈವರ್ ವಂಚನೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು.....!!

 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ


ಪ್ರಕರಣದ ಪಿರಾದುದಾರರು ದಿನಾಂಕ 05.01.2024 ರಂದು ಸ್ನೇಹಿತರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಾಪ್ ಮಾಡಿ ನಂತರ ಬೆಂಗಳೂರಿನ ತಾವರೆಕೆರೆಯ ಮನೆಗೆ ಹಿಂದಿರುಗುವ ಸಲುವಾಗಿ ಉಬರ್ ಕ್ಯಾಬ್ ಬುಕ್ ಮಾಡಿದ್ದು, ಉಬರ್ ಝನ್ ಬಳಿ ಬರುತ್ತಿರುವಾಗ್ಗೆ, ಒಬ್ಬ ಕ್ಯಾಬ್ ಡ್ರೈವರ್ ನಾನೇ ಉಬರ್ ಕ್ಯಾಬ್ ಡ್ರೈವರ್ ಎಂದು ಪಿರ್ಯಾದುದಾರರನ್ನು ಕಾರಿನಲ್ಲಿ ಕೂರಿಸಿಕೊಂಡು ತಾವರೆಕೆರೆಯ ಅಪಾರ್ಟ್‌ಮೆಂಟ್‌ನ ಮನೆಗೆ ಡ್ರಾಪ್ ಮಾಡಿದ್ದು, ಪಿರ್ಯಾದುದಾರರು ಉಬರ್ ಅಪ್ಲಿಕೇಷನ್‌ನಲ್ಲಿದ್ದಂತೆ 914/- ರೂಗಳನ್ನು ನೀಡಲು ಮುಂದಾದಾಗ ಕ್ಯಾಬ್ ಡ್ರೈವರ್ ತನ್ನ ಮೊಬೈಲಿನಲ್ಲಿ 5194/- ರೂಗಳು ಎಂದು ತೋರಿಸಿ 5194/- ರೂಗಳನ್ನು ಪಡೆದಿರುತ್ತಾರೆ. ನಂತರದಲ್ಲಿ ವಿಚಾರಿಸಲಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಾವರೆಕೆರೆಗೆ ಕ್ಯಾಬ್ ಪ್ರಯಾಣಕ್ಕೆ 5194/- ರೂಗಳು ಚಾರ್ಜ್ ಆಗುವುದಿಲ್ಲ ಎಂದು ತಿಳಿದು ಬಂದಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದ ಸದರಿ ಕ್ಯಾಬ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದಿನಾಂಕ: 13.02.2024 ರಂದು ದೂರು ನೀಡಿದ್ದು ಈ ಬಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು-ತನಿಖೆಯಲ್ಲಿರುತ್ತದೆ.

Comments