ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಎಲ್ಲರೂ ಶ್ರದ್ದೆಯಿಂದ ಕಾರ್ಯ ನಿರ್ವಹಿಸುವ ಮೂಲಕ, ರಾಜ್ಯದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ಟಿಟಿಡಿ ಆಡಳಿತ ಮಂಡಳಿಯ ನಿರ್ದೇಶಕ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಬಿಜೆಪಿ ಪಕ್ಷದ ನೂತನ ಪದಾಧಿಕಾರಿ ಗಳಿಗೆ ಸಲಹೆ ನೀಡಿದರು.
ಯಲಹಂಕ ನಡು ರಸ್ತೆಯಲ್ಲಿ ಕಾರು ಬಿಟ್ಟು ಪರಾರಿ ಯಾಕೆ? ಎಲ್ಲಿ ಅಂತೀರಾ ಈ ಸುದ್ದಿ ನೋಡಿ.....
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ನೂತನವಾಗಿ ನೇಮಕಗೊಂಡಿರುವ ಯಲಹಂಕ ಕ್ಷೇತ್ರದ ಸತೀಶ್ ಕಡತನಮಲೆ ರವರಿಗೆ ತಮ್ಮ ಗೃಹ ಕಚೇರಿಯಲ್ಲಿ ಗೌರವ ಸನ್ಮಾನ ನೀಡಿದ ನಂತರ ಮಾತನಾಡಿದ ಅವರು 'ಯಲಹಂಕ ಕ್ಷೇತ್ರದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಸತೀಶ್ ಕಡತನಮಲೆ ರವರು ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ರೈತರು, ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡುವ ಮೂಲಕ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ, ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು, ಜಿಲ್ಲಾ ಮಟ್ಟದಲ್ಲೂ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಇದೀಗ ರಾಜ್ಯ ಕಾರ್ಯದರ್ಶಿ ಯಾಗಿ ಪಕ್ಷದ ಹುದ್ದೆಯಲ್ಲಿ ಬಡ್ತಿ ಪಡೆದಿರುವುದು ಸಂತೋಷ ಉಂಟು ಮಾಡಿದೆ.
ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸತೀಶ್ ಕಡತನಮಲೆ ರವರು ತಮ್ಮ ಮೂಲ ನೆಲೆಯಾಗಿರುವ ಯಲಹಂಕ ಕ್ಷೇತ್ರವನ್ನು ಮರೆಯಬಾರದು, ರಾಜ್ಯದ ಜತೆಗೆ ಯಲಹಂಕ ಕ್ಷೇತ್ರದಲ್ಲೂ ಬಿಜೆಪಿ ಪಕ್ಷವನ್ನು ಸುಭದ್ರವಾಗಿ ಕಟ್ಟುವ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ದಿಬ್ಬರು ಜಯಣ್ಣ, ಹೆಚ್ ಬಿ ಹನುಮಯ್ಯ, ಎಂ.ಸತೀಶ್, ಚೊಕ್ಕನಹಳ್ಳಿ ವೆಂಕಟೇಶ್, ಎ.ಸಿ.ಮುನಿಕೃಷ್ಣಪ್ಪ, ಮುನಿದಾಸಪ್ಪ, ಕೆ.ಆರ್. ತಿಮ್ಮೇಗೌಡ, ಕಾಕೋಳು ಮುನೇಶ್, ಎಸ್ ಆರ್ ಜನಾರ್ಧನ್, ಎಸ್ ಜಿ ಪ್ರಶಾಂತ್ ರೆಡ್ಡಿ, ಜಗದೀಶ್, ಅದ್ದೆವಿಶ್ವನಾಥ ಪುರ ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.
Comments