ಯಲಹಂಕ :
ಬಿಎಸ್ಎಫ್ ತರಬೇತಿ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಮೇಳ
ಇಂದು 12ನೇ ರೋಜ್ಗಾರ್ ಯೋಜನೆ ಯಲಹಂಕದ ಬಿಎಸ್ಎಫ್ ನಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಯಲ್ಲಿ ನರೇಂದ್ರ ಮೋದಿಯವರ ಅವಧಿಯಲ್ಲಿ 7ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದರು.
ರೋಜ್ಗಾರ್ ಮೇಡಂ ದೇಶದ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವಲ್ಲಿ ಪ್ರಬಲ ಮಾಧ್ಯಮವಾಗಿ ಈಗ ಸಾಬೀತಾಗಿದೆ ಎಂದು ಪ್ರಹ್ಲಾದ್ ಜೋಶಿ ಪ್ರತಿಪಾದಿಸಿದರು
2022ರ ಅಕ್ಟೋಬರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದನ್ನು ಮಿಷಿನ್ ಮೋಡ್ನಲ್ಲಿ ಆರಂಭ ಮಾಡಿದಾಗಿನಿಂದ ಇದುವರೆಗೂ 7ಲಕ್ಷಕ್ಕೂ ಅಧಿಕ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹಾದ್ ಜೋಶಿ ಅವರು ಕರ್ನಾಟಕ ರಾಜ್ಯಕ್ಕೆ ಸೇರಿದ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಎಸ್ ಜಾರ್ಜ್ ಮಂಜುರಾನ್, ಐಜಿ ಎಸ್‌ಟಿಸಿ ಬಿಎಸ್‌ಎಫ್, ಬೆಂಗಳೂರು, ಎಸ್ ಈಪೆನ್ ಪಿವಿ, ಐಜಿ ಬಿಎಸ್‌ಎಫ್ ಸೆಡ್ಕೊ ಬೆಂಗಳೂರು ಸಹ ಉಪಸ್ಥಿತರಿದ್ದರು.
Comments