ಭಾರತದಲ್ಲಿ ಪುಷ್ಪ ಕೃಷಿಯಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ಭವಿಷ್ಯದ ನಿರೀಕ್ಷೆಗಳ ಕುರಿತ ಮೂರು ದಿನಗಳ ರಾಷ್ಟ್ರೀಯ ರಾಷ್ಟ್ರೀಯ ಸಮ್ಮೇಳನ ....!!

 



ಭಾರತದಲ್ಲಿ ಪುಷ್ಪ ಕೃಷಿಯಲ್ಲಿನ ಇತ್ತೀಚಿನ ಪ್ರವೃತ್ತಿಗಳು ಮತ್ತು ಭವಿಷ್ಯದ ನಿರೀಕ್ಷೆಗಳ ಕುರಿತ ಮೂರು ದಿನಗಳ ರಾಷ್ಟ್ರೀಯ ರಾಷ್ಟ್ರೀಯ ಸಮ್ಮೇಳನಕ್ಕೆ ಇಂದು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ಡಾಕ್ಟರ್ ಜಿಎಸ್ ರಾಂಧವ ಸಭಾಂಗಣದಲ್ಲಿ ಚಾಲನೆಗೊಳಿಸಲಾಯಿತು.




 ಸಮಾರಂಭದ ಸ್ವಾಗತ ಭಾಷಣ ಮಾಡಿದ ಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ಸಂಜಯ್ ಕುಮಾರ್ ಸಿಂಗ್ ರವರು ಅತಿಥಿಗಳನ್ನು ಸ್ವಾಗತಿಸಿ ಮೂರು ದಿನಗಳ ಈ ಸಮ್ಮೇಳನ ಭಾರತದಲ್ಲಿನ ಪುಷ್ಪ ಕೃಷಿಯ ಭವಿಷ್ಯದ ರೂಪರೇಷೆಗಳನ್ನು ಸಿದ್ಧಪಡಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು


ಕೇಂದ್ರ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಬೆಂಗಳೂರಿನ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಭೇಟಿ.....!!


ಸಮ್ಮೇಳನದ ಉಪಾಧ್ಯಕ್ಷರಾದ ಡಾ. ಬಿ ನವೀನ್ ಕುಮಾರ್ ರವರು ಸಮ್ಮೇಳನ ದಲ್ಲಿ 9 ತಾಂತ್ರಿಕ ವಿಚಾರ ಗೋಷ್ಠಿಗಳಿದ್ದು ಇದರಲ್ಲಿ 90ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದರು

 ಸಮ್ಮೇಳನದ ಮುಖ್ಯ ಅತಿಥಿಗಳಾಗಿದ್ದ ಡಾಕ್ಟರ್ ಟಿ ಜಾನಕಿ ರಾಮ್ ಆಂಧ್ರಪ್ರದೇಶದ ಡಾಕ್ಟರ್ ವೈಎಸ್ಆರ್ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿಗಳು ಮುಖ್ಯ ಭಾಷಣವನ್ನು ಮಾಡಿ ಭಾರತದಲ್ಲಿ ಪುಷ್ಪೋದ್ಯಮದ ಬೆಳವಣಿಗೆಯನ್ನು ಮೆಲುಕು ಹಾಕುತ್ತಾ ಕೇವಲ ರೈತರ ಹಿತ್ತಲುಗಳಿಗೆ ಸೀಮಿತವಾಗಿದ್ದ ಪುಷ್ಪ ಕೃಷಿ ಇಂದು ಅಂತರಾಷ್ಟ್ರೀಯ ವ್ಯಾಪಾರವಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಆದರೂ ಭಾರತದಲ್ಲಿನ ಪುಷ್ಪ ಕೃಷಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ದೇಶದಲ್ಲಿ ತಳಿಗಳ ಪರಾವಲಂಬನೆಯನ್ನು ತಪ್ಪಿಸಿ ತಂತ್ರಜ್ಞಾನದ ಮೂಲಕ ನಮ್ಮಲ್ಲಿಯೇ ಹೊಸ ತಳಿಗಳು ಹಾಗೂ ಪುಷ್ಪ ಕೃಷಿಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ತಿಳಿಸಿದರು ಈ ದಾರಿಯಲ್ಲಿ ಪ್ರಮುಖ ತಂತ್ರಜ್ಞಾನಗಳಾದ ತಳಿ ವಿಜ್ಞಾನ ಜೈವಿಕ ತಂತ್ರಜ್ಞಾನ ಸೆನ್ಸಾರ್ಗಳ ಬಳಕೆಯಿಂದ ಕೃತಕ ಬುದ್ಧಿಮತಿಕೆಯನ್ನು ಉಪಯೋಗಿಸಿಕೊಂಡು ನಿಖರ ಕೃಷಿ ಹಾಗೂ ದ್ರೋಣ್ ತಂತ್ರಜ್ಞಾನ ಮುಂತಾದವುಗಳು ಪುಷ್ಪ ಕೃಷಿಗೆ ಸಹಾಯವಾಗಲಿವೆ ಎಂದು ತಿಳಿಸಿದರು




ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ಶ್ರೀ ಡಿಎಸ್ ರಮೇಶ್ ರವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಉಪಯೋಗವಾಗುವ ತಳಿ ಹಾಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಕರೆ ನೀಡಿದರು. ಹಾಗೂ ರೈತರು ಹೊಸ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುವ ಮೊದಲು ಅದರ ಸಾಧಕ ಬಾದಕಗಳು ಹಾಗೂ ಮಾರುಕಟ್ಟೆ ವ್ಯವಸ್ಥೆಯ ಬಗೆಗೆ ಅಧಿಕಾರಿಗಳು, ತಂತ್ರಜ್ಞರು, ಹಾಗೂ ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ ಮುಂದುವರಿಯಲು ಕರೆ ನೀಡಿದರು.

 ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ತೋಟಗಾರಿಕೆ ವಿಭಾಗದ ಮಹಾನಿರ್ದೇಶಕರು ಸಹಾಯಕ ಮಹಾನ್ ನಿರ್ದೇಶಕರಾದ ಡಾ. ಸುಧಾಕರ್ ಪಾಂಡೆ ಅವರು ಭಾರತದಲ್ಲಿನ ಪುಷ್ಪ ಕೃಷಿಯೇ ಕುರಿತ ಸಾಧಕ ಬಾದಕಗಳನ್ನು ಚರ್ಚಿಸಿದರು ಹಾಗೂ ಭಾರತದ ವೈವಿಧ್ಯ ಹವಾಮಾನ ಹಾಗೂ ಜೈವಾ ವಿವಿಧತೆಯನ್ನು ಉಪಯೋಗಿಸಿಕೊಂಡು ಹೊಸ ಬೆಳೆಗಳು ತಳಿಗಳು ಹಾಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಸಲಹೆ ನೀಡಿದರು.

 ಅಪೇಡ ಸಂಸ್ಥೆಯ ಮ್ಯಾನೇಜರ್ ಆದ ಶ್ರೀಮತಿ ಮಧುಮತಿ ಅಂಡ್ರೋಸ್ ಅಪೈಡದಿಂದ ಪುಷ್ಪ ಕೃಷಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು


ಭಾರತೀಯ ಪುಷ್ಪ ನಿರ್ದೇಶನಾಲಯದ ನಿರ್ದೇಶಕರಾದ ಡಾಕ್ಟರ್ ಕೆ ವಿ ಪ್ರಸಾದ್ ಹಾಗೂ ಆರ್ಕಿಡ್ ಸಸ್ಯಗಳ ಮೇಲಿನ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಯ ನಿರ್ದೇಶಕರಾದ ಎಸ್ ಪಿ ದಾಸ್ ಹಾಗೂ ಪುಷ್ಪ ಕೃಷಿಯಲ್ಲಿನ ಇತರ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾದ ಡಾಕ್ಟರ್ ಜಿಎಸ್ ಸ್ಮಿತಾರವರು ಧನ್ಯವಾದಗಳು ಅರ್ಪಿಸಿದರು.


ಈ ಸಂದರ್ಭದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ತಳಿ ಹಾಗೂ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯನಿಸಿರುವ ನಾಲ್ಕು ರೈತರನ್ನು ಸಹ ಸನ್ಮಾನಿಸಲಾಯಿತು. ಅವರೆಂದರೆ ಚೈನಾ ಸ್ಟಾರ್ ಹಾಗೂ ಗ್ಲ್ಯಾಡ್ಯೂಲಸ್ ತಾಳಿಗಳನ್ನು ಜನಪ್ರಿಯಗೊಳಿಸಿದ ತಮ್ಮರಸನಹಳ್ಳಿಯ ಶ್ರೀ ಹನುಮಂತುರಾಜುರವರು, ಕನಕಾಂಬರ ತಳಿಗಳನ್ನು ಜನಪ್ರಿಯಗೊಳಿಸಿದ ಮಂಡ್ಯದ ಮಳವಳ್ಳಿಯ ಶ್ರೀ ನಾಗೇಶ್, ಗುಲಾಬಿ ತಳಿಗಳನ್ನು ಜನಪ್ರಿಯಗೊಳಿಸಲು ಸಹಾಯಕರಾದ ಮಳವಳ್ಳಿಯ ಶ್ರೀ ಮಹೇಶ್ ಹಾಗೂ ಸುಗಂಧರಾಜದ ಅರ್ಕ ಪ್ರಜ್ವಲ್ ತಳಿ ಹಾಗೂ ಅದಕ್ಕೆ ಸಂಬಂಧಪಟ್ಟ ಬೆಳೆನಿರ್ವಹಣೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಧಿಕ ಲಾಭ ಪಡೆದ ತಮಿಳುನಾಡಿನ ಧರ್ಮಪುರಿಯ ಶ್ರೀ ಸಿದ್ದಾರ್ಥ್. ಇದೇ ಸಂದರ್ಭದಲ್ಲಿ ಸಮ್ಮೇಳನಕ್ಕೆ ಸಂಬಂಧಪಟ್ಟ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಹಾಗೂ ಅರ್ಕ ಕೀರ್ತನ ಎಂಬ ಸುಗಂಧರಾಜ ತಳಿಯ ಪರವಾನಿಗೆಯನ್ನು ರೈತೋದ್ಯಮಿಯವರಿಗೆ ನೀಡಲಾಯಿತು.


Comments