ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಗಡಿ ಭಾಗವಾದ ಬನ್ನಿಮಂಗಲ ಗ್ರಾಮದ ದ್ವಾರ ಗೋಪುರ ಸಂಪೂರ್ಣ ಜಕಂ.
ತಮಿಳುನಾಡಿನಿಂದ ದೊಡ್ಡಬಳ್ಳಾಪುರದ ವ್ಯಾಡ್ ಕಂಪನಿಗೆ ತೆರಳುತ್ತಿದ್ದ ಲಾರಿ ಬನ್ನಿಮಂಗಳ ಗ್ರಾಮಕ್ಕೆ ಸೇರಿದ ದ್ವಾರ ಗೋಪುರದ ಕೆಳಗಡೆ ಲಾರಿಸಿಲುಕಿಕೊಂಡಿತ್ತು ಕ್ರೈನ್ ಮೂಲಕಲಾರಿ ತೆಗೆಯುವ ಸಂದರ್ಭದಲ್ಲಿ ನೆಲ ಕಪ್ಪಳಿಸಿದ ಶ್ರೀ ರಾಮ ಆಂಜನೇಯ ಮೂರ್ತಿ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ರಮೇಶ್ 12 ವರ್ಷಗಳ ಹಿಂದೆ ನಮ್ಮ ತಂದೆಯವರು ಈ ಒಂದು ಗೋಪುರವನ್ನು ನಿರ್ಮಾಣ ಮಾಡಿದ್ರು ಈಗ ನಮ್ಮ ಕಣ್ಣ ಮುಂದೆಯೇ ಈ ರೀತಿ ಆಗ್ತಿರೋದು ತುಂಬಾ ನೋವಾಗ್ತಿದೆ ಎಂದು ಭಾವುಕರಾದ್ರೂ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ದೇವನಹಳ್ಳಿ ಗಡಿಭಾಗದ ಬನಿಮಂಗಲ ಓಕಲಿಪುರ ಮಾರ್ಗದ ರಸ್ತೆಯಲ್ಲಿ ಘಟನೆ ನಡೆದಿದೆ ಇನ್ನು ಘಟನಾ ಸ್ಥಳಕ್ಕೆ ವಿಶ್ವನಾಥಪುರ ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Comments