ದೊಡ್ಡಬಳ್ಳಾಪುರದಲ್ಲಿ ಬಾಲಕಾರ್ಮಿಕನನ್ನ ರಕ್ಷಣೆ ಮಾಡಿದ ಕನ್ನಡಿಗರ ಕರ್ಣಾಟಕ ರಕ್ಷಣ ವೇದಿಕೆ ತಂಡ......!!


ದೊಡ್ಡಬಳ್ಳಾಪುರ:   ಬೇಕರಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಲಕಾರ್ಮಿಕನನ್ನ ರಕ್ಷಣೆ ಮಾಡಿದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ತಂಡ ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಿ ಬಾಲಕಾರ್ಮಿಕನನ್ನು ರಕ್ಷಣೆ ಮಾಡಿ ಬಾಲ ಮಂದಿರಕ್ಕೆ ಕಳಿಸಲಾಗಿದೆ.


ದೊಡ್ಡಬಳ್ಳಾಪುರ ತಾಲೂಕಿನ ತಾಲೂಕು ಕಚೇರಿ ಸಮೀಪದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬೇಕರಿಯಲ್ಲಿ ಸುಮಾರು 13 ವರ್ಷದ ಬಾಲಕಾರ್ಮಿಕನನ್ನ ದುಡಿಸಿ ಕೊಳುತ್ತಿದ್ದ ಖಚಿತ ಮಾಹಿತಿಯನ್ನು ಪಡೆದುಕೊಂಡ ಕನ್ನಡಿಗರ  ಕರ್ನಾಟಕ ರಕ್ಷಣಾ ವೇದಿಕೆ ತಂಡ ಜಿಲ್ಲಾ ಬಾಲಕಾರ್ಮಿಕರ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಬೇಕರಿಯ ಮೇಲೆ ದಾಳಿ ನಡೆಸಲಾಗಿತ್ತು ಬೇಕರಿಯಲ್ಲಿ ದುಡಿಯುತ್ತಿದ ಬಾಲಕಾರ್ಮಿಕನನ್ನ ಅಧಿಕಾರಿಗಳು ರಕ್ಷಣೆ ಮಾಡಿ ದೊಡ್ಡಬಳ್ಳಾಪುರದ ಬಾಲ ಮಂದಿರದಲ್ಲಿ ಇರಿಸಿದ್ದಾರೆ.


ವರುಣ್ ಎಂಬ ಬಾಲಕಾರ್ಮಿಕ ಹಾಸನ ಮೂಲದ 11 ವರ್ಷದ ಯುವಕ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲೇ ಕೆಲಸ ನಿರ್ವಹಿಸುತ್ತಿದ್ದ ಯುವಕ,ಸುಮಾರು ಎರಡು ತಿಂಗಳಿಂದ ಕೆಲಸ ನಿರ್ವಹಿಸಿದ್ದ ಎಂದು ಹೇಳಲಾಗುತ್ತಿದೆ.

ಸರ್ಕಾರದಿಂದ ಮಾಹಿತಿಯನ್ನ ಕಲೆ ಹಾಕಲಿಕ್ಕೆ ಸಾಕಷ್ಟು ಹಣ ಬಿಡುಗಡೆ ಆಗುತ್ತೆ ರಕ್ಷಣಾ ವೇದಿಕೆ ಹಾಗೂ ನಾನಾ ಸಂಘಟನೆಗಳು ಕಂಡು ಹಿಡಿಯುವಂತಹ ವಿಚಾರಗಳು ಇಲಾಖೆಯವರು ಯಾಕೆ ಕಂಡುಹಿಡಿದಿಲ್ಲ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವುದನ್ನು ಬಿಟ್ಟು ಇಂತಹ ಮಕ್ಕಳನ್ನ ಹುಡುಕಿ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಬಿಎಸ್ ಚಂದ್ರಶೇಖರ್ ಸಂಸ್ಥಾಪಕ ಅಧ್ಯಕ್ಷರು ಆರೋಪಿಸಿದ್ರು.


ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ದೊಡ್ಡಬಳ್ಳಾಪುರ

Comments