ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪಾದಯಾತ್ರೆ,270ಕೀ ಮೀ ಗಳನ್ನು 6ದಿನಗಳ ಕಾಲ ನಡೆದು, 7ನೇ ದಿನ ದೇವರ ದರ್ಶನದ....!!


ಯಲಹಂಕ: ತಾಲ್ಲೂಕಿನ ಚಲ್ಲಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನ ಸನ್ನಿಧಿಯಿಂದ ಜನವರಿ 29ರ ಸೋಮವಾರದಂದು ಒಂದು ವಾರಗಳ ಕಾಲ ತಿರುಮಲ ತಿರುಪತಿ  ದೇವಸ್ಥಾನಕ್ಕೆ 13ನೇ ವರ್ಷದ ಪಾದಯಾತ್ರೆ ಮೂಲಕ ಹರಿಸೇವೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.



ಹೆಸರಘಟ್ಟ ಹೋಬಳಿಯ ಚಲ್ಲಹಳ್ಳಿಯ ವೇಣುಗೋಪಾಲಸ್ವಾಮಿ ತಿರುಪತಿ ತಿರುಮಲ ಪಾದಯಾತ್ರಾ ಸೇವಾ ಸಮಿತಿಯಿಂದ 30ಕ್ಕೂ ಹೆಚ್ಚು ಭಕ್ತರು, 270ಕೀ ಮೀ ಗಳನ್ನು6ದಿನಗಳ ಕಾಲ ನಡೆದು, 7ನೇ ದಿನ ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನದ ಮೂಲಕ ಅಂತ್ಯಗೊಳಿಸಲಿದ್ದೇವೆ. ಕಳೆದ 12ವರ್ಷದಿಂದ ಪಾದಯಾತ್ರೆ ಸೇವೆ ನಡೆಯುತ್ತಿದ್ದು,  ಬೆಳಗ್ಗೆ 5ಗಂಟೆಯಿದ ಸಂಜೆ 6ಗಂಟೆಯವರೆಗೂ ಸೇವಾಕರ್ತರು ಪಾದಯಾತ್ರೆ ನಡೆಸಲಿದ್ದಾರೆ. ಪ್ರತಿದಿನ 30ರಿಂದ 40ಕೀಮಿ. ಪಾದಸೇವೆ ನಡೆಯಲಿದೆ. ರಾತ್ರಿ ಯಾತ್ರೆ ಇರುವುದಿಲ್ಲ.ಮಾರ್ಗಮಧ್ಯೆ ಸಿಗುವ ಶಾಲೆಯ ಆವರಣ, ಮಠಗಳು ಸುಮುದಾಯಭವನ, ದೇವಾಲಯ ಆವರಣದಲ್ಲಿ ರಾತ್ರಿ ಉಳಿದುಕೊಂಡು ಬೆಳಗ್ಗೆ ಪ್ರಯಾಣ ಬೆಳೆಸುತ್ತೇವೆ.ಎಂದುಸೇವಾ  ಸಮಿತಿಯ ಹಿರಿಯ ಯಾತ್ರಿ ಸಿ.ಎನ್.ಶ್ರೀನಿವಾಸಯ್ಯ ಹೇಳಿದರು.

 ದಾರಿಯಲ್ಲಿ ನಡೆಯುವಾಗ ಆಯಾಸವಾಗುತ್ತದೆ,ಕೆಲವರಿಗೆ ಕಾಲು ಬೊಬ್ಬೆ ಬರುತ್ತದೆ. ಆದರೆ ದಾರಿಯುದ್ದಕ್ಕೂ ಹಾಡು ಭಕ್ತಿಗೀತೆಗಳ ಮೂಲಕ ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುವುದರಿಂದ ನೋವುಗಳನ್ನು ಮರೆಸುತ್ತದೆ. ಮಾರ್ಗದುದ್ದಕ್ಕೂ ಯಾತ್ರಿಗಳಿಗೆ ತಿಮ್ಮಪ್ಪನ ಭಕ್ತರು ನೀರು, ಹಾಲು ಕೋಸಂಬರಿ,ಚಹ ಬಿಸ್ಕೆಟ್ ನೀಡಿ   ನಮಸ್ಕರಿಸಿ ಹೋಗುತ್ತಿರುವುದು ನಮಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ ಎಂದು ಕಿರಿಯ ಪಾದಯಾತ್ರಿ ರಾಹುಲ್ ಅನುಭವವನ್ನು ತಿಳಿಸಿದರು.

 ಒಳ್ಳೆಯ ಮಳೆಯಾಗಿ ಬೆಳೆಯಾಗಲಿ ಎಂದು ಪಾದಯಾತ್ರೆಯಲ್ಲಿ ಶ್ರದ್ದಾ ಭಕ್ತಿಯಿಂದ  ಬಾಗವಹಿಸುತ್ತಿದ್ದೇನೆ ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬಿರಿದೆ. ರಕ್ತ ಶುದ್ದಿಯಾಗುತ್ತದೆ. ದೇಹ ಹಗುರವಾಗಿರುತ್ತದೆ ಎಂದು ನಂಜು0ಡಪ್ಪ ಹೇಳುತ್ತಾರೆ.


Comments