ಬೂದಿಗೆರೆಯ ಶ್ರೀ ಕೃಷ್ಣ ಧರ್ಮರಾಯ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಮತ್ತು ಯಜ್ಞ ಸೇನಾ ಕರಗ ಸೇವಾ ಟ್ರಸ್ಟ್ ನ ನೂತನ ವರ್ಷ 2024 ರ ಕ್ಯಾಲೆಂಡರ್ ಬಿಡುಗಡೆ*
ದೇವನಹಳ್ಳಿ ವಿಧಾಸಭಾ ಕ್ಷೇತ್ರದ ಶಾಸಕರು, ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಕೆ. ಎಚ್. ಮುನಿಯಪ್ಪನವರ ಅಮೃತ ಹಸ್ತಗಳಿಂದ ಕ್ಯಾಲೆಂಡರ್ ಬಿಡುಗಡೆ ಅದ್ದೂರಿಯಾಗಿ ನೆರವೇರಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಕೆ ಎಚ್. ಮುನಿಯಪ್ಪನವರು ನಾಡಿನದ್ಯಂತ ಎಲ್ಲಾ ಜನತಗೆ ಹೊಸ ವರ್ಷದ ಶುಭಾಶಯವನ್ನ ಕೋರಿದರು. ವನ್ನಿ ಕುಲ ಕ್ಷತ್ರಿಯರು ಕೊಟ್ಟ ಮಾತು ತಪ್ಪುವುವವರಲ್ಲ ಇದು ಅಂದಿನ ಕಾಲದಿಂದ ಬಂದಂತ ಪ್ರತಿತಿ ಹಾಗಾಗಿ ಕ್ಷತ್ರಿಯ ಸಮಾಜದ ಮೇಲೆ ಪ್ರೀತಿ ಕಾಳಜಿ ಸದಾ ಇರುತ್ತೆ ಎಂದರು.
ಇದೆ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರು ಮಂದಾರ ಮುನಿರಾಜು, ಗೌಡರು ಪಿ. ಸೀನಪ್ಪ, ಯಜಮಾನರು ತಿಮ್ಮರಾಯಪ್ಪನವರು, ಸಹಕಾರ ರತ್ನ ಪುರಸ್ಕೃತರಾದ ಬಾಲೆಪುರ ಲಕ್ಷ್ಮಿ ನಾರಾಯಣಪ್ಪನವರು, ವಿಜಯಪುರ ರಾಮಚಂದ್ರಪ್ಪನವರು, ರಾಜ್ಯ ಕೆ ಪಿ ಸಿ ಸಿ ಪ್ರಚಾರ ಸಮಿತಿ ಸಂಯೋಜಕರಾದ L. A.ಮಂಜುನಾಥ್ ರವರು, ಜಿಲ್ಲಾಪಂಚಾಯತಿ ಸದಸ್ಯರಾದ ಲಕ್ಷ್ಮಣ್ ರವರು, ಬೂದಿಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು,ಹಾಲಿ ಸದಸ್ಯರು, ಗ್ರಾಮದ ಮುಖಂಡರು, ಹಾಗೂ ಯುವಕರು ಭಾಗಿಯಾಗಿ ಶುಭಕೋರಿದರು.
Comments