ಮನುಷ್ಯ ಮನುಷ್ಯನನ್ನ ಮನುಷ್ಯನಾಗಿ ನೋಡ್ಬೇಕು:- KPCC ಮಾಧ್ಯಮ ವಕ್ತಾರ:- ಹರೀಶ್ ಬಾಬು..

 

ಕುಟುಂಬ ರಾಜಕಾರಣದ ಬಗ್ಗೆ ಬಿಜಿಪಿ ಪಕ್ಷ ಡಬಲ್ಗೇಮ್ ಮಾಡ್ತಿದೆ.. ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬ ದೇಶಕ್ಕಾಗಿ ತಮ್ಮ‌ ಪ್ರಾಣ ಬಲಿದಾನ ಮಾಡಿದ್ದಾರೆ.. ಶ್ರೀಮತಿ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕೆ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ.. ಆದರೆ ಬಿಜೆಪಿ ಪಕ್ಷ ಕುಟುಂಬ ರಾಜಕಾರಣ ಮಾಡ್ತಿದೆ.. ಹಾಗೆಯೇ ಬಿಜೆಪಿಗೆ ಮುಸ್ಲಿಂರನ್ನ ಕಂಡ್ರೆ ಆಗಲ್ಲ.. ಕ್ರಿಶ್ಚಿಯನ್ಸ್ ನ ಕ್ರಿಮಿನಲ್ಸ್ ತರ ನೋಡುತ್ತೆ.. ಇನ್ನು ದಲಿತರನ್ನು ದರಿದ್ರರು ಅಂತಾರೆ ಬಿಜೆಪಿಯವರು.. ಹಾಗಾಗಿ ಅಂಬೇಡ್ಕರ್ ರವರು ಬರೆದ ಸಂವಿಧಾನದಿಂದ ನಾವು ದಲಿತರು ಉಸಿರಾಡಲು ಸಾದ್ಯವಾಗ್ತಿದೆ ಎಂದು ಬೆಂಗಳೂರು ಕೇಂದ್ರ ಕೆಪಿಸಿಸಿ ಎಸ್.ಸಿ.ವಿಭಾಗದ ಮಾಧ್ಯಮ ವಕ್ತಾರ ಹರೀಶ್ ಬಾಬು ರವರು ಬಿಜೆಪಿ ಪಕ್ಷದ ಡಬಲ್ ಗೇಮ್ ಬಗ್ಗೆ ಮಾತಲ್ಲೆ ದಂಡಿಸಿದರು.. ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಹೆಣ್ಣೂರು ಬ್ಲಾಕ್ ನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಯಿತು.. 

ಈ ಗೋಷ್ಠಿಯಲ್ಲಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಹೆಣ್ಣೂರು ಬ್ಲಾಕ್ ಅಧ್ಯಕ್ಷ ಹೆಚ್ಎ.ಪುಲಕೇಶಿ, ಬೆಂಗಳೂರು ‌ಕೇಂದ್ರ ಎಸ್.ಸಿ.ಸೆಲ್ ಮಾಧ್ಯಮ ‌ಉಸ್ತುವಾರಿ ನೆಹಮಿಯಾ ರಾಜು ಸೇರಿದಂತೆ ಹೆಣ್ಣೂರು ಗ್ರಾಮದ ದಲಿತ ಮುಖಂಡ ಹೆಚ್.ಸಿ.ಗಂಗಾಧರ್ ರವರು ಮಾಧ್ಯಗೋಷ್ಠಿಯಲ್ಲಿ ಭಾಗಿಯಾಗಿದ್ದರು..

Comments