BSF ರೈಸಿಂಗ್ ಡೇ, ಬೆಂಗಳೂರಿನ ಯಲಹಂಕ ಸಮೀಪದ BSF CEDCO ಕ್ಯಾಂಪಸ್ ನಲ್ಲಿ ಆಚರಣೆ.....!!

 


ಯಲಹಂಕ:

ಭಾರತದಲ್ಲಿ ಗಡಿ ಭದ್ರತಾ ಪಡೆಯನ್ನು ಗೌರವಿಸಲು ಪ್ರತಿ ಡಿಸೆಂಬರ್ 1 ರಂದು BSF ರೈಸಿಂಗ್ ಡೇ ಅನ್ನು ಆಚರಿಸಲಾಗುತ್ತದೆ. 1965 ರಲ್ಲಿ ರೂಪುಗೊಂಡ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ಭಾರತದ ಗಡಿಗಳನ್ನು ಭದ್ರಪಡಿಸುವಲ್ಲಿ BSF ನ ಪ್ರಾಥಮಿಕ ಪಾತ್ರವಿದೆ. 



BSF ರೈಸಿಂಗ್ ಡೇ ಅನ್ನು ಮೊದಲು 1 ನೇ ಡಿಸೆಂಬರ್ 1965 ರಂದು ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ BSF ರೈಸಿಂಗ್ ಡೇ ಯನ್ನು ಬೆಂಗಳೂರಿನ ಯಲಹಂಕ ಸಮೀಪದ BSF  CEDCO ಕ್ಯಾಂಪಸ್ ನಲ್ಲಿ ಆಚರಣೆ ಮಾಡಲಾಯಿತು. 


ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜನೆ ಮಾಡಲಾಯಿತು ಜೊತೆಗೆ ಬಿ ಎಸ್ ಎಫ್ ಸೇಡ್ಕೋ ಕ್ಯಾಂಪಸ್ ಅನೇಕ ಅಧಿಕಾರಿಗಳು ಭಾಗಿ ಆಗಿದ್ದರು. ಗಡಿಯಲ್ಲಿ ಪ್ರದೇಶದಲ್ಲಿ ಗಡಿ ಭಾಗದ ಜನರ ಶಾಂತಿ ಕಾಪಾಡುವುದು , ಗಡಿಯಲ್ಲಿ ಅಕ್ರಮ ಒಳ ನುಸುಳಿಕೆಯನ್ನು ತಡೆಯುವುದು , ಅಕ್ರಮ ಕಳ್ಳ ಸಾಗಾಣಿಕೆ ತಡೆಯುವ ಜೊತೆಗೆ ಅನೇಕ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಬಿ ಎಸ್ ಎಫ್ ನಾ ಪಾತ್ರವಿದೆ ಇಂತಹ ಬಿ ಎಸ್ ಎಫ್ ಸ್ಥಾಪನೆಗೊಂಡ ದಿನವನ್ನು ರೈಸಿಂಗ್ ಡೇ ಎಂದು ಆಚರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.




Comments