ದೊಡ್ಡಬಳ್ಳಾಪುರದ ರೈತರಿಗೆ ಸಂಕಷ್ಟದ ಮೇಲೆ ಸಂಕಷ್ಟ..... ಏನು ಅಂತೀರಾ ಈ ಸುದ್ದಿ ನೋಡಿ.....!!!




 ಧಗ ಧಗ ಉರಿದು ಸುಟ್ಟು ಭಸ್ಮವಾದ ಹುಲ್ಲಿನ ಬಣವೆ, ಸುಮಾರು 70 ಸಾವಿರ ಮೌಲ್ಯದ 270 ಹುಲ್ಲಿನ ಹೊರೆ ಬೆಂಕಿಗಾಹುತಿ ಸ್ಥಳದಲ್ಲಿ ಪೆಟ್ರೋಲ್ ತಂದಿದ್ದ ಬಾಟಲ್ ಪತ್ತೆ.!


ಕಿಡಿಗೇಡಿಗಳ ಕೃತ್ಯಕ್ಕೆ ಸುಮಾರು 70 ಸಾವಿರ ಮೌಲ್ಯದ 270 ಹುಲ್ಲಿನ ಹೊರೆಗಳ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಗಡ್ಡಂಬಚ್ಚಹಳ್ಳಿ ಗ್ರಾಮದಲ್ಲಿ ರೈತ ಮಂಜುನಾಥ್ ಅವರಿಗೆ ಸೇರಿದ ಹುಲ್ಲಿನ ಬಣವೆ ಕಳೆದ ಎರಡು ದಿನಗಳ‌ ಹಿಂದೆ ನಡೆದಿದೆ.‌ ಘಟನೆ  ತಡವಾಗಿ ಬೆಳಕಿಗೆ ಬಂದಿದೆ. 


ಸ್ಥಳಕ್ಕೆ ಅಗ್ನಿ ಶಾಮಕ‌ ಸಿಬ್ಬಂದಿ ದೌಡಾಯಿಸಿ ಬೆಂಕಿ‌‌‌ನಂದಿಸುವ ಪ್ರಯತ್ನ‌ ಮಾಡಿದ್ದರೂ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.


ರೈತ ಮಂಜುನಾಥ್ ಅವರಿಗೆ ಸೇರಿದ ಹುಲ್ಲಿನ ಬಣವೆ ಸುಟ್ಟು ಕರಕಲಾಗಿದೆ. ಜಾನುವಾರುಗಳಿಗೆ ಶೇಖರಿಸಿದ್ದ ಹುಲ್ಲಿನ ಬಣವೆ ಕಳೆದುಕೊಂಡ‌ ರೈತ ಕಂಗಾಲಾಗಿದ್ದಾನೆ. ಸ್ಥಳದಲ್ಲಿ ಪೆಟ್ರೋಲ್ ತಂದಿದ್ದ ಬಾಟಲ್ ಪತ್ತೆ ಕೂಡ ಪತ್ತೆಯಾಗಿದೆ. ಈ ಹಿನ್ನೆಲೆ ಯಾರೋ ಕಿಡಿಗೇಡಿಗಳು ಬೇಕಂತಲೇ ಹುಲ್ಲಿನ ಬಣವೆಗೆ ಕಿಡಿ‌ಹಚ್ಚಿದ್ದಾರೆ ಎಂಬ ಶಂಕೆ‌ ವ್ಯಕ್ತವಾಗಿದೆ.


ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇತ್ತೀಚಿಗೆ  ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಕುಂಟೆ ಗ್ರಾಮದಲ್ಲಿ ಬಡತನದಲ್ಲೂ ಲಕ್ಷಾಂತರ ರೂ. ವ್ಯಯ ಮಾಡಿ ರೇಷ್ಮೆ ಗೂಡು ಸಾಕಿದ್ದ‌ ಬಡ ಕುಟುಂಬ. ಇನ್ನೇನು ಒಂದೆರೆಡು ದಿನದಲ್ಲಿ ರೇಷ್ಮೆ ಗೂಡನ್ನ ಮಾರುಕಟ್ಟೆಗೆ ಹಾಕುವಷ್ಟರಲ್ಲಿ, ರಾತ್ರೋರಾತ್ರಿ ರೇಷ್ಮೆ ಗೂಡು ಇದ್ದ ಮನೆ ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಸಂಪೂರ್ಣ ಭಸ್ಮವಾಗಿತ್ತು. ಅದೇರೀತಿ ಕಾಡುಕುಂಟೆ ಗ್ರಾಮದ ಘಟನೆ ಮಾಸುವ ಮುನ್ನವೇ ಕುಕ್ಕಲಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಸುಮಾರು 8-10 ಲೋಡ್ ಜೋಳದ‌ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಸುಟ್ಟು ಕರಕಲಾಗಿದೆ. ತಾಲೂಕಿನಲ್ಲಿ ಇಂತಹ ಕುಕೃತ್ಯಗಳು ಮರುಕಳಿಸುತ್ತಿವೆ‌. 

ಸ್ವಾವಲಂಬಿ ಜೀವನ ಮಾಡಲು ಸಹೋದರರು ರೇಷ್ಮೆ ಹುಳು ಸಾಕಣಿಕೆ ಮಾಡುತ್ತಿದ್ದರು, ಮರುದಿನ ರೇಷ್ಮೆಗೂಡುಗಳನ್ನ ಮಾರಾಟ ಕೇಂದ್ರಕ್ಕೆ ಹಾಕಿ ನಾಕಾಸು ಸಂಪಾದನೆ ಮಾಡುತ್ತಿದ್ದರು, ಅದ್ಯಾರೋ ಹೊಟ್ಟೆಕಿಚ್ಚು ಸಹೋದರರ ಕನಸ್ಸುಗಳಿಗೆ ಬೆಂಕಿ ಇಟ್ಟಿದ್ದಾರೆ.


ದೊಡ್ಡಬಳ್ಳಾಪುರ ತಾಲೂಕಿನ ಕಾಡುಕುಂಟೆ ಗ್ರಾಮದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಬೆಳಗ್ಗೆ ರೇಷ್ಮೆ ಹುಳು ಸಾಕಣಿಕೆ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದೆ, ಜಯಲಕ್ಷಮ್ಮನವರ ಮಕ್ಕಳಾದ ಸುದರ್ಶನ್ ಮತ್ತು ಮೋಹನ್ ರೇಷ್ಮೆ ಹುಳು ಸಾಕಣಿಕೆ ಆರಂಭಿಸಿದ್ದರು, ಹುಳು ಸಾಕಣಿಕೆ ಮನೆ ಕಟ್ಟಲು 6 ಲಕ್ಷ ಖರ್ಚು ಮಾಡಿದ್ರು, ಸಾಕರಣಿಗೆ ಬೇಕಾದ ವಸ್ತುಗಳಿಗೆ 3 ಲಕ್ಷ ಖರ್ಚು ಮಾಡಿದ್ರು, 60 ಚಂದ್ರಿಕೆಗಳಿಗೆ ಹುಳುಗಳನ್ನ ಬಿಟ್ಟಿದ್ರು, ಹುಳುಗಳು ಗೂಡುಗಳನ್ನ ಕಟ್ಟಿದ್ವು, ಮರುದಿನ ಚಂದ್ರಿಕೆಯಿಂದ ಗೂಡುಗಳನ್ನ ತೆಗೆದು ಮಾರುಕಟ್ಟೆಗೆ ಹಾಕಲು ಸಹೋದರರು ತಿರ್ಮಾನಿಸಿದರು, ಅಷ್ಟೇರಲ್ಲಿ ಕಿಡಿಗೇಡಿಗಳು ರೇಷ್ಮೆ ಹುಳು ಸಾಕಣಿಕೆ ಮನೆಗೆ ಬೆಂಕಿ ಇಟ್ಟಿದ್ದಾರೆ.


ಇಂತಹ ಕೃತ್ಯಗಳು ತಾಲೂಕಿನಲ್ಲಿ ಪದೇ ಪದೇ ಮರುಕಳಿಸುತ್ತಿವೆ. ಇದರಿಂದ ರೈತರು ಸಾಕಷ್ಟು‌ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಭಾಗಿಯಾಗುತ್ತಿರುವ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments