ದೇಶಕಂಡ ಶ್ರೇಷ್ಠ ಗಣಿತಜ್ಞರಲ್ಲಿ ಶ್ರೀನಿವಾಸ ರಾಮಾನುಜನ್ ಒಬ್ಬರು.. ರಾಮಾನುಜನ್ ರ ಸಾಧನೆ, ಗಣಿತ ಮತ್ತು ವಿಜ್ಞಾನಕ್ಷೇತ್ರಕ್ಕೆ ಅವರ ಅಪಾರ ಕೊಡುಗೆ ಪರಿಗಣಿಸಿ ಕೇಂದ್ರ ಸರ್ಕಾರ ಡಿಸೆಂಬರ್ 22ನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸುತ್ತಿದೆ.. ರಾಮಾನುಜನ್ ಹುಟ್ಟಿದ ಡಿಸೆಂಬರ್ 22ರ ಅಂಗವಾಗಿ ಯಲಹಂಕದ ವಿಶ್ವವಿದ್ಯಾಪೀಠ ಶಾಲೆಯಲ್ಲಿ ಗಣಿತಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು.. ಗಣಿತಮೇಳದಲ್ಲಿ ದೇಶದ ಪ್ರಸಿದ್ದ ಗಣಿತಜ್ಞರು, ಮೇದಾವಿಗಳು ಭಾಗವಹಿಸಿ ಸಾವಿರಾರು ವಿದ್ಯಾರ್ಥಿಗಳ ಜೊತೆ ಕನ್ನಡದಲ್ಲಿ ಗಣಿತ ಹರಟೆ ನಡೆಸಿದರು.. ಗಣಿತವನ್ನು ಹೇಗೆ ಸುಲಭವಾಗಿ ಮಕ್ಕಳಿಗೆ ತಲುಪಿಸುವುದು..ಈ ಬಗ್ಗೆ ಗಣಿತಮೇಳದ ಮಹತ್ವದ ಕುರಿತು ಯಲಹಂಕದ ವಿಶ್ವವಿದ್ಯಾಪೀಠ ಶಾಲೆಯಲ್ಲಿ ಐದುದಿನದ ಗಣಿತಮೇಳ ಆ ಯೋಜನೆ ಮಾಡಲಾಗಿತು. ಹತ್ತುಸಾವಿರಕ್ಕು ಹೆಚ್ಚು ಜನ ವೀಕ್ಷಿಸಿದ ಗಣಿತಮೇಳ ಯಶಸ್ವಿಯಾಗಿ ನಡೆಯಿತು.
ವಿಶ್ವವಿದ್ಯಾಪೀಠ ಶಾಲೆಯ ಸಂಸ್ಥಾಪಕರಾದ ಸುಶೀಲಾ ಸಂತೋಷ್ ಮಾತನಾಡಿ 5 ದಿನ ನಡೆದ ಗಣಿತ ಮೇಳದಲ್ಲಿ ಮಕ್ಕಳು ಸಂತಸದಿಂದ ಎಲ್ಲಾ ವಿಚಾರವನ್ನು ತಿಳಿಸಿ ಕೊಟ್ಟಿದ್ದಾರೆ ಸರ್ಕಾರಿ ಶಾಲಾ ಮಕ್ಕಳು ಹರಟೆಯಲ್ಲಿ ಭಾಗಿಯಾಗಿದ್ದರು ಮತ್ತು ಖಾಸಗಿ ಶಾಲೆಯ ಮಕ್ಕಳು ಪೋಷಕರು ಸಹ ಭಾಗವಹಿಸಿದ್ದರು ಏಳು ಜನ ಪದ್ಮ ಶ್ರೀ ಪ್ರಶಸ್ತಿ ಪಡೆದ ವಿಜ್ಞಾನಿಗಳು ಕೂಡ ಬಂದು ನಮ್ಮ ಶಾಲೆಯ ಅಳತೆ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು ಗಣಿತ ವೇಣುವನ್ನು ನಾವು ತುಂಬಾ ಖುಷಿಯಿಂದ ಮಾಡಿದ್ದೇವೆ ನಾವು ಪ್ರತಿ ವರ್ಷವೂ ಗಣಿತ ಮೇಳವನ್ನು ಆಚರಣೆ ಮಾಡುತ್ತೇವೆ ಮಾಡುವ ವರ್ಷವಲ್ಲ ಒಂದೊಂದು ಹೊಸತನವನ್ನು ಹುಡುಕುತ್ತೇವೆ. ನಾವು ಯಾವುದೇ ಪ್ರಯತ್ನವನ್ನು ಪಡದೆ ಇದ್ದಲ್ಲಿ ನಾವು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ನಮ್ಮ ಜೀವನದಲ್ಲಿ ತಪ್ಪು ಮಾಡಿ ಸರಿಪಡಿಸಿಕೊಳ್ಳಬೇಕು ಎಂದು ಸಂತಸ ವ್ಯಕ್ತಪಡಿಸಿದರು
Comments