ಯಲಹಂಕದ ಅಟ್ಟೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ,;ಮಾಜಿ ಪ್ರಧಾನಿ ದಿ.ವಾಜಪೇಯಿ ರವರ ಸ್ಮರಣಾರ್ಥ ಆರೋಗ್ಯ ಶಿಬಿರ..!!
ಆಧುನಿಕತೆಯ ಬರಾಟೆಗೆ ಸಿಲಿಕಿದ ಈಗಿನ ಜನ ರೋಗ ನಿರೋಧಕ ಶಕ್ತಿ ಕಳೆದುಕೊಳ್ತಿದ್ದಾರೆ..ಕರೋನಾ ಬಂದ ನಂತರವಂತೂ ಜನ ಮತ್ತು ಸಂಘ ಸಂಸ್ಥೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿವೆ..ಯಲಹಂಕದ ವಿವಿಧ ಸಂಘಸಂಸ್ಥೆಗಳು ಮಾಜಿ ಪ್ರಧಾನಿ ವಾಜಪೇಯಿರವರ ಸ್ಮರಣಾರ್ಥ ನಾಲ್ಕು ದಿನಗ ಬೃಹತ್ ಆರೋಗ್ಯ ಶಿವಿರವನ್ನು ಏರ್ಪಡಿಸಿ ಸಾರ್ಥಕ ಕೆಲಸಕ್ಕೆ ಮುಂದಾಗಿವೆ..
ಬೆಂಗಳೂರು ನಗರ ಜಿಲ್ಲೆ ಯಲಹಂಕದ ರೋಟರಿಕ್ಲಬ್, ವಿಶ್ವವಾಣಿ ಫೌಂಡೇಶನ್ ಮತಗತು ಅಟ್ಟೂರು ವರ್ತಕರ ಸಂಘದ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ..ಡಿಸೆಂಬರ್ 25ರ ಮಾಜಿ ಪ್ರಧಾನಿ ವಾಜಪೇಯಿ ರವರ ಹುಟ್ಟು ಹಬ್ಬದ ಸ್ಮರಣಾರ್ಥ ನಾಲ್ಕು ದಿನಗಳ ಆರೊಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ..
ಯಲಹಂಕದ ಅಟ್ಟೂರಿನ ಸಮೂದಾಯ ಭವನದಲ್ಲಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಮೊದಲ ದಿನ 350 ಕ್ಕು ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. .ಮುಖ್ಯವಾಗಿ ಮಹಿಳೆಯರು ತಮ್ಮ ವಿವಿಧ ಕಾಯಿಲೆಗಳಿಗೆ ಉಚಿತ ಆರೋಗ್ಯ ತಪಾಸಣೆ ಪಡೆದುಕೊಂಡರು..
ಯಲಹಂಕದ ರೋಟರಾಕ್ಟ್ ಕ್ಲಬ್, ಬಿಎಂಎಸ್, ದೀಪಾ ಪಾಲಿಕ್ಲಿನಿಕ್ ಮತ್ತು ಲ್ಯಾಬ್, ವಿದ್ಯಾಸಾಗರ್ ಶಾಲೆ, ದಕ್ಷಿಣ ಕನ್ನಡ ಸಾಂಸ್ಕೃತಿಕ ಸಂಘ, ಸಿರಿಸಮೃದ್ಧಿ ಗೋಲ್ಡ್ ಪ್ಯಾಲೇಸ್, ಕಂಪ್ಯಾನಿಯೋ ಮತ್ತು ಯಲಹಂಕ ನಗರ ಮಂಡಲ ವೈದ್ಯಕೀಯ ಪ್ರಕೋಷ್ಠ ಇವರ ಸಹಯೋಗದೊಂದಿಗೆ ನಾಲ್ಕು ದಿನಗಳ ಉಚಿತ ಆರೋಗ್ಯ ಶಿಬಿರ ನಡೆಯುತ್ತಿದೆ..ನೆನ್ನೆ ಬಿಪಿ, ಶುಗರ್, ನೆಗಡಿ, ಕೆಮ್ಮು, ಜ್ವರ, ಇಸಿಜಿ, ಶ್ವಾಸಕೋಶ, ಹೃದಯ, ಸ್ತ್ರೀರೋಗ, ಮಕ್ಕಳ ತಪಾಸಣೆ ನಡೆಸಲಾಯ್ತು.. ಇನ್ನು ಎರಡನೇ ದಿನವಾದ ಇಂದು ಕಣ್ಣು, ಹೃದಯ, ನರರೋಗ, ಮೂತ್ರಕೋಶ ಕಾಯಿಲೆ, ವಾಕ್ ಮತ್ತು ಶ್ರವಣ, ಕೀಲು ಮತ್ತು ಮೂಳೆ, ಚರ್ಮರೋಗಗಳಿಗೆ ಚಿಕಿತ್ಸೆ ನೀಡಲಾಯ್ತು.. ಮೊದಲ ದಿನ 350ಕ್ಕು ಹೆಚ್ಚು ಜನ ಚಿಕಿತ್ಸೆ ಪಡೆದರೆ, ಇಂದು ಡಿಸೆಂಬರ್ 26ನೇ ದಿನ 300ಜನ ಫಲಾನುಭವಿಗಳು ಆರೋಗ್ಯ ಶಿಬಿರದ ಸೌಲಭ್ಯ ಪಡೆದುಕೊಂಡರು..
ನಾಲ್ಕು ದಿನಗಳ ಕಾಲ ಯಲಹಂಕ ಅಟ್ಟೂರಿನ ಕಾಶಿವಿಶ್ವನಾಥ ದೇವಸ್ಥಾನ ಸಮೀಪದ ಸಮೂದಾಯ ಭವನದಲ್ಲಿ ಈ ನಡೆಯುತ್ತಿದೆ.. ಸದ್ಯ ಎರಡು ದಿನ ಪೂರೈಸಿರುವ ಉಚಿತ ಆರೋಗ್ಯ ಶಿಬಿರ ಇನ್ನು ಎರಡು ದಿನಗಳ ಕಾಲ ಅಂದರೆ ಡಿಸೆಂಬರ್ 28ರವರೆಗೂ ನಡೆಯಲಿದೆ.. ಚಿಕಿತ್ಸೆ ಪಡೆಯಲಿಚ್ಛಿಸುವವರು ಉಚಿತ ಆರೋಗ್ಯ ಶಿಬಿರದ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳಿ..
ರೋಟರಿ ಬೆಂಗಳೂರು ಯಲಹಂಕ, ವಿಶ್ವವಾಣಿ ಫೌಂಡೇಶನ್ ಹಾಗೂ ಅಟ್ಟೂರು ವರ್ತಕರ ಸಂಘ.
ಇವರುಗಳ ಸಂಯುಕ್ತ ಆಶ್ರಯದಲ್ಲಿ......
ರೋಟರಾಕ್ಸ್ ಕ್ಲಬ್ - ಬಿ.ಎಂ.ಎಸ್. ಯಲಹಂಕ, ದೀಪಾ ಪಾಲಿಕ್ಲಿನಿಕ್ & ಲ್ಯಾಬ್ ಯಲಹಂಕ, ಶ್ರೀ ವಿದ್ಯಾಸಾಗರ್ ಶಾಲೆ ಅಟ್ಟೂರು, ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ, ಕಂಪಾನಿಯೋ ಬೆಂಗಳೂರು, ಧೀ ಕಾನ್ಸೆಪ್ಟ್, ಸಹಕಾರನಗರ ಎಸ್.ಡಿ.ಎಂ. ಸ್ಟೀಲ್ ಟ್ರೇಡರ್ಸ್ಯಲಹಂಕ ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೆಸ್ ಯಲಹಂಕ, ಯಲಹಂಕ ನಗರ ಮಂಡಲ ವೈದ್ಯಕೀಯ ಪ್ರಕೋಷ್ಠ
Comments