ಜಿಲ್ಲಾಧಿಕಾರಿ ಮತ್ತು ರೈತಸಂಘದ ಮುಖಂಡರ ಸಭೆ..ಸರ್ಕಾರಿ ಜಮೀನುಗಳ ಮೇಲೆ ಭೂಗಳ್ಳರ ಕಣ್ಣು......!!


ಬೆಂಗಳೂರು ನಗರ ಯಲಹಂಕ ತಾಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದಯಾನಂದ್ ರವರ ಸಮ್ಮುಖದಲ್ಲಿ ರೈತರ ಸಭೆ ಯಲಂಕ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು


ಜಿಲ್ಲಾ ದಂಡಾಧಿಕಾರಿಯೊಂದಿಗೆ ತಾಲೂಕಿನ ರೈತರು ತಮ್ಮ ಆಹಾವಾಲುಗಳೊಂದಿಗೆ ಚರ್ಚೆ ನಡೆಸಿದ್ದರು. ಯಲಹಂಕ ವ್ಯಾಪ್ತಿಯ ಸರ್ಕಾರಿ ಜಮೀನುಗಳ ಮೇಲೆ ಭೂಗಳ್ಳರ ಕಣ್ಣು ಬಿಡುತ್ತಿದೆ ಎಂದು ರೈತರು ಆರೋಪಿಸಿದ್ರು..

ಕೆರೆ, ಕುಂಟೆ ,ಸ್ಮಶಾನ ,ದೇವಾಲಯ ಮಾನ್ಯದ ಜಮೀನುಗಳನ್ನು ಬಿಡುತ್ತಿಲ್ಲ ಎಂದು ಆರೋಪಿಸಿದ್ರು...


ಕಂದಾಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸರ್ವೇ ಕೆಲಸ ತುಂಬಾ ತಡವಾಗ್ತಿದೆ ದುಡ್ಡು ಕೊಟ್ಟವರ ಪರ ಕೆಲಸ ಮಾಡುತ್ತಾರೆ ದಾಖಲೆ ಸರಿಯಿಲ್ಲದಿದ್ದರೂ ತಪ್ಪು ದಾಖಲೆ ಸೃಷ್ಟಿಸುತ್ತಾರೆ ಎಂದು ಬಿ.ಜಿ.ನಂಜುಂಡಪ್ಪ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ಆರೋಪಿಸಿದ್ರು...



ಬಿಡಿಎ ಶಿವರಾಮ ಕೊರಂಟೈನ್ ಬಡಾವಣೆ ಹೆಸರಲ್ಲಿ ರೈತರ ಸಾವಿರಾರು ಎಕರೆ ಜಮೀನನ್ನ ಸ್ವಾಧೀನ ಪಡಿಸಿಕೊಂಡಿದೆ ಹೈನುಗಾರಿಕೆನೇ ಮುಖ್ಯ ಕಸುಬು ಮಾಡಿಕೊಂಡಿದ್ದ ರೈತರ ಜಾನುವಾರುಗಳಿಗೆ ಮೇವಿಲ್ಲ ಪೇಪರ್ ತಿನ್ನುವ ತಿಥಿ ನಿರ್ಮಾಣವಾಗಿದೆ ಎಂದು ರೈತರು ಅಳಲನ್ನು ತೋಡಿಕೊಂಡರು




ರೈತರ ಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಹಾಗೂ ಜಮೀನು ಮಂಜೂರಾದರೆ ಹಕ್ಕು ಪತ್ರ ಸಿಗಲ್ಲ ಎಂದು ತಿಳಿಸಿದರು...



ಹದ್ದುಬಸ್ತು ಪೋಡಿ ಹೀಗೇ ರೈತರಿಗೆ ನಾನಾ ಸಮಸ್ಯೆಗಳು ಈ ರೀತಿಯ ಸಮಸ್ಯೆಗಳಲ್ಲಿ ಅಧಿಕಾರಿಗಳು ರೈತರ ಗೆ ಸ್ಪಂದಿಸಬೇಕು ಎಂದು ರೈತರು ಮನವಿ ಮಾಡಿಕೊಂಡರು...




ಯಲಹಂಕ ಪೊಲೀಸ್ ಸ್ಟೇಷನ್ ನಿಂದ ರೈಲ್ವೆ ಫ್ಯಾಕ್ಟರಿ ಅವರಿಗೆ ಮೇಲ್ ಸೇತುವೆ ಕೆಲಸ ಸಾಗುತ್ತಿದ್ದು ಯಲಹಂಕ ಎನ್ಇಎಸ್ ನಲ್ಲಿ ಪಾದಚರಿಗಳಿಗೆ ಯಾವುದೇ ವ್ಯವಸ್ಥೆಯನ್ನು ಸರಿಯಾಗಿಲ್ಲ ಎಂದು ರೈತರು ಆರೋಪ ಮಾಡಿ ಒಬ್ಬ ಪೊಲೀಸ್ ಮ್ಯಾನ್ ನಿಯೋಜನೆ ಮಾಡಬೇಕೆಂದು ಮನವಿ ಮಾಡಿದರು...   



ಡಿ.ಸಿ ಜೊತೆ ತಹಶೀಲ್ದಾರ್ ಅನಿಲ್ ಕುಮಾರ್ ಹಾಗೂ ಇ.ಓ ಉಪಸ್ಥಿತಿ....

Comments