ರಾಜ್ಯದ ಮೊಟ್ಟಮೊದಲ ಗಣಿತಮೇಳ .....ವಿಶ್ವವಿದ್ಯಾಪೀಠ ಶಾಲೆಯ‌ ಕ್ಯಾಂಪಸ್ ನ‌ ಗಣಿತಮೇಳಕ್ಕೆ ಚಾಲನೆ....!

ಯಲಹಂಕ: ಕೃಷಿಮೇಳ, ಹಲಸುಮೇಳ ಸೈನ್ಸ್-ಮೇಳ ‌ನೋಡಿರೊ ಜನಕ್ಕೆ ಗಣಿತಮೇಳ ತೀರಾ ಹೊಸತು.. ಇತ್ತೀಚೆಗೆ ಜ್ಞಾನಕ್ಕಿಂತ ಪದವಿಕಡೆ ವಾಲುತ್ತಿರೊ ಜನತೆಗೆ ಗಣಿತದ ಕಲಿಕೆ ಸ್ವಲ್ಪಕಷ್ಟ.. ಆದರೂ ಮನುಷ್ಯನ ಹುಟ್ಟಿನಿಂದ ಕೊನೆಯವರೆಗೂ ಗಣಿತ ನಮ್ಮ‌ಜೀವನದ ಅವಿಭಾಜ್ಯ ಅಂಗವಾಗಿದೆ.. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಗಣಿತದ ಕಲಿಕೆಯನ್ನು ಸುಲಭಗೊಳಿಸಲು ಯಲಹಂಕ ತಾಲೂಕಿನ ಹೊನ್ನೇನಹಳ್ಳಿಯ ವಿಶ್ವವಿದ್ಯಾಪೀಠ ಸಂಸ್ಥೆ ಮುಂದಾಗಿದೆ.. ದೇಶದ ಹತ್ತಾರು ರಾಜ್ಯ ಸೇರಿದಂತೆ ಬೆಂಗಳೂರು, ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿ, ದೊಡ್ಡಬಳ್ಳಾಪುರ ಕಡೆಗಳಿಂದ ಬಂದ ಸಾವಿರಾರು ಜನ ಮಕ್ಕಳು, ಪೋಷಕರು ಗಣಿತಮೇಳಕ್ಕೆ ಸಾಕ್ಷಿಯಾದರು.. ಅಷ್ಟಕ್ಕು ಗಣಿತಮೇಳದಿಂದ ಏನೆಲ್ಲಾ ಉಪಯೋಗ ಆಗುತ್ತಿದೆ ಎಂಬ ವಿಚಾರವಾಗಿ ಗಣಿತಮೇಳ ನೋಡಲು ಬಂದ ಪೋಷಕರು, ವಿದ್ಯಾರ್ಥಿಗಳು, ಮತ್ತು ಪರಿಣಿತರು ಸಂತಸ ವ್ಯಕ್ತಪಡಿಸಿದ್ದಾರೆ.. ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು ಯಲಹಂಕದ ರಾಜಾನುಕುಂಟೆ ಸಮೀಪದ ವಿಶ್ವವಿದ್ಯಾಪೀಠ ಶಾಲೆಯ‌  ಕ್ಯಾಂಪಸ್ ನ‌ ಗಣಿತಮೇಳಕ್ಕೆ ಚಾಲನೆ ನೀಡಿದರು..

Comments