ಬೆಂಗಳೂರು ಗ್ರಾ. ಜಿಲ್ಲೆ ದೇವನಹಳ್ಳಿ ತಾಲೂಕಿನ, ಬೂದಿಗೆರೆ (ಭಸ್ಮರೇಖಾಪುರಿ )ಯಲ್ಲಿ ಏಕಾದಶಿಯ ಪ್ರಯುಕ್ತ ಶ್ರೀ ಕೃಷ್ಣ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆಯನ್ನ ವನ್ನಿಕುಲದ ಕುಲಸ್ಥರು ಹಾಗೂ ಗ್ರಾಮದ ಭಕ್ತಧಿಗಳೊಂದಿಗೆ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು . ಇದೇ ಸಂದರ್ಭದಲ್ಲಿ ಕುಲದ ಗೌಡರು ಪಿ. ಸೀನಪ್ಪ,
ಯಜಮಾನರಾದ ತಿಮ್ಮರಾಯಪ್ಪ, ಗಣಾಚಾರಿ ಯರ್ರಪ್ಪ, ಶ್ರೀ ಕೃಷ್ಣ ಧರ್ಮರಾಯಸ್ವಾಮಿ ದೇವಸ್ಥಾನ ಅಭಿವೃದ್ಧಿ ಮತ್ತು ಯಜ್ಞ ಸೇನಾ ಕರಗ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಂದಾರ ಮುನಿರಾಜು ಹಾಗೆ ತಾಲ್ಲೂಕು ಉಪಾಧ್ಯಕ್ಷ ಶಿವರಾಮ್, ಹಿರಿಯರಾದ ಮುನಿಶಾಮಪ್ಪ, ಯಲ್ಲಪ್ಪ, ಗ್ರಾ. ಪ. ಸದಸ್ಯ ಎಸ್. ಮಂಜುನಾಥ್, ಗ್ರಾ. ಪ. ಸದಸ್ಯರು ರೂಪ ಶ್ರೀನಿವಾಸ್,
ಕೆ. ಮಂಜುನಾಥ್, ಮಾದೇಶ, ಆರ್.ಲೋಕೇಶ್, ಕೊಲ್ಕರಾ ಅನಿಲ್, ಶ್ರೀನಿವಾಸ್ , ವೇಣು,ಮುನಿಕೃಷ್ಣ ಹೀಗೆ ಯುವಕರು ಭಾಗಿಯಾಗಿ ನಾಡಿನ ಪ್ರತಿಯೊಬ್ಬರಿಗೂ ತಾಯಿ ದ್ರೌಪಡದಿ ಆಯಿರಾರೋಗ್ಯ ಸಕಲವನ್ನೂ ಕೊಡಲಿ ಎಂದು ಆಶೀಸಿದರು.
Comments