ಬೆಂ.ಗ್ರಾ.ಜಿಲ್ಲೆಯ ನೂತನ ಎಎಸ್‌ಪಿ ಯಾಗಿ ಕೆ ಎಸ್ ನಾಗರಾಜು ಅಧಿಕಾರ ಸ್ವೀಕಾರ..!!



ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಕೆ.ಎಸ್ ಅವರು ಶನಿವಾರ ಬೆಂಗಳೂರು ನಗರದಲ್ಲಿರುವ ಎಸ್ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.


ಈ ಹಿಂದೆ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇಲ್ಲಿಂದ ವರ್ಗಾವಣೆಗೊಂಡು ಸಂಚಾರ ಯಲಹಂಕ ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Comments