ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಮನವಿ




ಕೊಪ್ಪಳ.

ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ರೈತರಿಗೆ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರಗಾದ ಛಾಯೆಯಿಂದ ರೈತರು ಕಂಗಾಲಾಗಿದ್ದಾರೆ ಈಗಾಗಲೇ ಬೇರೆ ಭಾಗದಲ್ಲಿ ಕೆಲವು ರೈತರು ಹುಳಿ ಕಡಲೆ ಕಾಳನ್ನು ಕಟಾವಿನ ಕಾರ್ಯ ನಡೆದಿದ್ದು ಒಂದು ವಾರದೊಳಗಾಗಿ ಸರ್ಕಾರ ರೈತರಿಗೆ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಘೋಷಣೆ ಮಾಡಬೇಕು ಹುಳಿ ಕಡಲೆ ಕಾಳನ್ನು ಒಬ್ಬ ರೈತರಿಂದ 8272.ರಿಂದ.9275.ಸಾವಿರ ರೂಪಾಯಿ ಅಂತೆ  20.ರಿಂದ.25.ಕೀಂಟೋಲ್ ಪ್ರತಿ ಒಬ್ಬ ರೈತರಿಂದ ಕಡಲೆ ಕಾಳನ್ನು ಖರೀದಿಸಬೇಕೆಂದು ಒತ್ತಾಯಿಸಿದರು 




ರೈತರ ಹಕ್ಕು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ಕೋಳೂರ ಇವರ ನೇತೃತ್ವದಲ್ಲಿ ಖಂಡಿಸಿ ಕುಕನೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿರಸ್ತರರಾದ ಸುರೇಶ ಬಾಲೇಹೊಸುರ ಇವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ರೈತ ಸಂಘಟನೆಯಿಂದ ರಾಜ್ಯ ಸರ್ಕಾರಕ್ಕೆ ಈ ಮನವಿಯನ್ನು ಸಲ್ಲಿಸಲಾಯಿತು 


ಈ ಮನವಿ ಸ್ವೀಕರಿಸಿದ ಶಿರಸ್ತರರಾದ ಸುರೇಶ ಬಾಲೇಹೊಸುರ ಅವರು ರೈತ ಸಂಘದ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡುವದಾಗಿ  ಇವರು ತಿಳಿಸಿದರು



ಹೌದು ಈ ವರ್ಷ ರೈತರು ಕಡಲೆ ಕಟಾವು ಮಾಡಲು ಕೂಲಿ ಕಾರ್ಮಿಕರ ಖರ್ಚು ಇತರೇ ಖರ್ಚು ಹೆಚ್ಚಾದ್ದರಿಂದ ರೈತರಿಗೆ ಬಾಹಳ ಕಷ್ಟವಾಗಿದೆ ಅದಕ್ಕಾಗಿ ಎಲ್ಲಾ ರೈತರಿಗೆ ಅನೂಕೂಲ ಆಗುವಂತೆ ಈ ವರ್ಷ ಕಡಲೆ ಬೆಲೆಯನ್ನು ₹8275ರಿಂದ₹9275ರೂಪಾಯಿ ವರಿಗೆ ಕಡಲೆ ಬೆಂಬಲ ಬೆಲೆಗೆ ಖರೀದಿಸಲು ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಜೋತೆಗೆ ಕೆಲವು ಕಡೆ ಸೂರ್ಯಕಾಂತಿ ಬೆಂಬಲ ಬೆಲೆ ಶುರುವಾಗಿದು ಕೂಡಲೇ ಸರ್ಕಾರ ಕುಕನೂರು ಎಪಿಎಂಸಿಯಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶರಣಪ್ಪ ಮೇಟಿ.ಹನಮಂತಪ್ಪ ಕುಕನೂರು ಶಿವಾನಂದಯ್ಯ ಮುಘಂಡಮಠ.ವಿಜಯಕುಮಾರ. ಎತ್ತಿನಮನಿ.ಇತರರು ಉಪಸ್ಥಿತರಿದ್ದರು.

Comments