* ಹೊಂಬಾಳೆ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ
* 270 ಕೋಟಿ ಬಜೆಟ್ನಲ್ಲಿ ಸಲಾರ್ ಸಿನಿಮಾ ನಿರ್ಮಾಣ
* 5 ಭಾಷೆಯಲ್ಲಿ ರಿಲೀಸ್, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್
ಪ್ಯಾನ್ ಇಂಡಿಯಾದಲ್ಲಿ ಸಲಾರ್ ಸಂಭ್ರಮ ಮುಗಿಲು ಮುಟ್ಟಿದೆ. ಇಂದು ಐದು ಭಾಷೆಯಲ್ಲಿ ರಿಲೀಸ್ ಆಗಿರುವ ಸಲಾರ್ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಹೊಂಬಾಳೆ ನಿರ್ಮಾಣದ ಮತ್ತೊಂದು ಹೈ ಬಜೆಟ್ ಚಿತ್ರ ಇದಾಗಿದ್ದು, 270 ಕೋಟಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಗಣ್ಯರು ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದು, ರವಿ ಬಸ್ರೂರು ಮ್ಯೂಸಿಕ್ ಚಿತ್ರದಲ್ಲಿ ಮೋಡಿ ಮಾಡಿದೆ.
ಸಿನಿಮಾದಲ್ಲಿ ಪ್ರಭಾಸ್ ಅವರು ದೇವ ಹೆಸರಿನಲ್ಲಿ ಮೆಕ್ಯಾನಿಕ್ ಆಗಿ ಕಾಣಿಸಿಕೊಳ್ಳುತ್ತಾರೆ. ಪೃಥ್ವಿರಾಜ್ ರಾಜ ಮನ್ನಾರ್ ಆಗಿ ಅಭಿನಯಿಸಿದ್ದಾರೆ. ಸಿನಿಮಾವೆಲ್ಲ ಪ್ರಭಾಸ್ ಮತ್ತು ಪೃಥ್ವಿರಾಜ್ ಮಧ್ಯೆ ಇದೆ. ಜೊತೆಗೆ ಕೆಲ ಘಟನೆಗಳಿಂದ ಇಬ್ಬರು ದೂರವಾಗಿ ಶತ್ರುಗಳಾಗುವುದನ್ನು ನಿರ್ದೇಶಕ ಪ್ರಶಾಂತ್ ನೀಲ್ ಕಟ್ಟಿಕೊಟ್ಟಿದ್ದಾರೆ. ಇನ್ನು, ಸಲಾರ್ ಸಿನಿಮಾ ನೋಡಿದ ಸಿನಿ ಪ್ರೇಮಿಗಳಂತು ಫುಲ್ ಫಿದಾ ಆಗಿದ್ದಾರೆ.
Comments